ETV Bharat / state

ಜೆಡಿಎಸ್ ಪಕ್ಷಕ್ಕೆ ಹೊಸ ರೂಪ: ಜೆಡಿಎಸ್ ಮಹತ್ವದ ಸಭೆ

ಜೆಡಿಎಸ್ ಪಕ್ಷಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ಹೊಸ ಕೋರ್ ಕಮಿಟಿ ರಚನೆ ಕುರಿತು ಜೆಡಿಎಸ್ ನಾಯಕರ ಸಭೆ ಕೈಗೊಂಡಿದ್ದಾರೆ.

JDS leaders meeting, JDS leaders meeting on build of new core committee, JDS new core committee, JDS new core committee news, ಜೆಡಿಎಸ್​ ನಾಯಕರ ಸಭೆ, ಹೊಸ ಕೋರ್ ಕಮಿಟಿ ರಚನೆ ಕುರಿತು ಜೆಡಿಎಸ್ ನಾಯಕರ ಸಭೆ, ಜೆಡಿಎಸ್​ ಹೊಸ ಕೋರ್​ ಕಮಿಟಿ, ಜೆಡಿಎಸ್​ ಹೊಸ ಕೋರ್​ ಕಮಿಟಿ ಸುದ್ದಿ,
ಹೊಸ ಕೋರ್ ಕಮಿಟಿ ರಚನೆ ಕುರಿತು ಜೆಡಿಎಸ್ ನಾಯಕರ ಸಭೆ
author img

By

Published : Jan 18, 2021, 1:51 PM IST

ಬೆಂಗಳೂರು: ಜೆಡಿಎಸ್ ಪಕ್ಷಕ್ಕೆ ಹೊಸ ರೂಪ ನೀಡುವ ಉದ್ದೇಶದಿಂದ ಹೊಸ ಕೋರ್ ಕಮಿಟಿ ರಚನೆಗೆ ಬಗ್ಗೆ ಸಭೆ ಆರಂಭವಾಗಿದ್ದು, ಹೊಸ ಕಮಿಟಿ ರಚನೆ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಮತ್ತು ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ.

ಹೊಸ ಕೋರ್ ಕಮಿಟಿ ರಚನೆ ಕುರಿತು ಜೆಡಿಎಸ್ ನಾಯಕರ ಸಭೆ

ಈ ಸಭೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ, ನಾಗನಗೌಡ ಕುಂದಕೂರ್, ಕೋನರೆಡ್ಡಿ, ಶ್ರೀನಿವಾಸ್ ಗೌಡ, ಬಸವರಾಜ ಹೊರಟ್ಟಿ, ತಿಪ್ಪೇಸ್ವಾಮಿ ಸೇರಿದಂತೆ ಹಲವಾರು ನಾಯಕರು ಭಾಗಿಯಾಗಿದ್ದಾರೆ.

ಹೊಸ ಕೋರ್ ಕಮಿಟಿ ರಚನೆಯಾದ ಬಳಿಕ ರಾಜ್ಯ ಘಟಕದ ಪದಾಧಿಕಾರಿಗಳ ಮರು ನೇಮಕ ಮಾಡಲಾಗುತ್ತದೆ. ಆನಂತರ ಕಂದಾಯ ವಿಭಾಗವಾರು, ಜಿಲ್ಲೆ ತಾಲೂಕು ಹಾಗೂ ಬೂತ್ ಮಟ್ಟದಲ್ಲೂ ಪಕ್ಷವನ್ನು ಬಲಗೊಳಿಸುವ ಉದ್ದೇಶದಿಂದ ಕೆಲವು ಪದಾಧಿಕಾರಿಗಳ ಬದಲಾವಣೆ ಮತ್ತು ಹೊಸ ಪದಾಧಿಕಾರಿಗಳ ನೇಮಕಕ್ಕೆ ಚಾಲನೆ ನೀಡುವುದಾಗಿ ಈಗಾಗಲೇ ಕುಮಾರಸ್ವಾಮಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.