ETV Bharat / state

“ಬಾಂಬೆ ಟೀಂ” ಎಂಬಂತಹ ಪದಗಳನ್ನು ಬಳಸುವುದು ನಿಜಕ್ಕೂ ಬೇಸರದ ಸಂಗತಿ: ಮಹದೇವಪ್ಪ - h c mahadevappa,

ರಾಜ್ಯದ ಜನರು ಪ್ರತಿದಿನವೂ 17 ಜನ “ನಮ್ಮ ಬಾಂಬೆ ಟೀಂ” ನಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ಹೇಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನ ಸಾಮಾನ್ಯರಿಂದ ಅಧಿಕಾರ ಪಡೆದವರು “ಬಾಂಬೆ ಟೀಂ” ಎಂಬಂತಹ ಪದಗಳನ್ನು ಬಳಸುವುದು ದೊಡ್ಡ ಅವಮಾನ ಎಂದು ಮಾಜಿ ಸಚಿವ ಹೆಚ್. ಸಿ ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.

Mahadevappa
ಮಹದೇವಪ್ಪ
author img

By

Published : Jun 16, 2021, 10:34 PM IST

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಜತೆ ಕೈಜೋಡಿಸಿದ 17 ಮಂದಿ ತಮ್ಮಿಂದಲೇ ಸರ್ಕಾರ ರಚನೆಯಾಗಿದೆ ಎಂದು ಹೇಳಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಮಾಜಿ ಸಚಿವ ಹೆಚ್. ಸಿ. ಮಹದೇವಪ್ಪ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಒಂದು ಬಾರಿಯೂ ಬಹುಮತ ಪಡೆಯದೇ ಬರೀ ಅಕ್ರಮ ಮತ್ತು ವಾಮಮಾರ್ಗದ ಮೂಲಕ ಅಧಿಕಾರ ಪಡೆದ ರಾಜ್ಯ ಬಿಜೆಪಿ ಪಕ್ಷದ ದುರಾಡಳಿತದಲ್ಲಿ ಜನ ಸಾಮಾನ್ಯರ ಪರಿಸ್ಥಿತಿ ಏನಾಗಿದೆ ಎಂಬುದನ್ನು ಸ್ವತಃ ಜನರೇ ಹೇಳುತ್ತಿದ್ದಾರೆ ಮತ್ತು ಅನುಭವಿಸುತ್ತಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರ್ಕಾರದ ನಡುವೆ ಸಾಮರಸ್ಯ ಮತ್ತು ಹೊಂದಾಣಿಕೆ ಇಲ್ಲದೇ ರಾಜಕೀಯ ವ್ಯವಸ್ಥೆಯೇ ಕೆಳ ಮಟ್ಟಕ್ಕೆ ಹೊರಟು ಹೋಗಿದೆ. ಸದಾ ವಾಮ ಮಾರ್ಗದಲ್ಲಿ ಅಧಿಕಾರ ನಡೆಸುತ್ತಿರುವ ಇವರಿಗೆ ಯಾವಾಗಲೂ ಕೂಡಾ ಮಾನಸಿಕ ಸ್ಥೈರ್ಯವಿಲ್ಲ ಎಂದಿದ್ದಾರೆ.

ರಾಜಕೀಯ ಪಕ್ಷವೊಂದರಲ್ಲಿ ಶಾಸಕರ ಅಧಿಕಾರ ಬದಲಾವಣೆ ಎಂಬುದು ಆಯಾ ಪಕ್ಷಕ್ಕೆ ಸಂಬಂಧಿಸಿದ ಆಂತರಿಕ ಸಂಗತಿಯಾದರೂ ಕೂಡಾ ಅದರಿಂದ ಜನ ಸಾಮಾನ್ಯರ ಬದುಕಿನ ಮೇಲೆ ಯಾವುದೇ ಕೆಟ್ಟ ಪರಿಣಾಮ ಉಂಟಾಗಬಾರದು. ಆದರೆ ಬಿಜೆಪಿಗರ ಆಡಳಿತದಲ್ಲಿ ಇದೀಗ ಅಂತಹ ಕೆಟ್ಟ ಪರಿಣಾಮವೇ ಅಧಿಕವಾಗಿದೆ. ಇದಿಷ್ಟು ಸಾಲದೆಂಬಂತೆ ದಿನವೂ 17 ಜನರು “ನಮ್ಮ ಬಾಂಬೆ ಟೀಂ” ನಿಂದಾಗಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂತು ಎಂದು ಹೇಳುತ್ತಿದ್ದು, ನಿಜಕ್ಕೂ ಬೇಸರದ ಸಂಗತಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನ ಸಾಮಾನ್ಯರಿಂದ ಅಧಿಕಾರ ಪಡೆದವರ ಕುರಿತು “ಬಾಂಬೆ ಟೀಂ” ಎಂಬಂತಹ ಪದಗಳನ್ನು ಬಳಸುವುದು ನಿಜಕ್ಕೂ ಬೇಸರದ ಸಂಗತಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಓದಿ: ಉತ್ತರಕನ್ನಡದಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆ : ಕಡಲತೀರದ ಜನರಲ್ಲಿ ಹೆಚ್ಚಿದ ಆತಂಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.