ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪೋಷಣ್ ಅಭಿಯಾನ ಯೋಜನೆಯಡಿ ಈ ಹುದ್ದೆ ಭರ್ತಿ ನಡೆಸಲಾಗುವುದು. ಒಟ್ಟು ಐದು ಹುದ್ದೆಗಳ ನೇಮಕಾತಿ ನಡೆಸಲಾಗುವುದು. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ನೇಮಕ ನಡೆಸಲಾಗುವುದು. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆ ವಿವರ: ಪೋಷಣ್ ಅಭಿಯಾನ ಯೋಜನೆ ಅಡಿ ಪ್ರೋಜೆಕ್ಟ್ ಅಸೋಸಿಯೇಟ್ -1, ಸೆಕ್ರೆಟರಿಯೇಟ್ ಅಸಿಸ್ಟೆಂಟ್ 2, ಆಫೀಸರ್ ಮೆಸೆಂಜರ್ಸ್ 2 ಹುದ್ದೆಗಳ ಭರ್ತಿ ನಡೆಸಲಾಗುವುದು.
- ವಿದ್ಯಾರ್ಹತೆ:
- ಪ್ರಾಜೆಕ್ಟ್ ಅಸೋಸಿಯೇಟ್: ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ
- ಸೆಕ್ರೆಟರಿಯೇಟ್ ಅಸಿಸ್ಟೆಂಟ್: ಪಿಯುಸಿ
- ಆಫೀಸರ್ ಮೆಸೆಂಜರ್ಸ್: ಎಸ್ಎಸ್ಎಲ್ಸಿ
ಅನುಭವ: ಅಭ್ಯರ್ಥಿಗಳು ಸಂಬಂಧಿಸಿದ ಕ್ಷೇತ್ರದಲ್ಲಿ ಒಂದರಿಂದ ಎರಡು ವರ್ಷದ ಹುದ್ದೆ ಅನುಭವವನ್ನು ಹೊಂದಿರಬೇಕು.
ವೇತನ:
- ಪ್ರಾಜೆಕ್ಟ್ ಅಸೋಸಿಯೇಟ್ - 25,000 ರೂ.
- ಸೆಕ್ರೆಟರಿ ಅಸಿಸ್ಟಂಟ್ - 15,000 ರೂ.
- ಆಫೀಸರ್ ಮೆಸೆಂಜರ್ಸ್ - 8,000 ರೂ.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಗರಿಷ್ಠ ವಯೋಮಿತಿ 65 ವರ್ಷ ಆಗಿರಬೇಕು.
ಅರ್ಜಿ ಸಲ್ಲಿಕೆ: ಈ ಹುದ್ದೆಗೆ ಕೆಳಗಿನ ವಿಳಾಸಕ್ಕೆ ಖುದ್ದಾಗಿ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ತಮ್ಮ ಸ್ವ ವಿವರ ಮತ್ತು ಶೈಕ್ಷಣಿಕ ದಾಖಲಾತಿ ಪ್ರಮಾಣ ಪತ್ರಗಳನ್ನು ಈ ಕೆಳಗಿನ ವಿಳಾಸಕ್ಕೆ ಅಂತಿನ ದಿನಾಂಕಕ್ಕೆ ಮುಂಚೆ ತಲುಪಿಸಬೇಕು. ಈ ಹುದ್ದೆಗೆ ಯಾವುದೇ ಅರ್ಜಿ ಶುಲ್ಕ ನಿಗದಿಸಲಾಗಿದೆ.
ವಿಶೇಷ ಸೂಚನೆ: ಈ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲಾಗುವುದು. ಹುದ್ದೆ ಅವಧಿ 11 ತಿಂಗಳು ಆಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಓದಲು, ಬರೆಯಲು ಮತ್ತು ಅರ್ಥೈಸಿಕೊಳ್ಳಲು ಬರಬೇಕು.
ಅರ್ಜಿ ಸಲ್ಲಿಸುವ ವಿಳಾಸ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 1ನೇ ಮಹಡಿ, ಬಹು ಮಹಡಿ ಕಟ್ಟಡ, ಡಾ. ಅಂಬೇಡ್ಕರ್ ವೀಧಿ, ಬೆಂಗಳೂರು- 560001
ಈ ಹುದ್ದೆಗೆ ಸೆಪ್ಟೆಂಬರ್ 12ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆಪ್ಟೆಂಬರ್ 27 ಆಗಿದೆ.
ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ dwcd.karnataka.gov.in ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: ಐಡಿಬಿಐನ 600 ಜ್ಯೂನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ