ETV Bharat / state

ರಾಜಕಾರಣದ ಅದೃಷ್ಟ ಆಟ.. ವಿಧಾನ ಪರಿಷತ್ ಟಿಕೆಟ್ ಸಿಗದ ಅಭ್ಯರ್ಥಿಗಳಿಗೆ ಒಲಿದ ರಾಜ್ಯಸಭೆ

ನಟ ಜಗ್ಗೇಶ್ ಮತ್ತು ಲೆಹರ್ ಸಿಂಗ್​ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಟಿಕೆಟ್ ಕೇಳಿದ್ದರು. ಪರಿಷತ್ ಚುನಾವಣೆಗೆ ಟಿಕೆಟ್ ನೀಡಲು ಸಿದ್ಧವಿಲ್ಲದ ಹೈಕಮಾಂಡ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಪರಿಷತ್​​ಗಿಂತಲೂ ಅತಿ ದೊಡ್ಡ ಶಾಸನ ಸಂಸ್ಥೆಯಾದ ರಾಜ್ಯಸಭೆಗೆ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿತ್ತು.

jaggesh-and-lehar-singh-get-bjp-rajya-sabha-tiket-lucky-and-win
ರಾಜ್ಯಸಭೆಗೆ ಆಯ್ಕೆಯಾದ ನಟ ಜಗ್ಗೇಶ್ ಮತ್ತು ಲೇಹರ್ ಸಿಂಗ್
author img

By

Published : Jun 12, 2022, 10:58 PM IST

ಬೆಂಗಳೂರು: ತಾನೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವ ನಿರಾಸೆಯ ಗಾದೆ ಮಾತನ್ನು ಈಗ ರಾಜಕೀಯ ಪರಿಸ್ಥಿತಿ ಮಟ್ಟಿಗೆ ಬದಲಾಯಿಸಬೇಕಿದೆ. ರಾಜ್ಯದಲ್ಲಿ ಮೊನ್ನೆ ನಡೆದ ವಿಧಾನ ಪರಿಷತ್ ಮತ್ತು ರಾಜ್ಯಸಭೆಯ ಚುನಾವಣೆ ಗಮನಿಸಿದರೆ ಈ ಗಾದೆ ಮಾತು ಅರ್ಥ ಕಳೆದುಕೊಂಡಿತಾ ಎನ್ನುವ ಸಂಶಯವೂ ಮೂಡಲಿದೆ.

ಹೌದು, ಬಿಜೆಪಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿ ರಾಜ್ಯಸಭೆಗೆ ಆಯ್ಕೆಯಾದ ನಟ ಜಗ್ಗೇಶ್ ಮತ್ತು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಆಪ್ತರಾದ ಲೆಹರ್ ಸಿಂಗ್ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿ ಟಿಕೆಟ್ ಕೇಳಿದ್ದರು. ರಾಜ್ಯ ಬಿಜೆಪಿ ಕೋರ್ ಕಮಿಟಿ ಸಹ ಈ ಇಬ್ಬರಿಗೂ ಪರಿಷತ್ ಟಿಕೆಟ್ ನೀಡುವಂತೆ ಹೈಕಮಾಂಡ್​ಗೆ ಶಿಫಾರಸ್ಸು ಮಾಡಿತ್ತು. ಆದರೆ, ಬಿಜೆಪಿ ಹೈಕಮಾಂಡ್ ಇವರಿಗೆ ಟಿಕೆಟ್ ನೀಡಲು ನಿರಾಕರಿಸಿದಾಗ ಇಬ್ಬರೂ ಬಹಳಷ್ಟು ನಿರಾಸೆಗೊಂಡಿದ್ದರು.

ಸ್ವತಃ ಅಭ್ಯರ್ಥಿಗಳಿಗೆ ಅಚ್ಚರಿ!: ಇದೀಗ ರಾಜಕಾರಣದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎನ್ನುವ ಮಾತಿನಂತೆ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲು ಸಿದ್ಧವಿಲ್ಲದ ಹೈಕಮಾಂಡ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಧಾನ ಪರಿಷತ್​​ಗಿಂತಲೂ ಅತಿ ದೊಡ್ಡ ಶಾಸನ ಸಂಸ್ಥೆಯಾದ ರಾಜ್ಯಸಭೆಗೆ ಟಿಕೆಟ್ ಘೋಷಿಸಿ ಅಚ್ಚರಿ ಮೂಡಿಸಿತ್ತು. ಮೊದಲ ಪಟ್ಟಿಯಲ್ಲಿ ನಟ ಜಗ್ಗೇಶ್ ಅವರಿಗೆ ಟಿಕೆಟ್ ನೀಡಿದರೆ, ಎರಡನೇ ಪಟ್ಟಿಯಲ್ಲಿ ಬಿಜೆಪಿಯು ಮೂರನೇ ಅಭ್ಯರ್ಥಿಯಾಗಿ ಲೆಹರ್ ಸಿಂಗ್ ಅವರಿಗೆ ಟಿಕೆಟ್ ಘೋಷಿಸಿ ಸ್ವತಃ ಅಭ್ಯರ್ಥಿಗಳಿಗೆ ಅಚ್ಚರಿ ನೀಡಿತು.

ಕಾರ್ಯತಂತ್ರದ ಗೆಲುವು: ಟಿಕೆಟ್ ನೀಡಿದ್ದಲ್ಲದೇ ಜಿದ್ದಾಜಿದ್ದಿನ ಚುನಾವಣೆಯಲ್ಲಿ ಇಬ್ಬರೂ ಅಭ್ಯರ್ಥಿಗಳು ಗೆಲ್ಲುವಂತೆ ಬಿಜೆಪಿ ಕಾರ್ಯತಂತ್ರ ರೂಪಿಸಿ ಗೆಲ್ಲಿಸಿರುವುದು ಕೂಡ ವಿಧಾನ ಪರಿಷತ್ ಟಿಕೆಟ್ ಸಿಗದೇ ಬೇಸರದಲ್ಲಿದ್ದ ಇಬ್ಬರೂ ಅಭ್ಯರ್ಥಿಗಳಿಗೆ ಸಂತಸ ಉಂಟುಮಾಡಿದೆ. ರಾಜಕಾರಣದಲ್ಲಿ ಕೆಲವೊಮ್ಮೆ ಅನಿರೀಕ್ಷಿತವಾಗಿ ಸ್ಥಾನ ಮಾನಗಳು ಸಿಗುತ್ತವೆ. ಅದೃಷ್ಟ ಲಕ್ಷ್ಮಿ ಒಲಿದು ಬಿಡುತ್ತಾಳೆ ಎನ್ನುವುದಕ್ಕೆ ರಾಜ್ಯಸಭೆಗೆ ಆಯ್ಕೆಯಾದ ಜಗ್ಗೇಶ್ ಮತ್ತು ಲೆಹರ್ ಸಿಂಗ್ ತಾಜಾ ನಿದರ್ಶನವಾಗಿದ್ದಾರೆ.

ಚುನಾವಣೆಯ ಮೇಲೆ ಕಣ್ಣು: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ದಕ್ಷಿಣ ಕರ್ನಾಟಕದಲ್ಲಿ ಪ್ರಬಲ ಸಮುದಯವಾಗಿರುವ ಒಕ್ಕಲಿಗರ ಮತ ಸೆಳೆಯುವ ಉದ್ದೇಶದಿಂದ ಬಿಜೆಪಿ ಹೈಕಮಾಂಡ್ ನಟ ಜಗ್ಗೇಶ್ ಅವರಿಗೆ ರಾಜ್ಯಸಭೆ ಟಿಕೆಟ್ ನೀಡಿದೆ ಎಂದು ಹೇಳಲಾಗಿದೆ. ಇತ್ತ, ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡದೇ ಇರುವುದಕ್ಕೆ ಅಸಮಧಾನಗೊಂಡಿದ್ದ ಯಡಿಯೂರಪ್ಪನವರನ್ನು ತೃಪ್ತಿಪಡಿಸಲು ಆಪ್ತ ಲೆಹರ್ ಸಿಂಗ್ ಅವರಿಗೆ ಟಿಕೆಟ್ ನೀಡಿ ಬಿಜೆಪಿ ಹೈಕಮಾಂಡ್ ಬ್ಯಾಲೆನ್ಸ್ ರಾಜಕಾರಣ ಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಕುಪೇಂದ್ರ ರೆಡ್ಡಿಗೆ ಕೈಕೊಟ್ಟ ಅದೃಷ್ಟ: ಜೆಡಿಎಸ್​ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರೂ ಸಹ ಈ ಬಾರಿ ಪರಿಷತ್ ಚುನಾವಣೆಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಜೆಡಿಎಸ್ ಟಿ.ಎ.ಶರವಣ ಅವರಿಗೆ ಪರಿಷತ್​ ಟಿಕೆಟ್​ ನೀಡಿತ್ತು. ಹೀಗಾಗಿ ಇದರಿಂದ ವಂಚಿತರಗಾಗಿದ್ದ ಕುಪೇಂದ್ರ ರೆಡ್ಡಿ ಅವರಿಗೆ ರಾಜ್ಯಸಭೆಯ ಟಿಕೆಟ್ ಕೊಡಲಾಗಿತ್ತು. ಒಂದೊಮ್ಮೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿದ್ದರೆ ಕುಪೇಂದ್ರ ರೆಡ್ಡಿ ರಾಜ್ಯಸಭೆಗೆ ಆಯ್ಕೆಯಾಗುವ ಎಲ್ಲಾ ಸಾಧ್ಯತೆಗಳಿದ್ದವು.

ಈ ಹಿಂದಿನ ಅಚ್ಚರಿಗಳು: ಬಿಜೆಪಿ ಮಾತ್ರವಲ್ಲಿ ಕಾಂಗ್ರೆಸ್ ಪಕ್ಷದಲ್ಲಿಯೂ ಇಂತಹ ಅಚ್ಚರಿ ಬೆಳವಣಿಗೆಗಳು ನಡೆದಿವೆ. ಈಗ ರಾಜ್ಯಸಭೆ ಸದಸ್ಯರಾಗಿರುವ ಜಿ.ಸಿ. ಚಂದ್ರಶೇಖರ್ ಈ ಹಿಂದೆ ವಿಧಾನ ಪರಿಷತ್ ಟಿಕೆಟ್​ಗಾಗಿ ಆಗ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ. ಜಿ.ಪರಮೇಶ್ವರ್ ಅವರ ಮೂಲಕ ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ, ಅಂತಿಮ ಕ್ಷಣದಲ್ಲಿ ಪರಿಷತ್​ ಟಿಕೆಟ್ ಸಿಗದಿದ್ದಾಗ ರಾಜ್ಯಸಭೆ ಟಿಕೆಟ್ ನೀಡಿ ಆಯ್ಕೆ ಮಾಡಿ ಕಳಿಸಲಾಯಿತು. ಮತ್ತೊಬ್ಬ ರಾಜ್ಯಸಭೆ ಸದಸ್ಯರಾಗಿರುವ ಡಾ.ಎಲ್ ಹನುಮಂತಯ್ಯನವರೂ ಸಹ ಕಾಂಗ್ರೆಸ್​ ಪರಿಷತ್ ಟಿಕಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರನ್ನೂ ಕಾಂಗ್ರೆಸ್ ರಾಜ್ಯಸಭೆಗೆ ಆಯ್ಕೆ ಮಾಡಿ ಅಚ್ಚರಿ ನೀಡಿತು.

ಇಷ್ಟೇ ಅಲ್ಲ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಲೋಕಸಭೆ ಸದಸ್ಯರಾಗಿದ್ದ ಡಿ. ವಿ. ಸದಾನಂದಗೌಡರು ಕೆಎಂಎಫ್ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುವಂತೆ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪನವರ ಮೇಲೆ ಬಹಳ ಒತ್ತಡ ಹಾಕಿದ್ದರು. ಆದರೆ, ಕೆಎಂಎಫ್ ನಿರ್ದೇಶಕ ಸ್ಥಾನ ಒಲಿಯದ ಸದಾನಂದಗೌಡರಿಗೆ ಅನಿರೀಕ್ಷಿತ ರಾಜಕೀಯ ಬೆಳವಣಿಗೆಯಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿ ಪಟ್ಟವನ್ನೇ ದೊರಕಿಸಿಕೊಟ್ಟಿದ್ದರು. ರಾಜಕಾರಣದಲ್ಲಿ ಇಂತಹ ಅದೃಷ್ಟದ ಉದಾಹರಣೆಗಳು ಸಾಕಷ್ಟಿವೆ. ಹಾಗೆಯೇ ಬಹಳಷ್ಟು ನಿರೀಕ್ಷೆ ಹೊಂದಿದವರಿಗೆ ಬಯಸಿದ ಹುದ್ದೆಗಳು ಸಿಗದೇ ಅವರು ಕೊರಗಿದ ಮತ್ತು ಕೊರಗುತ್ತಿರುವ ಚಿತ್ರಣಗಳಿಗೇನು ಕೊರತೆಯಿಲ್ಲ.

ಇದನ್ನೂ ಓದಿ: ಕಾಂಗ್ರೆಸ್ ಮೇಲಿನ ಆಸಕ್ತಿ ಕಳೆದುಕೊಂಡ ಜೆಡಿಎಸ್ ರೆಬೆಲ್ಸ್ : ರಾಜ್ಯಸಭೆ ಚುನಾವಣೆ ಮೂಲಕ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.