ಬೆಂಗಳೂರು : ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿರುವ ಜೆಡಿಎಸ್, ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿದೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ಹುದ್ದೆಯಲ್ಲೇ ಮುಂದುವರೆದಿದ್ದು, ರಾಷ್ಟ್ರೀಯ ಕಾರ್ಯಾಧ್ಯಕ್ಷರು ಸೇರಿದಂತೆ 60 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಿ ಇಂದು ಆದೇಶ ಹೊರಡಿಸಲಾಗಿದೆ.

ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಉಪಾಧ್ಯಕ್ಷರಾಗಿ ಮಹಾರಾಷ್ಟ್ರದ ಶ್ರೀಪತ್ ರಾವ್ ಶಿಂಧೆ ಅವರನ್ನು ನೇಮಕ ಮಾಡಲಾಗಿದೆ. ರಾಷ್ಟ್ರೀಯ ಪ್ರಧಾನ ಮತ್ತು ಮಹಾ ಪ್ರಧಾನ ಕಾರ್ಯದರ್ಶಿಗಳಾಗಿ ಕೆ.ಆರ್.ಶಿವಕುಮಾರ್, ರಮೇಶ್ ಬಾಬು ಇವರನ್ನು ನೇಮಿಸಿದೆ.
ಪ್ರಧಾನ ಕಾರ್ಯದರ್ಶಿಗಳು : ಶಾಸಕ ಎನ್.ಎನ್.ನಾರಾಯಣಸ್ವಾಮಿ, ಕೇರಳದ ಡಾ.ನೀಲ ಲೋಹಿತ ದಾಸನ್ ನಾಡರ್, ಮೊಹಮ್ಮದ್ ಕುನ್ನಿ, ಆಂಧ್ರಪ್ರದೇಶದ ಗಟ್ಟು ಬಾಬು, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಊದಿಗೆರೆ ರಮೇಶ್, ಮಾಜಿ ಶಾಸಕಿ ಶಾರದಾ ಪೂರ್ಯ ನಾಯಕ್, ಮಹಮ್ಮದ್ ಜಫ್ರುಲ್ಲಾ ಖಾನ್.
ರಾಷ್ಟ್ರೀಯ ಕಾರ್ಯದರ್ಶಿಗಳು : ವೀರೇಶ್ ಮಹಾಂತಿ ಮಠ್, ವಕ್ತಾರರಾಗಿ ತನ್ವೀರ್ ಅಹಮ್ಮದ್‍ವುಲ್ಲಾ.
ಜೆಡಿಎಸ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು : ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮಾಜಿ ಸಚಿವ ಸಾ.ರಾ.ಮಹೇಶ್, ಹೆಚ್.ಡಿ.ರೇವಣ್ಣ, ಸಿ.ಎಸ್. ಪುಟ್ಟರಾಜು, ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಜಮ್ಮು ಕಾಶ್ಮೀರದ ರಾಮರತನ್ ಶರ್ಮ, ಉತ್ತರಾಂಚಲದ ಹರ್ಜೇಂದ್ರ ಸಿಂಗ್, ತಮಿಳುನಾಡಿನ ಬಾಲರಾಮನ್ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಒಟ್ಟು 60 ಮಂದಿ ಸದಸ್ಯರನ್ನು ನೇಮಕ ಮಾಡಲಾಗಿದೆ.
ಶಾಸಕ ಕೆ.ಎಸ್.ಲಿಂಗೇಶ್, ನವೀದ್, ಬಿ.ಎಸ್. ಕನ್ನಾಕುಮಾರಿ, ಬಿ.ಎಂ.ಉಮರ್ ಸೇರಿದಂತೆ 11 ಮಂದಿಯನ್ನು ಕಾರ್ಯಕಾರಿ ಸಮಿತಿಯ ಆಹ್ವಾನಿತ ಸದಸ್ಯರನ್ನಾಗಿ ನೇಮಕ ಮಾಡಿ ಜೆಡಿಎಸ್ ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆದೇಶ ಹೊರಡಿಸಿದ್ದಾರೆ.