ETV Bharat / state

ಕಿಂಗ್​ ಮೇಕರ್​ ಕನಸು ಕಾಣುತ್ತಿದ್ದ ಜೆಡಿಎಸ್​: ಎಡವಿದ್ದರ ಬಗ್ಗೆ ಪರಾಮರ್ಶೆ ನಡೆಸುತ್ತಿರುವ ಮುಖಂಡರು - ಕರ್ನಾಟಕ ಜೆಡಿಎಸ್ ಸುದ್ದಿ

ಫಲಿತಾಂಶ ಬಂದ ನಂತರ ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಹೆಚ್.ಡಿ.ರೇವಣ್ಣ ಸಹ ಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಕಿಂಗ್​ ಮೇಕರ್​ ಕನಸು ಕಾಣುತ್ತಿದ್ದ ಜೆಡಿಎಸ್,  JDS Lost their power in this election
ಕಿಂಗ್​ ಮೇಕರ್​ ಕನಸು ಕಾಣುತ್ತಿದ್ದ ಜೆಡಿಎಸ್
author img

By

Published : Dec 11, 2019, 1:59 AM IST

ಬೆಂಗಳೂರು: ಉಪಚುನಾವಣೆಯಲ್ಲಿ ‘ಕಿಂಗ್ ಮೇಕರ್ ’ ಕನಸು ಕಾಣುತ್ತಿದ್ದ ಜೆಡಿಎಸ್ ಎಡವಿದ್ದೆಲ್ಲಿ ಎಂಬ ಪರಾಮರ್ಶೆಯಲ್ಲಿ ತೊಡಗಿದೆ.

2018 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 37 ಸ್ಥಾನಗಳನ್ನು ಪಡೆದಿದ್ದರೂ ಜೆಡಿಎಸ್ ಕಿಂಗ್ ಮೇಕರ್ ಆಗಿ ಆಟವಾಡಿತ್ತು. 105 ಸ್ಥಾನಗಳನ್ನು ಪಡೆದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಸಿಗಲಿಲ್ಲ. ಕಾರಣ, ಕಾಂಗ್ರೆಸ್ ತಾನು ದೊಡ್ಡ ಆಟವನ್ನೇ ಆಡಿತ್ತು. ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿ ಜೆಡಿಎಸ್​ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತ್ತು.

ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತು. ಹದಿನಾಲ್ಕು ತಿಂಗಳು ಅಧಿಕಾರ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್​ನ ಮೂವರು ಶಾಸಕರಿಂದಲೇ ಗಂಡಾಂತರ ಎದುರಾಯಿತು. ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದರಿಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಯಿತು. ನಂತರ ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾವೇ ನಡೆದು ಹೋಯಿತು.

ಇದರ ಮಧ್ಯೆ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆಯೂ ಎದುರಾಯಿತು. 2018 ರಂತೆಯೇ ಈ ಬಾರಿಯೂ ಜೆಡಿಎಸ್ ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿತ್ತು. ಆದರೆ, ಜೆಡಿಎಸ್ ನ ನಿರೀಕ್ಷೆಯನ್ನು ಮತದಾರ ಹುಸಿಗೊಳಿಸಿದ್ದಾನೆ. ಉಪಚುನಾವಣೆಯಲ್ಲಿ ಮತದಾರ ಜೆಡಿಎಸ್​ಗೆ ಶಾಕ್ ನೀಡಿದ್ದಾನೆ. ಶೂನ್ಯ ಸಂಪಾದನೆ ಮಾಡಿ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.

ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕೆ.ಆರ್. ಪೇಟೆ, ಹುಣಸೂರು ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳನ್ನು ಕಳೆದುಕೊಂಡು ಕಂಗಾಲಾಗಿದೆ. ತಾವು ಎಡವಿದ್ದೆಲ್ಲಿ ಎಂಬ ಪರಾಮರ್ಶೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ತೊಡಗಿದ್ದಾರೆ.

ಫಲಿತಾಂಶ ಬಂದ ನಂತರ ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಹೆಚ್.ಡಿ.ರೇವಣ್ಣ ಸಹ ಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಜೆಡಿಎಸ್​ನಲ್ಲಿದ್ದ ನಾರಾಯಣಗೌಡ ರಾಜೀನಾಮೆ ನೀಡಿದ್ದರಿಂದ ಅನರ್ಹಗೊಂಡಿದ್ದರು. ನಂತರ ಬದಲಾದ ರಾಜಕೀಯದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಕೆ.ಆರ್. ಪೇಟೆಯಿಂದ ಕಣಕ್ಕಿಳಿದಿದ್ದರು. ಜೆಡಿಎಸ್​ನ ಬಿ.ಎಲ್. ದೇವರಾಜ್ ಅವರನ್ನು ಸೋಲಿಸುವ ಮೂಲಕ ಜೆಡಿಎಸ್ ಕೋಟೆಯನ್ನು ಭೇದಿಸಿ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಇನ್ನು ಕಾಂಗ್ರೆಸ್​ನಲ್ಲಿದ್ದ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರು ಪಕ್ಷದಿಂದ ದೂರ ಉಳಿದಿದ್ದರು. ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಹುಣಸೂರು ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಅಲ್ಲಿ ಗೆದ್ದ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಿತ್ತು. ಆದರೆ, ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದರು. ಬಳಿಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವೂ ಆದರು ಎನ್ನಲಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು.

ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ವಿಶ್ವನಾಥ್ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೆ, ಹುಣಸೂರು ಕ್ಷೇತ್ರ ಜೆಡಿಎಸ್ ಕೈ ತಪ್ಪಿತು. ಇನ್ನು ಮಹಾಲಕ್ಷ್ಮಿಲೇಟ್ ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಜೆಡಿಎಸ್ ನಿಂದ ಬಿಜೆಪಿಗೆ ಹೋದ ಕೆ.ಗೋಪಾಲಯ್ಯ ಅವರನ್ನು ಸೋಲಿಸಲು ಜೆಡಿಎಸ್ ನಾಯಕರು ನಡೆಸಿದ ಎಲ್ಲ ತಂತ್ರಗಳು ವಿಫಲವಾಗಿವೆ. ಈ ಮೂರು ಕ್ಷೇತ್ರಗಳು ಕೈತಪ್ಪಿದ್ದರೂ ಯಶವಂತಪುರ ಕ್ಷೇತ್ರ ಕೈಹಿಡಿಯಬಹುದೆಂಬ ವಿಶ್ವಾಸ ನಾಯಕರಿಗಿತ್ತು. ಎರಡು ಬಾರಿ ಸೋಲು ಕಂಡಿದ್ದ ಜೆಡಿಎಸ್​ನ ಜವರಾಯಿಗೌಡರ ಮತ್ತೊಮ್ಮೆ ಸೋಲು ಕಂಡಿದ್ದು, ಜೆಡಿಎಸ್​ಗೆ ಮರ್ಮಾಘಾತ ನೀಡಿದೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡರುವ ಜೆಡಿಎಸ್​ಗೆ ಕೆ.ಆರ್. ಪೇಟೆ ಕ್ಷೇತ್ರ ಸಹ ಕೈಬಿಟ್ಟಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.

Intro:ಬೆಂಗಳೂರು : ಉಪಚುನಾವಣೆಯಲ್ಲಿ ‘ಕಿಂಗ್ ಮೇಕರ್ ’ ಕನಸು ಕಾಣುತ್ತಿದ್ದ ಜೆಡಿಎಸ್ ಎಡವಿದ್ದೆಲ್ಲಿ ಎಂಬ ಪರಾಮರ್ಶೆಯಲ್ಲಿ ತೊಡಗಿದೆ.Body:2018 ರ ವಿಧಾನಸಭೆ ಚುನಾವಣೆಯಲ್ಲಿ ಕೇವಲ 37 ಸ್ಥಾನಗಳನ್ನು ಪಡೆದಿದ್ದರೂ ಜೆಡಿಎಸ್ ಕಿಂಗ್ ಮೇಕರ್ ಆಗಿ ಆಟವಾಡಿತ್ತು. 105 ಸ್ಥಾನಗಳನ್ನು ಪಡೆದಿದ್ದರೂ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ಸಿಗಲಿಲ್ಲ. ಕಾರಣ, ಕಾಂಗ್ರೆಸ್ ದೊಡ್ಡ ಆಟವೇ ಆಡಿತ್ತು. ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆ ಮಾಡಿ ಜೆಡಿಎಸ್ ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿತ್ತು.
ಎಲ್ಲವೂ ಸರಿಯಾಯಿತು ಎನ್ನುವಷ್ಟರಲ್ಲಿ ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡಿತು. ಹದಿನಾಲ್ಕು ತಿಂಗಳು ಅಧಿಕಾರ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನ ಮೂವರು ಶಾಸಕರಿಂದಲೇ ಗಂಡಾಂತರ ಎದುರಾಯಿತು. ಒಟ್ಟು 17 ಶಾಸಕರು ರಾಜೀನಾಮೆ ನೀಡಿದ್ದರಿಂದ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನವಾಯಿತು. ನಂತರ ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾವೇ ನಡೆದು ಹೋಯಿತು. ಇದರ ಮಧ್ಯೆ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆಯೂ ಎದುರಾಯಿತು. 2018 ರಂತೆಯೇ ಈ ಬಾರಿಯೂ ಜೆಡಿಎಸ್ ಕಿಂಗ್ ಮೇಕರ್ ಆಗುವ ನಿರೀಕ್ಷೆಯಲ್ಲಿತ್ತು. ಆದರೆ, ಜೆಡಿಎಸ್ ನ ನಿರೀಕ್ಷೆಯನ್ನು ಮತದಾರ ಹುಸಿಗೊಳಿಸಿದ್ದಾನೆ. ಉಪಚುನಾವಣೆಯಲ್ಲಿ ಮತದಾರ ಜೆಡಿಎಸ್ ಗೆ ಶಾಕ್ ನೀಡಿದ್ದಾನೆ. ಶೂನ್ಯ ಸಂಪಾದನೆ ಮಾಡಿ ಕೈ ಕೈ ಹಿಸುಕಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಜೆಡಿಎಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಕೆ.ಆರ್. ಪೇಟೆ, ಹುಣಸೂರು ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳನ್ನು ಕಳೆದುಕೊಂಡು ಕಂಗಾಲಾಗಿದೆ. ತಾವು ಎಡವಿದ್ದೆಲ್ಲಿ ಎಂಬ ಪರಾಮರ್ಶೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ ತೊಡಗಿದ್ದಾರೆ. ಫಲಿತಾಂಶ ಬಂದ ನಂತರ ಕುಮಾರಸ್ವಾಮಿ ಅವರು ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇಂದು ಹೆಚ್.ಡಿ.ರೇವಣ್ಣ ಸಹ ಗೌಡರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಜೆಡಿಎಸ್ ನಲ್ಲಿದ್ದ ನಾರಾಯಣಗೌಡ ರಾಜೀನಾಮೆ ನೀಡಿದ್ದರಿಂದ ಅನರ್ಹಗೊಂಡಿದ್ದರು. ನಂತರ ಬದಲಾದ ರಾಜಕೀಯದಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಕೆ.ಆರ್. ಪೇಟೆಯಿಂದ ಕಣಕ್ಕಿಳಿದಿದ್ದರು. ಜೆಡಿಎಸ್ ನ ಬಿ.ಎಲ್. ದೇವರಾಜ್ ಅವರನ್ನು ಸೋಲಿಸುವ ಮೂಲಕ ಜೆಡಿಎಸ್ ನ ಕೋಟೆಯನ್ನು ಭೇದಿಸಿ ಕಮಲ ಅರಳಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಇನ್ನು ಕಾಂಗ್ರೆಸ್ ನಲ್ಲಿದ್ದ ಹಿರಿಯ ನಾಯಕ ಹೆಚ್.ವಿಶ್ವನಾಥ್ ಅವರು ಪಕ್ಷದಿಂದ ದೂರ ಉಳಿದಿದ್ದರು. ನಂತರ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ತಮ್ಮ ಪಕ್ಷಕ್ಕೆ ಸೇರಿಸಿಕೊಂಡು ಹುಣಸೂರು ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಕಣಕ್ಕಿಳಿಸಿದ್ದರು. ಅಲ್ಲಿ ಗೆದ್ದ ವಿಶ್ವನಾಥ್ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿಯೂ ಮಾಡಲಾಗಿತ್ತು. ಆದರೆ, ಮೈತ್ರಿ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂಬ ಕಾರಣಕ್ಕೆ ಕುಮಾರಸ್ವಾಮಿ ವಿರುದ್ಧ ಅಸಮಾಧಾನಗೊಂಡಿದ್ದರು. ಬಳಿಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವೂ ಆದರು ಎನ್ನಲಾಗಿದೆ. ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ವಿಶ್ವನಾಥ್ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಆದರೆ, ಹುಣಸೂರು ಕ್ಷೇತ್ರ ಜೆಡಿಎಸ್ ಕೈ ತಪ್ಪಿತು. ಇನ್ನು ಮಹಾಲಕ್ಷ್ಮಿಲೇಟ್ ನಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಜೆಡಿಎಸ್ ನಿಂದ ಬಿಜೆಪಿಗೆ ಹೋದ ಕೆ.ಗೋಪಾಲಯ್ಯ ಅವರನ್ನು ಸೋಲಿಸಲು ಜೆಡಿಎಸ್ ನಾಯಕರು ನಡೆಸಿದ ಎಲ್ಲ ತಂತ್ರಗಳು ವಿಫಲವಾಗಿವೆ. ಈ ಮೂರು ಕ್ಷೇತ್ರಗಳು ಕೈತಪ್ಪಿದ್ದರೂ ಯಶವಂತಪುರ ಕ್ಷೇತ್ರ ಕೈಹಿಡಿಯಬಹುದೆಂಬ ವಿಶ್ವಾಸ ನಾಯಕರಿಗಿತ್ತು. ಎರಡು ಬಾರಿ ಸೋಲು ಕಂಡಿದ್ದ ಜೆಡಿಎಸ್ ನ ಜವರಾಯಿಗೌಡರ ಮತ್ತೊಮ್ಮೆ ಸೋಲು ಜೆಡಿಎಸ್ ಗೆ ಮರ್ಮಾಘಾತ ನೀಡಿದೆ. ಈಗಾಗಲೇ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಳೆದುಕೊಂಡರುವ ಜೆಡಿಎಸ್ ಗೆ ಕೆ.ಆರ್. ಪೇಟೆ ಕ್ಷೇತ್ರ ಸಹ ಕೈಬಿಟ್ಟಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.