ETV Bharat / state

ಕೋಮಲ್​  ತಮ್ಮನಲ್ಲ ಮಗನಿದ್ದಂತೆ, ಹಲ್ಲೆ ಘಟನೆ ಬೇಸರ ತರಿಸಿದೆ: ನವರಸನಾಯಕ ಜಗ್ಗೇಶ್​ - assult on actores

ನಟ ಕೋಮಲ್​ ಮೇಲಿನ ದೈಹಿಕ ಹಲ್ಲೆ ಖಂಡಿಸಿ ನವರಸ ನಾಯಕ ಜಗ್ಗೇಶ್​ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್​ ಸಿಗ್ನಲ್ ಅವಸರದಲ್ಲಿ ಕೋಮಲ್​ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ನಟ ಜಗ್ಗೇಶ್
author img

By

Published : Aug 13, 2019, 11:59 PM IST

ಬೆಂಗಳೂರು: ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹೋದರ, ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ಜನಪ್ರಿಯರಾದವರ ಮೇಲೆ ದೈಹಿಕ ಹಲ್ಲೆ ಮಾಡಿ, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಲು ಮುಂದಾಗುತ್ತಿದ್ದಾರೆ ಎಂದು ನವರಸ ನಾಯಕ ಜಗ್ಗೇಶ್​ ಅಸಮಾಧಾನ ವ್ಯಕ್ತಪಡಿಸಿದರು.

ನಟ ಜಗ್ಗೇಶ್

ರಕ್ತ ಬರುವ ರೀತಿ ಹೊಡೆದಿರುವುದನ್ನು ನಾನು ಸಹಿಸುವುದಿಲ್ಲ. ಕೋಮಲ್ ನನ್ನ ತಮ್ಮ ಅಲ್ಲ, ಮಗ ಇದ್ದ ಹಾಗೆ. ನಮ್ಮ ಮೇಲೆಯೇ ‌ಪದೇ-ಪದೇ ಹಲ್ಲೆಯಾಗುತ್ತಿರುವುದು ಯಾಕೆ? ಕೆಲವು ದಿನಗಳ ಹಿಂದೆ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದರು. ಈಗ ನನ್ನ ತಮ್ಮನ ಮೇಲೆ ನಡೆದಿದೆ. ನಾವೇನು ತಪ್ಪು ಮಾಡಿದ್ದೇವೆ. ಸಮಾಜದಲ್ಲಿ ಪ್ರಾಮಾಣಿಕವಾಗಿ ಬದುಕುವುದೇ ತಪ್ಪಾ? ಎಂದು ಪ್ರಶ್ನಿಸಿದರು.

ಬೆಂಗಳೂರಿನ ವಾತಾವರಣ ತುಂಬಾ ಬದಲಾಗಿದೆ. ಬಾಂಬೆ ರೀತಿ ವಾತಾವರಣ ನಿರ್ಮಾಣವಾಗುತ್ತಿದೆ. ಪೊಲೀಸ್ ಇಲಾಖೆಗೆ ಧನ್ಯವಾದ ತಿಳಿಸುತ್ತೇನೆ. ತ್ವರಿತಗತಿಯಲ್ಲಿ ಅಪರಾಧಿಯನ್ನು ಬಂಧಿಸಿದ್ದಾರೆ. ಕಾನೂನಾತ್ಮಕವಾಗಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

Intro:ನಟ ಕೋಮಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಜಗ್ಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ ತಮ್ಮನನ್ನು ನೋಡಿ ತುಂಬಾ ಬೇಸರವಾಯಿತು. ನನ್ನ ತಮ್ಮನ ಮೇಲೆ ರಕ್ತ ಬರುವ ರೀತಿ ಹೊಡೆದಿರುವುದನ್ನು ನಾನು ಸಹಿಸುವುದಿಲ್ಲ. ಕೋಮಲ್ ನನ್ನ ತಮ್ಮ ಅಲ್ಲ ನನಗೆ ಮಗ ಇದ್ದ ಹಾಗೆ. ಯಾಕೆ ಹೀಗೆ ನಮ್ಮ ಮೇಲೆ ‌ಪದೇ-ಪದೇ ರೀತಿ ಹಲ್ಲೆ ಮಾಡುತ್ತಾರೆ. ಕೆಲವು ದಿನಗಳ ಹಿಂದೆ ನನ್ನ ಮಗನ ಮೇಲೆ ಹಲ್ಲೆ ಮಾಡಿದ್ದರು ಈಗ ನನ್ನ ತಮ್ಮನ ಮೇಲೆ ಹಲ್ಲೆ ಮಾಡಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆ,ವ ಸಮಾಜದಲ್ಲಿ ಪ್ರಾಮಾಣಿಕವಾಗಿ ಬದುಕುವುದೇ ತಪ್ಪಾ ಬದುಕುವುದೇ ತಪ್ಪಾ? ಇನ್ನು ಬೆಂಗಳೂರಿನ ವಾತಾವರಣ ತುಂಬಾ ಬದಲಾಗಿದೆ ಬಾಂಬೆ ಸ್ಟೈಲ್ ನಲ್ಲಿ ತುಂಬಾ ಹೆಸರು ಮಾಡಿರುವ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ ಹೆಸರು ಮಾಡುವ ಕೀಳುಮಟ್ಟಕ್ಕೆ ಕೆಲವು ಮಂದಿ ಇಳಿದಿದ್ದಾರೆ. ಸೋಶಿಯಲ್ ಮೀಡಿಯಾ ಹಾಗೂ ಪಬ್ಲಿಕ್ನಲ್ಲಿ ಇದಕ್ಕೆ ಕಡಿವಾಣ ಹಾಕಬೇಕಿದೆ. ಬೆಂಗಳೂರಿನಲ್ಲಿ ಟ್ರಾಫಿಕ್ ಹೆಚ್ಚಾಗಿದೆ ಇನ್ನು ಆಫೀಸ್ ಸಮಯದಲ್ಲಿ ಪ್ರತಿಯೊಬ್ಬರು ಸಹನೆಯನ್ನು ಮೈಗೂಡಿಸಿಕೊಳ್ಳಬೇಕು. ಒಂದು ವೇಳೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಆಗ್ತಾರೆ.ನನ್ನ ತಮ್ಮ ಸಾಧು ಪ್ರಾಣಿ ಇದ್ದಹಾಗೆ. ನಾನು ಬೇಕಾದ್ರೆ ಸ್ವಲ್ಪ ರಫ್ ಅಂಡ್ ಟಫ್ ಆಗಿ ವರ್ತಿಸುತ್ತೇನೆ. ಆದರೆ ನನ್ನ ತಮ್ಮ ಆಗಲ್ಲ ಅವನು ಪಾಪದವನು ಅವನಿಗೆ ಇದೆಲ್ಲ ಗೊತ್ತಾಗಲ್ಲ.

Body:ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಡಿಪಾರ್ಟ್ಮೆಂಟ್ ಗೆ ಧನ್ಯವಾದ ತಿಳಿಸುತ್ತೇನೆ. ಬಹಳ ತ್ವರಿತಗತಿಯಲ್ಲಿ ಅಪರಾಧಿಯನ್ನು ಅರೆಸ್ಟ್ ಮಾಡಿದ್ದಾರೆ. ಕಾನೂನಾತ್ಮಕವಾಗಿ ಆರೋಪಿ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಜಗ್ಗೇಶ್ ಹೇಳಿದರು. ಅಲ್ಲದೆ ಕೋಮಲ್ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಇಂಡಸ್ಟ್ರಿಯ ಸಂಬಂಧಿಸಿದವರು ಈ ರೀತಿ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ಹೊರಗಿನವರ ಹೊರಗಿನವರೇ ಅದರ ಬಗ್ಗೆ ನಾನು ಈಗ ಪ್ರತಿಕ್ರಿಯಿಸುವುದಿಲ್ಲ ಮೇಲೊಬ್ಬ ಕರ್ತೃ ಇದ್ದಾನೆ ಎಲ್ಲವನ್ನು ಗಮನಿಸುತ್ತಾನೆ. ನಾನು ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅಂಬರೀಶ್ ಪ್ರಭಾಕರ್ ಅವರಂತಹ ಸ್ಟಾರ್ಗಳ ಜೊತೆ ಬೆಳೆದು ಬಂದವನು. ಅಲ್ಲದೆ ನಾನು ಸಾಕಷ್ಟು ಸಿನಿಮಾ ರಂಗವನ್ನು ಕಂಡಿದ್ದೇನೆ 33 ವರ್ಷ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದೇನೆ ನನಗೂ 57 ವರ್ಷ ವಯಸ್ಸಾಗಿದೆ 150ಕ್ಕೂ ಹೆಚ್ಚು ಸಿನಿಮಾ ನಟಿಸಿದ್ದಾನೆ. ಏನೇನೋ ನಡೆಯುತ್ತೊ ನಡೆಯಲಿ. ಎಲ್ಲಾ ನಮ್ಮವರೇ ಎನ್ನುವ ಮೂಲಕ ಕೋಮಲ್ ಅವರ ದಾಳಿ ಉದ್ದೇಶಪೂರ್ವಕವಾಗಿದೆ ಎಂಬಂತೆ ನಟ ಜಗ್ಗೇಶ್ ಬೇಸರದಿಂದಲೇ ಹೇಳಿದರು.

ಸತೀಶ ಎಂಬಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.