ETV Bharat / state

ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಮಾದರಿ: ಬಿಎಸ್​ವೈರನ್ನು ಹಾಡಿ‌ಹೊಗಳಿದ ಜೆ.ಪಿ ನಡ್ಡಾ - ಯಡಿಯೂರಪ್ಪ ಸರ್ಕಾರ ಮಾದರಿ ಎಂದ ಜೆ.ಪಿ ನಡ್ಡಾ

ಬೇರಡೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಕಡಿಮೆ ಇದೆ ಸೋಂಕು ನಿಯಂತ್ರಿಸುವಲ್ಲಿ ಯಡಿಯೂರಪ್ಪ ಟೀಂ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

j p nadda prises bs yediyurappa
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭಾಷಣ
author img

By

Published : Jun 14, 2020, 9:19 PM IST

ಬೆಂಗಳೂರು: ಕೊರೊನಾ ನಿಯಂತ್ರಣದ ಭಾಗವಾಗಿ ಪಾಸಿಟಿವ್ ಕೇಸ್​ಗಳ ಟ್ರೇಸ್, ಟೆಸ್ಟ್, ಟ್ರಿಟ್ಮೆಂಟ್ ಅನ್ನು ಕರ್ನಾಟಕದಲ್ಲಿ ಸಮರ್ಪಕವಾಗಿ ಮಾಡಲಾಗಿದೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಬಹಳ ಮುಂದಿದ್ದಾರೆ, ಯಡಿಯೂರಪ್ಪ ಟೀಂ ಅತ್ಯುತ್ತಮವಾಗಿ ಕೆಲಸ ಮಾಡಿದೆ ಎಂದು ರಾಜ್ಯ ಸರ್ಕಾರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಹಾಡಿ ಹೊಗಳಿದ್ದಾರೆ.

ಜನಸೇವೆ ಮಾಡಲು ಡಿಜಿಟಲ್ ಟೂಲ್ ಸಹಕಾರಿಯಾಗಿದೆ. ಕಳೆದ 7 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ವರ್ಚುವಲ್ ರ‍್ಯಾಲಿಗೆ ಚಾಲನೆ‌ ಕೊಟ್ಟಿದ್ದರು. ಇದು 19ನೇ ಜನಸಂವಾದ ವರ್ಚುವಲ್ ರ‍್ಯಾಲಿ ಎನ್ನುತ್ತಾ ಭಾಷಣ ಆರಂಭಿಸಿದ ಜೆ‌ಪಿ ನಡ್ಡಾ, ಕೊರೊನಾ‌ ಎಲ್ಲರನ್ನೂ ಹೈರಾಣ ಮಾಡಿದೆ, ಕೊರೊನಾದಿಂದ ಮೃತರಾದವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ಕೊಡಲಿ ಎಂದರು.

ಕೊರೊನಾ ವಾರಿಯರ್ಸ್​ಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ನಮ್ಮ ವೈದ್ಯರು, ಆರೋಗ್ಯ ಸಿಬ್ಬಂದಿ, ಪೌರಕಾರ್ಮಿಕರು, ಪೊಲೀಸರು ಎಲ್ಲರೂ ಕೊರೊನಾ ವಿರುದ್ಧ ಜನರ ರಕ್ಷಣೆ ಮಾಡುತ್ತಿದ್ದಾರೆ ಅವರ ಕಾರ್ಯಕ್ಕೆ ಎಲ್ಲರೂ ಋಣಿಯಾಗಿರಬೇಕು ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭಾಷಣ

ಕೊರೊನಾ ಬಂದಾಗ ಲಾಕ್​ಡೌನ್ ಹೇರಬೇಕಾಯಿತು ಸರ್ಕಾರಕ್ಕೂ ಸಾಕಷ್ಟು ಒತ್ತಡ, ಸವಾಲುಗಳು ಎದುರಾದವು ಈ ಸಂದರ್ಭದಲ್ಲಿ ನಮ್ಮ ಸರ್ಕಾರದ ಎರಡನೇ ಅವಧಿಯ ಮೊದಲ ವರ್ಷ ಪೂರ್ಣವಾಗಿದೆ. ನಮಗೆ ವರ್ಚುವಲ್ ಸಂವಾದ ಕಾರ್ಯಕರ್ತರನ್ನು, ಜನರನ್ನು ತಲುಪಲು ಪರ್ಯಾಯ ಮಾರ್ಗವಾಯಿತು ಎಂದರು.

ಬೇರಡೆ ಹೋಲಿಸಿದರೆ ಬೆಂಗಳೂರಿನಲ್ಲಿ ಕೊರೊನಾ ಕೇಸ್ ಕಡಿಮೆ ಇದೆ. ಯಡಿಯೂರಪ್ಪ ಟೀಂ ಅತ್ಯುತ್ತಮವಾಗಿ ಕೆಲಸ ಮಾಡಿದೆ. ಯಡಿಯೂರಪ್ಪನವರು ಸಹ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ, ಕೃಷಿಕರು, ಸವಿತಾ ಸಮಾಜ, ಆಟೊ ರಿಕ್ಷಾ ಹೀಗೆ ಹಲವು ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪರ ಕಾರ್ಯಕವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ ನಡ್ಡಾ, ಯಡಿಯೂರಪ್ಪ ಕೊರೊನಾ ನಿರ್ವಹಣೆ ಮಾಡಿದ್ದು ಮಾದರಿಯಾಗಿದೆ ಎಂದುರು. ವಲಸೆ ಕಾರ್ಮಿಕರ ಬಗ್ಗೆ ಯಡಿಯೂರಪ್ಪ ಕಾಳಜಿ ಮೆಚ್ಚುವಂಥದ್ದು, ದೇಶಕ್ಕೆ ಮೋದಿಯವರು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದರೂ ಅದಕ್ಕೂ ಮುನ್ನ ರಾಜ್ಯಕ್ಕೆ ಯಡಿಯೂರಪ್ಪ 2,100 ಕೋಟಿ ಪ್ಯಾಕೇಜ್ ಘೋಷಿಸಿದ್ದರು ಎಂದು ರಾಜ್ಯ ಸರ್ಕಾರ ಮತ್ತು ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸಿದರು.

ಕರ್ನಾಟಕದ ಬಿಜೆಪಿ ಕಾರ್ಯಕರ್ತರು ಕೊರೊನಾ ವೇಳೆ ಉತ್ತಮ ಕಾರ್ಯ ಮಾಡಿದ್ದಾರೆ, ರಾಜ್ಯದ ಬಿಜೆಪಿ ಕಾರ್ಯಕರ್ತರಿಗೆ ನಮನ ಸಲ್ಲಿಸುತ್ತೇನೆ. ಮೋದಿಯವರ ನೇತೃತ್ವದಲ್ಲಿ 6 ವರ್ಷದ ಸಾಧನೆಗಳು 60 ವರ್ಷದ ಸಾಧನೆಗಳಿಗೆ ಸಮವಾಗಿದೆ. ಕೊರೊನಾ ವೇಳೆ ಪ್ರಧಾನಿ ಮೋದಿ ಗಟ್ಟಿ ತೀರ್ಮಾನ ಮಾಡಿ, ಸರಿಯಾದ ಸಮಯದಲ್ಲಿ ಲಾಕ್​ಡೌನ್ ಮಾಡಿದರು ಎಂದಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿಗೆ ವೇದಿಕಯಾದ ವರ್ಚುವಲ್ ರ‍್ಯಾಲಿ:

ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ರಾಜಕಾರಣ ನಡೆಸಿದ್ದು, ಇಲ್ಲದ ಆರೋಪಗಳನ್ನು ಮಾಡುತ್ತಿದೆ. ಕಾಂಗ್ರೆಸ್ ಈ ರೀತಿ ನಡೆದುಕೊಂಡಿದ್ದು ದುಃಖದ ವಿಷಯ. ದೇಶದಲ್ಲಿ ಸಂಕಷ್ಟ ಇದ್ದಾಗ ಸರ್ಕಾರದ ಜೊತೆ ಪ್ರತಿಪಕ್ಷಗಳು ಕೈಜೋಡಿಸಬೇಕು. ಇವತ್ತಿನ ಸಂಕಷ್ಟದಲ್ಲಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಸಾಥ್​ ಕೊಡಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್​ಗೆ ದೇಶದ ಚಿಂತೆ ಇಲ್ಲ, ದೇಶದ ಹಿತಕ್ಕಿಂತ ರಾಜಕೀಯ ನಡೆಸುವುದೇ ದೊಡ್ಡದಾಗಿದೆ. ಅವರಿಗೆ ಪ್ರತಿಪಕ್ಷದ ಕರ್ತವ್ಯಗಳು ಗೊತ್ತಿಲ್ಲದಿದ್ದರೆ ನಮ್ಮಿಂದ ಕಲಿಯಲಿ, ನಾವು ಬಹುತೇಕ ವಿಪಕ್ಷ ಸ್ಥಾನದಲ್ಲೇ ಕುಳಿತಿದ್ದೇವೆ ಎಂದರು. ದೇಶ ಸಂಕಷ್ಟದಲ್ಲಿದ್ದಾಗ ನಾವು ಯಾವತ್ತು ಕೊಳಕು ರಾಜಕೀಯ ಮಾಡಿಲ್ಲ. ನಿಮ್ಮ ಕಾಲದಲ್ಲಿ ಪತ್ರಕರ್ತರು ಸೇರಿದಂತೆ ಬಹುತೇಕರು ಕಂಬಿ ಹಿಂದೆ ಇದ್ದರು. ಈಗ ನೀವು ಅಸಹಿಷ್ಣುತೆ ಬಗ್ಗೆ ಮಾತಾಡುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಸಂಕಲ್ಪ:

ಕರ್ನಾಟಕ ಜನಸಂವಾದ ವರ್ಚುವಲ್​ ರ‍್ಯಾಲಿಯನ್ನು ಸಂಕಲ್ಪ ಬೋಧನೆಯೊಂದಿಗೆ ಮುಕ್ತಾಯ ಮಾಡಲಾಯಿತು. ಕೊರೊನಾ ವಿರುದ್ಧ ಹೋರಾಟ ಮುಂದುವರೆಸುವ, ನಾಗರಿಕರ ಕರ್ತವ್ಯ ನಿಭಾಯಿಸುವ, ದೇಶಿ ಉತ್ಪನ್ನ ಖರೀದಿಸುವ ಸಂಕಲ್ಪವನ್ನು ಮುಖ್ಯಮಂತ್ರಿ ಆದಿಯಾಗಿ ಬಿಜೆಪಿ ನಾಯಕರು, ಪದಾಧಿಕಾರಿಗಳು ಕೈಗೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.