ETV Bharat / state

ಲಷ್ಕರ್ ಸಂಘಟನೆಯೊಂದಿಗೆ ನಂಟು: 10 ವರ್ಷಗಳ ಬಳಿಕ‌ ಮೂವರು ಆರೋಪಿಗಳಿಗೆ ಶಿಕ್ಷೆ - 10 ವರ್ಷಗಳ ಬಳಿಕ‌ ಮೂವರು ಆರೋಪಿಗಳಿಗೆ ಸಜೆ

ಲಷ್ಕರ್ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಮೂವರು ಆರೋಪಿಗಳಿಗೆ ಬೆಂಗಳೂರಿನ 49ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

jail
ಜೈಲು
author img

By

Published : Mar 4, 2023, 9:27 AM IST

ಬೆಂಗಳೂರು : ಲಷ್ಕರ್ ಇ ತೈಬಾ ಉಗ್ರ ಸಂಘಟನೆಗೆ ಹಣ ಸಂಗ್ರಹಣೆ ಮತ್ತು ಸದಸ್ಯರನ್ನು ನೇಮಕಾತಿ ಮಾಡುತ್ತಿದ್ದ ಪಾಕಿಸ್ತಾನದ ಪ್ರಜೆ ಸೇರಿದಂತೆ ಮೂವರಿಗೆ ನಗರದ 49ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆದರೆ, ಶಿಕ್ಷೆಯನ್ನು ಪ್ರಕಟಿಸಿಲ್ಲ. ಸೈಯದ್‌ ಅಬ್ದುಲ್‌ ರೆಹಮಾನ್‌ (25), ಪಾಕಿಸ್ತಾನದ ಕರಾಚಿ ಮೂಲದ ಮೊಹಮದ್‌ ಫಹಾದ್‌ ಹೈ (30) ಮತ್ತು ಬೆಂಗಳೂರಿನ ಅಪ್ಸರ್‌ ಪಾಶಾ (32) ಶಿಕ್ಷೆಗೊಳಗಾದ ದೋಷಿತರು.

ಫೆ. 23 ರಂದು ಬಂಧಿತರನ್ನ ಅಪರಾಧಿಗಳೆಂದು ಘೋಷಿಸಿದ್ದ ನ್ಯಾಯಾಲಯ, ಭಾರತೀಯ ದಂಡ ಸಂಹಿತೆ, ಭಾರತೀಯ ಸಶಸ್ತ್ರ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಇದನ್ನೂ ಓದಿ: ಲಷ್ಕರ್‌-ಇ-ತೈಬಾದ ಕಮಾಂಡರ್‌ ಸೇರಿ ಮೂವರು ಉಗ್ರರ ಹೊಡೆದುರುಳಿಸಿದ ಸೇನೆ

10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮೊಹಮದ್​.. ಪಾಕಿಸ್ತಾನದ ಮೊಹಮದ್‌ ಕೇರಳದ ಕೋಜಿಕೋಡ್​​ನಲ್ಲಿ ನಡೆದ ಪ್ರಕರಣವೊಂದರಲ್ಲಿ 8 ವರ್ಷ ಮತ್ತು ಮೈಸೂರಿನ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ.

ಜೈಲಿನಲ್ಲಿ ಪರಿಚಯ, ಭಾರತದಲ್ಲಿ ಉಗ್ರ ಸಂಘಟನೆ ಪರ ಕೆಲಸ ಮಾಡಲು ಸ್ಕೆಚ್​.. ಅಪ್ಸರ್ ಪಾಶಾ ಭಾರತೀಯ ವಿಜ್ಞಾನ ಸಂಸ್ಥೆ ಮೇಲಿನ ದಾಳಿ ಪ್ರಕರಣದಲ್ಲಿ ಜೈಲು ಸೇರಿದ್ದ. ಇನ್ನು, ಅಬ್ದುಲ್ ರೆಹಮಾನ್ ಕೊಲೆ, ದರೋಡೆ ಹಾಗೂ ಕಳ್ಳತನ ಪ್ರಕರಣದಲ್ಲಿ 2011ರಲ್ಲಿ ಜೈಲು ಸೇರಿದ್ದ. ಜೈಲಿನಲ್ಲಿ ಪರಿಚಯವಾದ ಮೂವರೂ ಭಾರತದಲ್ಲಿ ಲಷ್ಕರ್‌-ಎ-ತೈಬಾ ಸಂಘಟನೆ ಪರವಾಗಿ ಕೆಲಸ ಮಾಡಲು ಸಂಚು ರೂಪಿಸಿದ್ದರು. ನಿರುದ್ಯೋಗಿ ಯುವಕರನ್ನ ಉಗ್ರ ಸಂಘಟನೆಯತ್ತ ಸೆಳೆಯುತ್ತಿದ್ದರು. ಬೆಂಗಳೂರು ಸೇರಿದಂತೆ ಹಲವೆಡೆ ವಿಧ್ವಂಸಕ ಕೃತ್ಯವೆಸಗಲು ಹಾಗೂ ಅನೇಕ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದರು.

ಇದನ್ನೂ ಓದಿ: ಜಮ್ಮು ಕಾಶ್ಮೀರ: ಇಬ್ಬರು ಎಲ್‌ಇಟಿ ಭಯೋತ್ಪಾದಕರ ಬಂಧನ

ರೆಹಮಾನ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಬಯಲಾಗಿತ್ತು ಉಗ್ರರ ಸಂಪರ್ಕದ ಮಾಹಿತಿ.. 2012 ಮೇ 7ರಂದು ಕೇಂದ್ರ ಅಪರಾಧ ವಿಭಾಗದ ಸಿಸಿಬಿ ಅಂದಿನ ಇನ್ಸ್​ಪೆಕ್ಟರ್ ಕೆ.ಸಿ.ಅಶೋಕನ್‌ ನೇತೃತ್ವದ ತಂಡ ಜೈಲಿನಿಂದ ಹೊರಬಂದಿದ್ದ ಅಬ್ದುಲ್‌ ರೆಹಮಾನ್‌ನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಜೈಲಿನಲ್ಲಿ ಉಗ್ರರ ಸಂಪರ್ಕದಿಂದ ಕೃತ್ಯ ಎಸಗಲು ಸಜ್ಜಾಗಿರುವ ಮಾಹಿತಿ ಲಭ್ಯವಾಗಿತ್ತು. ಬಂಧಿತನಿಂದ 1 ರಿವಾಲ್ವಾರ್‌, 4 ಜೀವಂತ ಗುಂಡು, 2 ಮೊಬೈಲ್‌, ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದ ಸಿಸಿಬಿ‌ ಪೊಲೀಸರು ಆಡುಗೋಡಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಬಳಿಕ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಚಾಜ್​ಶೀಟ್ ಸಲ್ಲಿಸಲಾಗಿತ್ತು. 10 ವರ್ಷ ಕಾಲ ಸುಧೀರ್ಘ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯವು ಸದ್ಯ ಮೂವರು ಆರೋಪಿಗಳನ್ನು ದೋಷಿಗಳಾಗಿ ತೀರ್ಮಾನಿಸಿ ಶಿಕ್ಷೆ ವಿಧಿಸಿದೆ.

ಇದನ್ನೂ ಓದಿ: ಬಂಧಿತರಾದ ಎಲ್‌ಇಟಿ ಭಯೋತ್ಪಾದಕರಲ್ಲಿ ಓರ್ವ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥನಾಗಿದ್ದ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.