ETV Bharat / state

ತೆರಿಗೆ ವಂಚನೆ ಆರೋಪ: ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಕಂಪನಿಗಳ ಮೇಲೆ IT ದಾಳಿ

ರಾಜಧಾನಿಯ ಹಲವು ಕಂಪನಿಗಳಿಗೆ ಇಂದು ಮುಂಜಾನೆಯೇ ಆದಾಯ ತೆರಿಗೆ ಇಲಾಖೆ (ಐಟಿ) ಶಾಕ್‌ ನೀಡಿದೆ.

Representative image
ಬೆಂಗಳೂರು
author img

By ETV Bharat Karnataka Team

Published : Sep 27, 2023, 10:37 AM IST

ಬೆಂಗಳೂರು: ಇಂದು ಮುಂಜಾನೆ ನಗರದ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ (IT) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿ.ವಿ.ರಾಮನ್ ನಗರದಲ್ಲಿರುವ ಬಾಗಮನೆ ಟೆಕ್ ಪಾರ್ಕ್ ಕ್ಯಾಂಪಸ್‌ ಒಳಗಿನ ಕೆಲವು ಖಾಸಗಿ ಕಂಪನಿಗಳು ಹಾಗೂ ಹುಳಿಮಾವು ಬಳಿಯಿರುವ ಐಟಿ ಕಂಪನಿಯೂ ಸೇರಿದಂತೆ 10ಕ್ಕೂ ಹೆಚ್ಚು ಕಡೆಗಳಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ‌. ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: 25 ಕೋಟಿ ರೂ ತೆರಿಗೆ ವಂಚನೆ: ಕೇರಳದ ಯೂಟ್ಯೂಬರ್​ಗಳ ಮೇಲೆ IT ದಾಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.