ನೆಲಮಂಗಲ: ಶೈನಿಂಗ್ ಪೌಡರ್ನಿಂದ ಚಿನ್ನಾಭರಣಗಳನ್ನು ಹೊಳೆಯುವಂತೆ ಮಾಡುವುದಾಗಿ ಮಹಿಳೆಯಿಂದ 68 ಗ್ರಾಂ ಚಿನ್ನಾಭರಣವನ್ನು ಕುಕ್ಕರ್ನಲ್ಲಿ ಹಾಕಿ ಬೇಯಿಸುವಂತೆ ಹೇಳಿ ಕಳ್ಳರು ಚಿನ್ನದೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ.
ಬೆಂಗಳೂರು ಉತ್ತರ ತಾಲೂಕು ಅಂಚೇಪಾಳ್ಯದಲ್ಲಿ ಘಟನೆ ನಡೆದಿದ್ದು, ರುಕ್ಸಾನ ಪರ್ವೀನ್ ಮೋಸ ಹೋದವರು. ಮೊದಲು ರುಕ್ಸಾನ ಪರ್ವೀನ್ ಬೆಳ್ಳಿ ಉಂಗುರವನ್ನು ಪಾಲಿಶ್ ಮಾಡುವರಿಗೆ ಕೊಟ್ಟಿದ್ದಾರೆ. ಕುಕ್ಕರ್ಗೆ ಹಾಕಿ ಹೊಳೆಯುವಂತೆ ಬೆಳ್ಳಿ ಉಂಗುರ ಕೊಟ್ಟಿದ್ದಾರೆ. ಚಿನ್ನಾಭರಣ ಇದ್ದರೆ ಕೊಡಿ, ಅವನ್ನು ಪಾಲಿಶ್ ಮಾಡುವುದಾಗಿ ಹೇಳಿದ್ದಾರೆ.
ಅವರ ಮಾತು ನಂಬಿದ ರುಕ್ಸಾನ 20 ಗ್ರಾಂ ಲಾಂಗ್ ಜೈನ್, 20 ಗ್ರಾಂ ನಕ್ಲೇಸ್, 10 ಗ್ರಾಂ ಕಿವಿಯ ಹ್ಯಾಂಗಿಂಗ್ಸ್, 10 ಗ್ರಾಂ ಚಿನ್ನದ ಸರ ಸೇರಿದಂತೆ ಒಟ್ಟು 68 ಗ್ರಾಂ ಚಿನ್ನದ ಒಡವೆಗಳನ್ನ ಕೊಟ್ಟಿದ್ದಾರೆ. ಪಾಲೀಶ್ ಮಾಡುವ ನೆಪದಲ್ಲಿ ರುಕ್ಸಾನ ಪರ್ವೀನ್ ಅವರ 68 ಗ್ರಾಂ ಚಿನ್ನದ ಒಡವೆಗಳನ್ನ ಖದೀಮರು ಎಗರಿಸಿಕೊಂಡು ಪರಾರಿಯಾಗಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.