ETV Bharat / state

ದೇಶದ 60 ಸ್ಟಾರ್ಟ್​​​ಅಪ್​ಗಳ ಜೊತೆ ಇಸ್ರೋ ಒಪ್ಪಂದ: ಬಾಹ್ಯಾಕಾಶ ಕ್ಷೇತ್ರದಲ್ಲಿ ದೊರೆಯಲಿದೆ ವಿಪುಲ ಅವಕಾಶ

author img

By

Published : Jul 12, 2022, 4:18 PM IST

ಬಾಹ್ಯಾಕಾಶದಲ್ಲಿ ವಿವಿಧ ಯೋಜನೆಗಳನ್ನು ಕೈಗೊಳ್ಳಲು ಇಸ್ರೋ ದೇಶದ 60 ನವೋದ್ಯಮಗಳೊಂದಿಗೆ ಕೈಜೋಡಿಸಿದೆ. ಇದರಿಂದಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಲಭ್ಯವಾಗಲಿದೆ ಎಂದು ಇಸ್ರೋ ಹೇಳಿದೆ.

isro-signs-agreement-with-60-start-ups-for-their-space-project
ದೇಶದ 60 ಸ್ಟಾರ್ಟಪ್‌ಗಳ ಜೊತೆ ಇಸ್ರೊ ಒಪ್ಪಂದ: ಬಾಹ್ಯಾಕಾಶ ಕ್ಷೇತ್ರದಲ್ಲಿ ದೊರೆಯಲಿದೆ ವಿಪುಲ ಅವಕಾಶಗಳು

ಬೆಂಗಳೂರು : ಬಾಹ್ಯಾಕಾಶ ಕಸ ನಿರ್ವಹಣೆ ಸೇರಿದಂತೆ ವಿವಿಧ ಪ್ರಾಜೆಕ್ಟ್‌ಗಳನ್ನು ನಿರ್ವಹಿಸಲು ದೇಶದ 60 ಸ್ಟಾರ್ಟಪ್‌ಗಳು ಇಸ್ರೋದೊಂದಿಗೆ ಕೈಜೋಡಿಸಿದೆ. ಹೀಗಾಗಿ ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ತೆರೆದುಕೊಳ್ಳಲಿದೆ ಎಂದು ಇಸ್ರೊ ಹೇಳಿದೆ.

ನ್ಯಾನೊ ಸ್ಯಾಟ್‌ಲೈಟ್‌ ನಿರ್ಮಾಣ, ರಾಕೆಟ್‌ ನಿರ್ಮಾಣ, ಗ್ರೌಂಡ್‌ ಸಿಸ್ಟಮ್‌, ರಿಸರ್ಚ್‌ ಸೇರಿದಂತೆ ಅಂತರಿಕ್ಷ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಲು ಈ ಸ್ಟಾರ್ಟಪ್‌ಗಳು ಜೊತೆಯಾಗಿದೆ. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ವಲಯಕ್ಕೆ ಹೆಚ್ಚಿನ ಅವಕಾಶ ನೀಡಿದ ಬಳಿಕ ಸುಮಾರು 60 ಸ್ಟಾರ್ಟಪ್‌ಗಳು ಇದಕ್ಕೆ ಕೈಜೋಡಿಸಿವೆ. ಇಸ್ರೋ ನ್ಯೂ ಸ್ಪೇಸ್ ಲಿಮಿಟೆಡ್ ಮೂಲಕ ಮುಂದಿನ ಕೆಲಸಗಳು ಕಾರ್ಯರೂಪಕ್ಕೆ ಬರಲಿದೆ ಎಂದು ಮಾಹಿತಿ ನೀಡಿದೆ.

isro-signs-agreement-with-60-start-ups-for-their-space-project
ದೇಶದ 60 ಸ್ಟಾರ್ಟಪ್‌ಗಳ ಜೊತೆ ಇಸ್ರೊ ಒಪ್ಪಂದ

ಸರ್ಕಾರದ ಬಾಹ್ಯಾಕಾಶ ಸಂಸ್ಥೆ ಮತ್ತು ಖಾಸಗಿ ವಲಯದ ಜತೆ ಸೇರಿದಾಗ ನಮಗೆ ಆಕಾಶದಲ್ಲಿ ಹೆಚ್ಚಿನ ಅವಕಾಶಗಳು ದೊರಕುತ್ತದೆ. ವಿವಿಧ ಕಂಪನಿಗಳು ನಾನೋ ಉಪಗ್ರಹಗಳು, ಉಡಾವಣೆಯ ವಾಹಕಗಳು ಸಂಶೋಧನಾ ವಲಯಗಳಲ್ಲಿ ನವೋದ್ಯಮಗಳು ತೊಡಗಿಸಿಕೊಂಡಿವೆ ಎಂದು ಹೇಳಿದೆ.

ಅಂತರಿಕ್ಷದಲ್ಲಿ ಅಪರಿಮಿತ ಅವಕಾಶ : ಕಕ್ಷೆಯಲ್ಲಿ ಉಪಗ್ರಹಗಳು ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದು, ಕ್ಷುದ್ರಗ್ರಹಗಳ ದಾಳಿಯ ಮಾಹಿತಿ, ಪರಿಪಕ್ವವಾದ ಹವಾಮಾನ ಮಾಹಿತಿ ಸೇರಿದಂತೆ ಅಂತರಿಕ್ಷದಲ್ಲಿ ಅಪರಿಮಿತ ಅವಕಾಶಗಳಿವೆ ಎಂದು ಇದೇ ವೇಳೆ ಹೇಳಿದೆ.

ಬಾಹ್ಯಾಕಾಶದಲ್ಲಿನ ಸ್ಪೇಸ್‌ ಜಂಕ್‌: ಬಾಹ್ಯಾಕಾಶದಲ್ಲಿ ತ್ಯಾಜ್ಯ (ಸ್ಪೇಸ್‌ ಜಂಕ್‌) ತುಂಬಿದೆ. ಮನುಷ್ಯರು ಹೋದಲೆಲ್ಲ ಕಸ ತುಂಬುವುದು ಸಾಮಾನ್ಯ. ಭೂಮಿಯಲ್ಲಿ ಮಾತ್ರವಲ್ಲ ಬಾಹ್ಯಾಕಾಶದಲ್ಲಿ ಕೂಡ ಕಸ/ತ್ಯಾಜ್ಯಗಳು ತುಂಬಿಕೊಂಡಿವೆ. ಮಾನವರು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಿದ ಉಪಗ್ರಹಗಳು, ನೌಕೆ, ರಾಕೆಟ್​ ಹಾಗೂ ಇತರ ಸಂಶೋಧನಾ ಸಾಧನಗಳಲ್ಲಿ ಕೆಲವು ವಿಫಲವಾಗಿ ನಿಷ್ಕ್ರಿಯಗೊಂಡಿರುತ್ತವೆ.

ಇವುಗಳ ಪಳೆಯುಳಿಕೆ ಅಥವಾ ಅವಶೇಷಗಳನ್ನೇ ಬಾಹ್ಯಾಕಾಶ ತ್ಯಾಜ್ಯ ಎಂದು ಕರೆಯಲಾಗುತ್ತದೆ. ಐಎಸ್4ಒಎಂ ಸೌಲಭ್ಯ ತ್ಯಾಜ್ಯ ನಿಗ್ರಹಿಸಲು ಒಂದು ಒಳ್ಳೆಯ ಉಪಕ್ರಮವಾಗಿದೆ ಎಂದು ಹೇಳಿದೆ.

6 ಸಾವಿರಕ್ಕೂ ಅಧಿಕ ಟನ್​​ ತ್ಯಾಜ್ಯ : ಪ್ರಸ್ತುತ ಸುಮಾರು 6 ಸಾವಿರಕ್ಕೂ ಅಧಿಕ ಟನ್​​ ತ್ಯಾಜ್ಯವಿದೆ ಎಂದು ಅಂದಾಜಿಸಲಾಗಿದೆ. ಬಾಹ್ಯಾಕಾಶ ಕಸವನ್ನು ಸಮರ್ಥವಾಗಿ ನಿಭಾಯಿಸಲು ಭಾರತ ಸೇರಿದಂತೆ ವಿವಿಧ ದೇಶಗಳು ಪ್ರಯತ್ನಿಸುತ್ತಿವೆ. ಭಾರತದ ಅಂತರಿಕ್ಷ ಸಂಸ್ಥೆಯೊಂದಿಗೆ ಮೈತ್ರಿ ಮಾಡಿಕೊಂಡ ಕೆಲವು ಸ್ಟಾರ್ಟ್​ ಅಪ್‌ಗಳೂ ಈ ನಿಟ್ಟಿನಲ್ಲಿ ಕೆಲಸ ಮಾಡಲಿವೆ. ಈ ಮೂಲಕ ಸ್ಚಚ್ಛ ಬಾಹ್ಯಾಕಾಶಕ್ಕೆ ಪ್ರಯತ್ನಿಸಲಿವೆ ಎಂದು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

2027ರ ವೇಳೆಗೆ ಇಸ್ರೊ ಮುಂಚೂಣಿಯಲ್ಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ 2027 ರ ವೇಳೆಗೆ ಇಸ್ರೊ ಮುಂಚೂಣಿಯಲ್ಲಿರಲಿದೆ. ಗಗನಯಾನ್ ಯೋಜನೆಯಲ್ಲಿ ಮಹಿಳಾ ರೋಬೊ ಕಳುಹಿಸಲು ಚಿಂತಿಸಲಾಗಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಪ್ರವಾಹದ ಹಾನಿ ಕುರಿತು ಸಿಎಂಗೆ ಮಾಹಿತಿ ನೀಡಿದ ಶಾಸಕ ಮಂಜುನಾಥ್

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.