ETV Bharat / state

'ಜೈ ಜವಾನ್, ಜೈ ವಿಜ್ಞಾನ,' ಇಸ್ರೋ ವಿಜ್ಞಾನಿಗಳನ್ನು ಮನಸಾರೆ ಶ್ಲಾಘಿಸಿದ ಪ್ರಧಾನಿ ಮೋದಿ - ಇಸ್ರೋ ವಿಜ್ಞಾನಿಗಳ ಭೇಟಿಗೂ ಮುನ್ನ

ಎರಡು ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಸ್ವದೇಶಕ್ಕೆ ಮರಳಿದ್ದಾರೆ. ಗ್ರೀಸ್​ನಿಂದ ನೇರವಾಗಿ ಬೆಂಗಳೂರು ತಲುಪಿದ್ದು, ಹೆಚ್​ಎಎಲ್​ ವಿಮಾನ ನಿಲ್ದಾಣದಲ್ಲೇ ಜನರನ್ನುದ್ದೇಶಿಸಿ ಮಾತನಾಡಿದರು.

Jai jawan  Jai vigyaan  PM Modi lauds scientists in Bengaluru  PM Modi in Bengaluru  ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ  ಎರಡು ರಾಷ್ಟ್ರಗಳ ಪ್ರವಾಸ ಮುಗಿಸಿ ಪ್ರಧಾನಿ  ಗ್ರೀಸ್​ನಿಂದ ನೇರವಾಗಿ ಬೆಂಗಳೂರು  ಚಂದ್ರಯಾನ 3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿ  ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಮಂತ್ರಿ  ಇಸ್ರೋ ವಿಜ್ಞಾನಿಗಳ ಭೇಟಿಗೂ ಮುನ್ನ  ನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿ
'ಜೈ ಜವಾನ್, ಜೈ ವಿಜ್ಞಾನ,' ವಿಜ್ಞಾನಿಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ
author img

By ETV Bharat Karnataka Team

Published : Aug 26, 2023, 7:18 AM IST

Updated : Aug 26, 2023, 11:17 AM IST

ಬೆಂಗಳೂರು: ಚಂದ್ರಯಾನ 3 ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮುಂಜಾನೆ ನಗರಕ್ಕೆ ಆಗಮಿಸಿದ್ದಾರೆ. ಇನ್ನು ಇಸ್ರೋ ವಿಜ್ಞಾನಿಗಳ ಭೇಟಿಗೂ ಮುನ್ನ ಪ್ರಧಾನಿ ಮೋದಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದ ಹೊರಗೆ ಜನರನ್ನುದ್ದೇಶಿ ಮಾತನಾಡಿದರು.

ಇಸ್ರೋ ವಿಜ್ಞಾನಿಗಳ ತಂಡಕ್ಕೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ ಹೆಚ್.ಎ.ಎಲ್ ವಿಮಾನ ನಿಲ್ದಾಣದ ಮುಂದೆ ಸೇರಿದ್ದ ಜನತೆ ಉದ್ದೇಶಿಸಿ ಚುಟುಕು ಭಾಷಣ ಮಾಡಿದರು. ಇದು ಸೂರ್ಯೋದಯದ ಸಂದರ್ಭ, ಬೆಂಗಳೂರಿನಲ್ಲಿ ಸುಂದರ ಚಿತ್ರಣ ಇದೆ. ಇವತ್ತು ಇಷ್ಟೊಂದು ಜನ ಬಂದಿದೀರಾ.. ವಿಜ್ಞಾನಿಗಳ ಸಾಧನೆ ಎಲ್ಲರ ಹೆಮ್ಮೆ ಹೆಚ್ಚಿಸಿದೆ. ಬೆಂಗಳೂರಿನಲ್ಲಿ ಕಾಣುತ್ತಿರುವ ಜನರ ಮೆಚ್ಚುಗೆ, ಸಂಭ್ರಮದ ದೃಶ್ಯ ನನಗೆ ಗ್ರೀಸ್‌ನಲ್ಲೂ ಕಾಣಿಸಿತ್ತು, ಜೋಹಾನ್ಸ್‌ಬರ್ಗ್‌ನಲ್ಲೂ ಕಾಣಿಸಿತ್ತು ಎಂದರು.

ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ವೇಳೆ ನಾನು ವಿದೇಶದಲ್ಲಿದ್ದೆ. ಅಲ್ಲಿಂದಲೇ ವರ್ಚುಯಲ್ ಮೂಲಕ ವೀಕ್ಷಣೆ ಮಾಡಿದ್ದೆ. ನಮ್ಮ ವಿಜ್ಞಾನಿಗಳ ಸಾಧನೆ ನೋಡಿ ನನ್ನನ್ನು ನಾನು‌ ನಿಯಂತ್ರಣ ಮಾಡಿಕೊಳ್ಳಲಾಗಲಿಲ್ಲ. ನಾನು ಭಾರತಕ್ಕೆ ಮರಳಿದಾಗ ಮೊದಲು ಬೆಂಗಳೂರಿಗೆ ಹೋಗಬೇಕು ಅಂತ ನಿರ್ಧರಿಸಿದ್ದೆ. ಹಾಗಾಗಿ ಈಗ ಬಂದಿದ್ದು, ನಾನು ಎಲ್ಲರಿಗಿಂತ ಮೊದಲು ನಮ್ಮ ವಿಜ್ಞಾನಿಗಳಿಗೆ ನಮಸ್ಕರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಿಎಂ, ಡಿಸಿಎಂ, ರಾಜ್ಯಪಾಲರಲ್ಲಿ ಮನವಿ ಮಾಡಿಕೊಂಡಿದ್ದೆ. ನಾನು ಬೆಳಗ್ಗೆ ಬರುತ್ತೇನೆ, ನೀವು ಬರುವ ಕಷ್ಟ ತಗೋಬೇಡಿ ಅಂತ ಕೇಳಿಕೊಂಡಿದ್ದೆ. ನಾನು ಬಂದು ವಿಜ್ಞಾನಿಗಳಿಗೆ ಅಭಿನಂದಿಸಿ ಹೊರಟು ಹೋಗುತ್ತೇನೆ ಎಂದು ತಿಳಿಸಿ ನಾನೇ ಅವರಲ್ಲಿ ಸ್ವಾಗತಕ್ಕೆ ಬರದಂತೆ ವಿನಂತಿಸಿಕೊಂಡಿದ್ದೆ. ಅದರಂತೆ ಸಿಎಂ, ಡಿಸಿಎಂ ಅವರು ಪ್ರೋಟೋಕಾಲ್ ಪಾಲನೆ ಮಾಡಿದ್ದಾರೆ. ಇದಕ್ಕಾಗಿ ಅವರಿಗೆ ನಾನು ಆಭಾರಿ ಆಗಿದ್ದೇನೆ ಎಂದರು.

ನಾನು ಈಗ ಇಲ್ಲಿ ಭಾಷಣ ಮಾಡಲ್ಲ. ವಿಜ್ಞಾನಿಗಳ ಬಳಿ ಹೋಗಲು ಕಾತರನಾಗಿದ್ದೇನೆ. ನೀವೆಲ್ಲ ಬಂದಿದ್ದೀರಾ.. ಮಕ್ಕಳೂ ಸಹ ಇಲ್ಲಿ ಬಂದಿದ್ದಾರೆ. ಮಕ್ಕಳೇ ನಮ್ಮ ದೇಶದ ಭವಿಷ್ಯ ಎಂದು ಜೈ ಜವಾನ್, ಜೈಕಿಸಾನ್, ಜೈ ವಿಜ್ಞಾನ ಘೋಷಣೆ ಮೊಳಗಿಸುತ್ತಾ ಇಸ್ರೋ ಕಡೆ ತೆರಳಿದರು.

ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿಗಳು ಗ್ರೀಸ್ ದೇಶದ ಪ್ರವಾಸ ಮುಗಿಸಿ ಸತತ 10 ಗಂಟೆಗಳ ಕಾಲ ಪ್ರಯಾಣಿಸಿ ನೇರವಾಗಿ ಬೆಂಗಳೂರು ನಗರದ ಹೆಚ್​​ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪರವಾಗಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಸೇರಿದಂತೆ ಹಿರಿಯ ಅಧಿಕಾರಿಗಳು ಪ್ರಧಾನಿಗಳನ್ನು ಬರಮಾಡಿಕೊಂಡರು.

ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿಗಳನ್ನು ಅಭಿನಂದಿಸಲು ಸಾವಿರಾರು ಸಾರ್ವಜನಿಕರು ಹೆಚ್​ಎಎಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದರು. ಅದೇ ರೀತಿ ಜಾಲಹಳ್ಳಿ ವೃತ್ತದ ಬಳಿಯೂ ಜನಸಾಗರ ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡಿದ್ದು, ಕೈಯಲ್ಲಿ ರಾಷ್ಟ್ರಧ್ಚಜ ಹಿಡಿದು ದೇಶದ ಪರ ಜಯಘೋಷ ಮೊಳಗಿಸುತ್ತಾ ಮೋದಿಯನ್ನು ಬರಮಾಡಿಕೊಂಡರು.

ಹೆಚ್.ಎ.ಎಲ್ ನಿಂದ ಹೊರಡಲಿರುವ ಪ್ರಧಾನಿ ಮೋದಿ ನೇರವಾಗಿ ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಲಿದ್ದು ಬೆಳಗ್ಗೆ 7 ರಿಂದ 8 ಗಂಟೆವರೆಗೆ ಅಂದ್ರೆ ಸುಮಾರು ಒಂದು ಗಂಟೆ ಕಾಲ ಇಸ್ರೋ ವಿಜ್ಞಾನಿಗಳ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಚಂದ್ರಯಾನದ ಯಶಸ್ಸಿಗಾಗಿ ವಿಜ್ಞಾನಿಗಳನ್ನು ಅಭಿನಂದಿಸಲಿದ್ದು, ಆದಿತ್ಯಯಾನದ ಕುರಿತು ಚರ್ಚಿಸಲಿದ್ದಾರೆ.

ವಿಜ್ಞಾನಿಗಳ ಭೇಟಿ ನಂತರ ಬೆಳಗ್ಗೆ 8.05 ಕ್ಕೆ ಪೀಣ್ಯದಿಂದ ನಿರ್ಗಮಿಸಲಿರುವ ಮೋದಿ ಬೆಳಗ್ಗೆ 8.30 ಕ್ಕೆ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಲಿದ್ದಾರೆ. ಬಳಿಕ ಬೆಳಗ್ಗೆ 8.35 ಕ್ಕೆ ಹೆಚ್.ಎ.ಎಲ್ ನಿಂದ ಹೊರಟು ಬೆಳಗ್ಗೆ 11.35 ಕ್ಕೆ ದೆಹಲಿ ತಲುಪಲಿದ್ದಾರೆ.

ಓದಿ: ಚಂದ್ರಯಾನ-3 ಯಶಸ್ವಿ: ಬೆಂಗಳೂರಿಗೆ ಬಂದಿಳಿದ ಪ್ರಧಾನಿ, ಹೆಚ್​ಎಎಲ್​​​ನಲ್ಲಿ ಅದ್ಧೂರಿ ಸ್ವಾಗತ

Last Updated : Aug 26, 2023, 11:17 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.