ETV Bharat / state

ನಾಳೆಯಿಂದ ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮ ಆರಂಭ: 15 ವಿಶೇಷ ವಾಹನಗಳು ಸಿದ್ಧ - ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮಕ್ಕಾಗಿ 15 ವಿಶೇಷ ವಾಹನಗಳು ಸಿದ್ಧ

ನಾಳೆಯಿಂದ ಬೆಂಗಳೂರಿನಲ್ಲಿ ಜೆಡಿಎಸ್ ಜನತಾ ಮಿತ್ರ ಕಾರ್ಯಕ್ರಮ ಆರಂಭವಾಗಲಿದೆ. ಜೆಪಿ ಭವನದಲ್ಲಿ 15 ಜನತಾ ಮಿತ್ರ & 15 ಎಲ್​​ಇಡಿ ವಾಹನಗಳಿಗೆ ಹಸಿರು ನಿಶಾನೆಯನ್ನು ತೋರಲಾಗುವುದು.

JDS Janata Mitra program
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
author img

By

Published : Jun 30, 2022, 7:04 PM IST

ಬೆಂಗಳೂರು: ನಾಳೆಯಿಂದ ಜನತಾಮಿತ್ರ ಕಾರ್ಯಕ್ರಮ ರಾಜಧಾನಿಯಲ್ಲಿ ಆರಂಭವಾಗಲಿದೆ. ಜನತಾಮಿತ್ರ ಕಾರ್ಯಕ್ರಮಕ್ಕಾಗಿ 15 ವಿಶೇಷ ವಾಹನಗಳು ಸಿದ್ಧವಾಗಿವೆ. ಇಡೀ ನಗರದ 28 ವಿಧಾನಸಭೆ ಕ್ಷೇತ್ರಗಳಲ್ಲಿ, ಪ್ರತಿಯೊಂದು ವಾರ್ಡ್​ಗಳಿಗೂ ತೆರಳಲಿರುವ ಈ ವಾಹನಗಳಿಗೆ ಶುಕ್ರವಾರ ಜೆಪಿ ಭವನದಲ್ಲಿ ಹಸಿರು ನಿಶಾನೆ ತೋರಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಪಕ್ಷಗಳ ಎಲ್ಲ ಮುಖಂಡರು ಈ ವಾಹನಗಳ ಜತೆ ಹೋಗಬೇಕು. ಪಕ್ಷದ ಮುಖಂಡರೆಲ್ಲ ಪ್ರತ್ಯೇಕ ತಂಡಗಳಾಗಿ ಬೇರ್ಪಟ್ಟು ಸಂಚರಿಸಬೇಕು. ಎಲ್ಲ ವಾರ್ಡ್​ಗಳಲ್ಲಿಯೂ ಸಭೆಗಳನ್ನು ನಡೆಸಬೇಕು. ಅದಕ್ಕೆ ಅಗತ್ಯವಾದ ಎಲ್ಲ ಸೂಚನೆಗಳನ್ನು ನೀಡಲಾಗಿದೆ. ಜನತಾ ಮಿತ್ರ ವಾಹನವನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ. ಜನರು ತಮ್ಮ ನಿರೀಕ್ಷೆಯ ಸರ್ಕಾರ ಹೇಗಿರಬೇಕು ಎಂಬ ಬಗ್ಗೆ ಸಲಹೆ, ಅಭಿಪ್ರಾಯವನ್ನು ಕೊಡಬಹುದು.

ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ

ಜನತಾ ಮಿತ್ರ ಕಾರ್ಯಕ್ರಮವನ್ನು ನಗರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮನೆ ಮನೆಗೂ ತಲುಪಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು. ಈಗಾಗಲೇ 15 ಜನತಾ ಮಿತ್ರ ಹೆಸರಿನ ಎಲ್ ಇ ಡಿ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಪ್ರತಿ ಒಂದು ವಾಹನ ತಲಾ ಎರಡು ಕ್ಷೇತ್ರಗಳಿಗೆ ತೆರಳಿದೆ. ಅಷ್ಟೂ ವಾಹನಗಳಿಗೆ ಶಾಸಕರು ಅಥವಾ ಹಿರಿಯ ಮುಖಂಡರ ನೇತೃತ್ವದಲ್ಲಿ ಉಸ್ತುವಾರಿ ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಜುಲೈ 17ರಂದು ಸಮಾರೋಪ: ನಾಳೆಯಿಂದ ಆರಂಭವಾಗಿ ಜುಲೈ 17 ರವರೆಗೂ ಜನತಾ ಮಿತ್ರ ಕಾರ್ಯಕ್ರಮ ನಡೆಯಲಿದೆ. ಜು.1 ರಂದು ಒಂದು ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡಲಾಗುತ್ತದೆ. ಬೆಂಗಳೂರು ನಗರದ ಜನತೆಗೆ ಯಾವುದೇ ಸಮಸ್ಯೆ ಆಗದ ರೀತಿ ಕಾರ್ಯಕ್ರಮ ಮಾಡಲಾಗುತ್ತದೆ. ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ತೀರ್ಮಾನವನ್ನು ಮಾಡಲಾಗುತ್ತದೆ ಎಂದು ಹೆಚ್​​ಡಿಕೆ ತಿಳಿಸಿದರು.

ಪಂಚರತ್ನ ರಥಯಾತ್ರೆ & ಗ್ರಾಮ ವಾಸ್ತವ್ಯ: ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಎಲ್ಲ ಶಾಸಕರ ಸಭೆ ಕರೆದಿದ್ದೇವೆ. ಪಕ್ಷದ ಸಂಘಟನೆ ಹಾಗೂ ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ಕುರಿತು ಚರ್ಚೆ ನಡೆಸಲಾಗುತ್ತದೆ. ಜನತಾ ಜಲಧಾರೆ ಕಾರ್ಯಕ್ರಮ ಯಶಸ್ವಿಯಾಗಿದೆ. ಜನತೆಯ ವಿಶ್ವಾಸ ಮೂಡಿಸುವುದು ಹಾಗೂ ನೀರಾವರಿ ಯೋಜನೆ ಕುರಿತು ನಮ್ಮ ಬದ್ಧತೆ ಬಗ್ಗೆ ಕಾರ್ಯಕ್ರಮ ಪೂರ್ಣಗೊಂಡಿದೆ ಎಂದು ಹೇಳಿದರು.

ಇದನ್ನೂ ಓದಿ: ಜುಲೈ 1 ರಿಂದ ಜೆಡಿಎಸ್ 'ಜನತಾ ಮಿತ್ರ': ಪೂರ್ವಭಾವಿ ಸಭೆ ನಡೆಸಿದ ಹೆಚ್​ಡಿಕೆ

ಈಗ ಉನ್ನತ ಹುದ್ದೆಯಲ್ಲಿ ಬಿಬಿಎಂಪಿ ಕೊಠಡಿಗೆ ಬೆಂಕಿ ಇಟ್ಟವರು: ಕೋಟ್ಯಾಂತರ ರೂ. ಅವ್ಯವಹಾರವನ್ನು ಮುಚ್ಚಿಹಾಕಲು ಕಾರ್ಪೊರೇಷನ್ ಕೊಠಡಿಗೆ ಬೆಂಕಿ ಇಟ್ಟವರನ್ನು ಅನೇಕರು ಮರೆತಿದ್ದಾರೆ. ಆದರೆ ಬೆಂಕಿ ಇಟ್ಟ ಮಹಾನುಭಾವರು ಸರ್ಕಾರದ ಉನ್ನತ ಹುದ್ದೆಯಲ್ಲಿದ್ದಾರೆ ಎಂದು ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.