ಬೆಂಗಳೂರು: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಇಲಾಖೆಯಿಂದ ನಡೆಸಲ್ಪಟ್ಟ ದಾಳಿಗಳು, ವಶಪಡಿಸಿಕೊಂಡ ಹಣದ ಕುರಿತು ಡಿ.ಜಿ. ಬಿ ಆರ್ ಬಾಲಕೃಷ್ಣನ್ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲೇ ಕರ್ನಾಟಕ-ಗೋವಾ ವಲಯದಿಂದ ಹೆಚ್ಚಿನ ತೆರಿಗೆ ಆದಾಯ ಸಂಗ್ರಹಣೆಯಾಗಿದ್ದು, ಮುಂಬೈ, ದೆಹಲಿ ನಂತರದ ಸ್ಥಾನವನ್ನು ರಾಜ್ಯ ಪಡೆದಿದೆ. 2017-18ನೇ ಸಾಲಿನಲ್ಲಿ ಸಂಗ್ರಹವಾದ ತೆರಿಗೆ 1,03,745 ಕೋಟಿ ರೂ, ಪ್ರಸಕ್ತ ವರ್ಷದ ಆದಾಯ ತೆರಿಗೆ ಸಂಗ್ರಹಣೆ 1,11,152 ಕೋಟಿ. ಈ ಆರ್ಥಿಕ ವರ್ಷದ ತೆರಿಗೆ ಪಾವತಿಗೆ ಮಾ.31 ಅಂತಿಮ ದಿನವಾಗಿದೆ ಎಂದಿದ್ದಾರೆ.
ಆದಾಯ ತೆರಿಗೆ ಇಲಾಖೆಯಿಂದ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆಸಿತ್ತು. ಈ ವೇಳೆ ಮನೆಯಲ್ಲಿ ಒಂದು ಡೈರಿ ಸಿಕ್ಕಿದ್ದು, ಅದರಲ್ಲಿ ಅವರು ಬೇನಾಮಿ ಆಸ್ತಿ ಹೊಂದಿರುವುದು ಪತ್ತೆಯಾಗಿದೆ. ಅವರ ಹೆಸರಲ್ಲಿ ಮಾತ್ರವಲ್ಲದೆ ಅವರ ಹೆಂಡತಿ ಹಾಗೂ ಇತರr ಹೆಸರಿನಲ್ಲಿಯೂ ಬೇನಾಮಿ ಆಸ್ತಿ ಹೊಂದಿರುವ ಬಗ್ಗೆ ಉಲ್ಲೇಖವಿದ್ದು, ಸುಮಾರು 74 ಕೋಟಿ ಬೇನಾಮಿ ಆಸ್ತಿ ಪತ್ತೆ ಹಚ್ಚಿರುವುದಾಗಿ ತಿಳಿಸಿದ್ದಾರೆ.