ಬೆಂಗಳೂರು: ಐಟಿ ದಾಳಿಯಲ್ಲಿ ದೆಹಲಿಯಲ್ಲಿ ಸಿಕ್ಕ 8.59 ಕೋಟಿಗೆ ಸಂಬಂಧಿಸಿದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಖುದ್ದಾಗಿ ಡಿ.ಕೆ.ಶಿವಕುಮಾರ್ ಮತ್ತು ಆಪ್ತರು ಹಾಜರಾಗಿದ್ದರು.
ಐಟಿ ದಾಳಿಯಲ್ಲಿ ಡಿ.ಕೆ.ಶಿವಕುಮಾರ ಮತ್ತು ಸಹಚರರ ಬಳಿ ದೆಹಲಿಯಲ್ಲಿ ಸಿಕ್ಕ 8.59 ಕೋಟಿ ಹಣಕ್ಕೆ ಸಂಬಂಧಿಸಿದ ಪ್ರಕರಣದ ಖುಲಾಸೆಗೆ ಡಿ.ಕೆ.ಶಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆಯನ್ನ ಜನಪ್ರತಿನಿಧಿಗಳ ನ್ಯಾಯಾಲದ ವಿಚಾರಣೆಗೆ ನಡೆಸಿತ್ತು, ಖುದ್ದಾಗಿ ಡಿ.ಕೆ.ಶಿ ಮತ್ತು ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ರಾಜೇಂದ್ರ ಹಾಜರಾಗಿದ್ದರು. ಈ ವೇಳೆ ಅರ್ಜಿಗೆ ಪ್ರತಿಯಾಗಿ ಐಟಿ ಇಲಾಖೆ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ರು, ಹೀಗಾಗಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನ ಏ 29 ಕ್ಕೆ ಮುಂದೂಡಿದೆ.
ಏನಿದು ಪ್ರಕರಣ
ಕಳೆದ ವರ್ಷ ದೆಹಲಿಯಲ್ಲಿ ಐಟಿ ರೇಡ್ ಮಾಡಿ 8.59 ಕೋಟಿ ರೂ ಜಪ್ತಮಾಡಿ ಇಡಿಗೆ ಮಾಹಿತಿ ರವಾನೆ ಮಾಡಿತ್ತು, ಹವಾಲ ದಂಧೆಯನ್ನ ಡಿ.ಕೆ.ಶಿ ಮತ್ತು ಆಪ್ತರು ನಡೆಸುತ್ತಿದ್ದಾರೆ ಎಂದು ಐಟಿ ಅಧಿಕಾರಿಗಳು ಆರೋಪಿಸಿದ್ದರು. ಹವಾಲಾ ದಂಧೆ ಪ್ರಕರಣದಲ್ಲಿ ಡಿ.ಕೆ.ಶಿ ಹಾಗೂ ಆಪ್ತರು ಇನ್ನೂ ಆರೋಪ ಮುಕ್ತರಾಗಿಲ್ಲ, ಡಿಕೆಶಿಯಿಂದ ಹಣ ಪಡೆದು ಸಚಿನ್ ನಾರಾಯಣ್ ಹಲವು ಕಂಪನಿ ನಡೆಸುತ್ತಿದ್ದಾರೆ ಮತ್ತು ಸುನಿಲ್ ಶರ್ಮಾ ಟ್ರಾವೆಲ್ ಉಧ್ಯಮದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ, ವಾಟ್ಸಾಪ್ ಚಾಟ್ ನಲ್ಲಿ ಈ ಕುರಿತು ವ್ಯವಹಾರ ನಡೆಸಿದ ಬಗ್ಗೆ ಸಾಕ್ಷ್ಯಗಳು ಸಿಕ್ಕಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಐಪಿಸಿ ಸೆ.120(ಬಿ) ಅಡಿಯಲ್ಲಿ ದೂರು ದಾಖಲಿಸಿದ್ದರು.