ETV Bharat / state

ರಾಜ್ಯಸಭೆ ಚುನಾವಣೆ : ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ - jds candidate kupendra reddy

ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ..

JDS candidate kupendra reddy
ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ
author img

By

Published : May 31, 2022, 11:33 AM IST

Updated : May 31, 2022, 12:38 PM IST

ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಹೆಚ್.ಡಿ ರೇವಣ್ಣ, ಎ.ಟಿ ರಾಮಸ್ವಾಮಿ, ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವು ಶಾಸಕರ ಉಪಸ್ಥಿತಿಯಲ್ಲಿ ವಿಧಾನಸೌಧದಲ್ಲಿ ಚುನಾವಣಾಧಿಕಾರಿ ಎಂ.ಕೆ ವಿಶಾಲಾಕ್ಷಿ ಬಳಿ ತಮ್ಮ ಉಮೇದುವಾರಿಕೆಯನ್ನ ಕುಪೇಂದ್ರ ರೆಡ್ಡಿ ಸಲ್ಲಿಕೆ ಮಾಡಿದರು.

ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ,‌ ಮೂರನೇ ಜೆಡಿಎಸ್​ ಅಭ್ಯರ್ಥಿ ಹಾಕಿ ಅಂತಾ ಹೇಳಿದ್ದೇ ಕಾಂಗ್ರೆಸ್. ಸೋನಿಯಾ ಗಾಂಧಿ, ಖರ್ಗೆಯವರೂ ಒಪ್ಪಿದ್ದರು. ಇದಾದ ಮೇಲೂ ಇವರು ಅಭ್ಯರ್ಥಿ ಹಾಕಿದ್ದಾರೆ ಅಂದರೆ ಜನರು ತೀರ್ಮಾನ ಮಾಡುತ್ತಾರೆ. ಬಿಜೆಪಿ ಗೆಲ್ಲಿಸಬೇಕು ಅನ್ನೋದೇ ಇವರ ಉದ್ದೇಶ ಇದ್ರೆ ಅವರು ಅಭ್ಯರ್ಥಿ ಹಾಕಬಹುದು ಎಂದರು.

ಮೊದಲ ಅಭ್ಯರ್ಥಿ ಮುಸ್ಲಿಂರನ್ನು ಮಾಡಬೇಕಿತ್ತು. ಆದರೆ, ಎರಡನೇ ಅಭ್ಯರ್ಥಿಯಾಗಿ ಯಾಕೆ ಹಾಕಿದ್ರು? ಜಯರಾಂ ರಮೇಶ್‌ನನ್ನು ಮೊದಲ ಅಭ್ಯರ್ಥಿಯನ್ನಾಗಿ ಯಾಕೆ ಮಾಡಿದ್ರು ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಚಿನ್ನ-ಬೆಳ್ಳಿ ದರ ಏರಿಳಿತ: ಇಂದಿನ ಆಭರಣಗಳ ಬೆಲೆ ಎಷ್ಟು?

Last Updated : May 31, 2022, 12:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.