ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ ಸುಳಿಯಲ್ಲಿ ಸಿಲುಕಿರುವ ಬಿಗ್ ಬಾಸ್ ಖ್ಯಾತಿಯ ಆ್ಯಡಂ ಪಾಷ ಆ್ಯಡಂ ಪಾಷ ಆರೋಗ್ಯದಲ್ಲಿ ಏರು ಪೇರಾದ ಕಾರಣ ಜಯನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಕಾರಣ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ತನ್ನ ವಿಚಿತ್ರ ಸ್ವಭಾವದಿಂದ ಜೈಲಿಗೆ ಎಂಟ್ರಿ ಕೊಡುವಾಗಲೇ ಕಿರಿಕ್ ಮಾಡಿದ್ದ ಆ್ಯಡಂ ಸದ್ಯ ಮತ್ತೆ ತನ್ನ ಮುಖವಾಡ ಬಯಲು ಮಾಡಿದ್ದಾರೆ.
ಆ್ಯಡಂ ಪಾಷ ವಿಚಿತ್ರ ಡ್ರೆಸ್ ಹಾಗೂ ಮೇಕಪ್ ಮಾಡಿ ವಿಕೆಂಡ್ ಪಾರ್ಟಿ, ಡಾನ್ಸ್, ಎಣ್ಣೆ ನಶೆಯ ಲೋಕದಲ್ಲಿ ತೇಲಾಡುತ್ತಿದ್ದ. ಆದರೆ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಕಾರಣ ಇದಕ್ಕೆಲ್ಲ ಅವಕಾಶ ಇಲ್ಲ. ಸಿಗರೇಟ್, ಎಣ್ಣೆ ಹಾಗೂ ತನ್ನ ವಿಚಿತ್ರ ಮೇಕಪ್, ಕಲರ್ ಕಲರ್ ಚಪ್ಪಲಿ, ಡ್ರೆಸ್ ಹಾಕಲು ಅವಕಾಶ ಇಲ್ಲದೇ ಇರುವ ಕಾರಣ ಹಠ ಹಿಡಿದು ತನಗೆ ಬೇಕಾದ ವಸ್ತುಗಳ ಬಳಕೆಗೆ ಅವಕಾಶ ಮಾಡಿಕೊಡಿ. ಸಿಗರೇಟ್ ಹಾಗೂ ಎಣ್ಣೆ ಕುಡಿಯದೆ ಹೋದರೆ ನನಗೆ ನನ್ನ ದೇಹದಲ್ಲಿ ಏನ್ ಆಗುತ್ತಿದೆ ಎಂದು ಗೊತ್ತಾಗಲ್ಲ. ನನಗೆ ಬೇಕಾದ ವಸ್ತುಗಳನ್ನು ತಂದು ಕೊಡಿ ಎಂದು ಹಠ ಹಿಡಿದ ಕಾರಣ ಮೊದಲು ಜೈಲಾಧಿಕಾರಿಗಳು ಮೆತ್ತಗೆ ಧ್ವನಿಯಲ್ಲಿ ನೀವು ಒಬ್ಬ ವಿಚಾರಣಾಧೀನ ಕೈದಿ, ಜೈಲಿನ ನಿಯಮ ಕಾನೂನುಗಳ ಬಗ್ಗೆ ಅರಿವು ಇರಲಿ ಎಂದು ತಿಳಿಸಿದ್ದಾರೆ. ಮತ್ತೆ ಹಠ ಮಾಡಿದಾಗ ಏರು ಧ್ವನಿಯಲ್ಲಿ ಎಚ್ಚರಿಕೆ ನೀಡಿ ಸಿಂಗಲ್ ಬ್ಯಾರಕ್ನಲ್ಲಿ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ಈತನ ವಿರುದ್ಧದ ಆರೋಪವೇನು?: ಎನ್ಸಿಬಿ ಯಿಂದ ಬಂಧಿತರಾದ ಅನಿಕಾ ಜೊತೆ ನಿರಂತರ ಪಾರ್ಟಿ, ಹೈಫೈ ಡ್ರಗ್ಸ್ ಖರೀದಿಸಿರುವ ಆರೋಪ ಈತನ ಮೇಲಿದೆ. ಹಾಗೆ ಹಲವಾರು ಪಾರ್ಟಿಗಳಲ್ಲಿ ಭಾಗಿಯಾಗಿ ಇತರರನ್ನು ಡ್ರಗ್ಸ್ ಸೇವನೆಯಲ್ಲಿ ಭಾಗಿಯಾಗುವುದಕ್ಕೆ ತಮ್ಮದೇ ಜಾಲ ಸೃಷ್ಟಿಸಿದ್ದ ಎನ್ನಲಾಗ್ತಿದೆ.