ETV Bharat / state

ಸೂರ್ಯನ ಬಗ್ಗೆ ಗೊತ್ತಿರದ ಸಂಗತಿಯನ್ನು 'ಆದಿತ್ಯ-L1' ಅಧ್ಯಯನ ಮಾಡಲಿದೆ: ಇಸ್ರೋ ವಿಜ್ಞಾನಿ ಹೆಚ್.ಎನ್.ಸುರೇಶ್ ಕುಮಾರ್ - ಈಟಿವಿ ಭಾರತ್ ಕನ್ನಡ ಸುದ್ದಿ

ಸತತ ನಾಲ್ಕು ತಿಂಗಳ ದೀರ್ಘ ಪಯಣದಲ್ಲಿ ಆದಿತ್ಯ-L1 ಸಂಚರಿಸಿ ಅಲ್ಲಿಂದಲೇ ಸೂರ್ಯನ ಅಧ್ಯಯನ ನಡೆಸಲಿದೆ ಎಂದು ಇಸ್ರೋ ವಿಜ್ಞಾನಿ ಹೆಚ್‌.ಎನ್‌.ಸುರೇಶ್ ಕುಮಾರ್ ಹೇಳಿದರು.

ಅಮೋನಿಯಾ ಶಾಖ ಮುಕ್ತ ಯೋಗ್ಯ ಕೊಳವೆ' ಗುಣಮಟ್ಟ ಪರೀಕ್ಷೆ

author img

By ETV Bharat Karnataka Team

Published : Aug 28, 2023, 10:04 PM IST

Updated : Aug 28, 2023, 10:58 PM IST

ಇಸ್ರೋ ವಿಜ್ಞಾನಿ ಸುರೇಶ್ ಕುಮಾರ್ ಹೇಳಿಕೆ

ಆನೇಕಲ್ (ಬೆಂಗಳೂರು) : ಸೂರ್ಯನ ಆಕರ್ಷಣೆ ಮತ್ತು ಇಳೆಯ ಗುರುತ್ವಾಕರ್ಷಣೆ ಸಂಧಿಸುವ ಲೆಗ್ರೇಂಜ್ -1 ಸ್ಥಳ ಭುವಿಯಿಂದ 15 ಲಕ್ಷ ಕಿ.ಮೀ ಅಂತರದಲ್ಲಿದೆ. ಸತತ ನಾಲ್ಕು ತಿಂಗಳ ದೀರ್ಘ ಪಯಣದಲ್ಲಿ ಆದಿತ್ಯ-L1 ಸಂಚರಿಸಿ, ಅಲ್ಲಿಂದಲೇ ಸೂರ್ಯನ ಅಧ್ಯಯನ‌ ನಡೆಸಲಿದೆ. ಸೂರ್ಯನ ಬಗ್ಗೆ ಗೊತ್ತಿಲ್ಲದ ವಿಚಾರಗಳ ಕುರಿತು ನೌಕೆ ಅಧ್ಯಯನ ಮಾಡಲಿದೆ ಎಂದು ಇಸ್ರೋ ವಿಜ್ಞಾನಿ ಹೆಚ್‌.ಎನ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ಹೀಟ್​ ಪೈಪ್​ ಎಂಬುದು ಉಪಗ್ರಹದಲ್ಲಿರುವ ಅತಿಮುಖ್ಯವಾದ ಅಂಗ. ಈ ಹೀಟ್​ ಪೈಪ್ ಅ​ನ್ನು ಭಾರತ ದೇಶದಲ್ಲೇ ತಯಾರು ಮಾಡುವುದು ನಮ್ಮ ಬಹುದಿನದ ಕನಸು. ಅಜ್ರಿ ಸಂಸ್ಥೆಯವರು ನಮಗೆ ಹೀಟ್​ ಪೈಪ್ ರವಾನೆ ಮಾಡಲು ಮುಂದಾಗಿದ್ದಾರೆ. ಈಗಾಗಲೇ ನಮ್ಮ ಇಂಜಿನಿಯರ್​ಗಳು ಸರ್ಟಿಪೈಯ್ಡ್​ ಮಾಡಿರುವ 20 ಹೀಟ್​ಪೈಪ್​ಗಳನ್ನು ತಯಾರಿಸಿದ್ದಾರೆ. ಅದು ಸಂಪೂರ್ಣ ಗುಣಮಟ್ಟದ ಖಾತ್ರಿ ಮಾಡಿಸಿಕೊಂಡಿದೆ. ಆ ಪೈಪ್​ಗಳನ್ನು ಮೊದಲ ಬಾರಿಗೆ ನಮ್ಮ ಸಂಸ್ಥೆಗೆ ರವಾನಿಸುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ಭಾಗಿಯಾಗಬೇಕೆಂದು ನಮ್ಮನ್ನು ಕೇಳಿಕೊಂಡಿದ್ದರು ಎಂದರು.

ಇಸ್ರೋ ವಿಜ್ಞಾನಿ ಶಂಕರ್ ಹೇಳಿಕೆ

ಹೀಟ್​ ಪೈಪ್​ ಸ್ಯಾಟಲೈಟ್​ಗೆ ಮುಖ್ಯವಾಗಿ ಬೇಕಿರುವ ಉಪಕರಣ. ಅಜ್ರಿ ಸಂಸ್ಥೆಯವರು ಮುಂದೆ ಯೂರೋಪ್​, ಅಮೆರಿಕ ಎಲ್ಲಿ ಬೇಕಾದ್ರೂ ಸೇಲ್​ ಮಾಡಲಿ ಎಂದು ಆಶಿಸುತ್ತೇನೆ. ಇದೀಗ ಚಂದ್ರಯಾನ ಲ್ಯಾಂಡರ್ ತನ್ನಲ್ಲಿನ ಅಧ್ಯಯನ ವಾಹನವನ್ನು ಚಂದ್ರನ ಮೇಲಿರಿಸಿ ಯಶಸ್ವಿಯಾಗಿದೆ. ಮಂಗಳಯಾನ-2ಕ್ಕೆ ಸಿದ್ದತೆ ನಡೆಸುತ್ತಿದ್ದೇವೆ ಎಂದು ಇಸ್ರೋ ನಿರ್ದೇಶಕ ಶಂಕರ್ ಮಾಹಿತಿ ನೀಡಿದರು. ಜಿಗಣಿಯ 'ಅಜ್ರಿ' ಸಂಸ್ಥೆಯಿಂದ ಇಸ್ರೋ ಸಾಧಕರಿಗೆ ಸನ್ಮಾನ ನಡೆಯಿತು.

ಇದನ್ನೂ ಓದಿ: ಆ. 23 ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಣೆ... ವಿಕ್ರಮ ಇಳಿದ ತಾಣವನ್ನ’ಶಿವಶಕ್ತಿ’ ಪಾಯಿಂಟ್ ಎಂದು ಕರೆದ ಮೋದಿ!

ಇಸ್ರೋದ ಯು.ಆರ್.ರಾವ್ ಉಪಗ್ರಹ ಕೇಂದ್ರಕ್ಕೆ 'ಅಮೋನಿಯಾ ಶಾಖದ ಕೊಳವೆ' ಇನ್ನಿತರೆ ಬಿಡಿಭಾಗಗಳನ್ನು ಪೂರೈಸುವ ಪರಸ್ ಡಿಫೆನ್ಸ್ ಮತ್ತು ಸ್ಪೇಸ್ ಟೆಕ್ನಾಲಜೀಸ್ ಪ್ರೈ.ಲಿ ಯೋಜನೆಯಡಿ 'ಅಜ್ರಿ' ಸಂಸ್ಥೆಯ ಉತ್ಪನ್ನಗಳನ್ನು ಹಸ್ತಾಂತರಿಸಲಾಯಿತು. ಮುಂದಿನ ಬಾಹ್ಯಾಕಾಶ ಕಾರ್ಯಕ್ರಮಗಳಿಗೆ ಇದೇ ಅಜ್ರಿ ಸಂಸ್ಥೆಯ ಜಿಗಣಿ ಪರೀಕ್ಷಾ ಕೇಂದ್ರದಿಂದಲೇ ಪರಿಕರ ಪೂರೈಸುವ ಯೋಜನೆಗೆ ಚಾಲನೆ ನೀಡಲಾಯಿತು.

ದೇಶದಲ್ಲಿಯೇ ಇಸ್ರೋಗೆ ಅಮೋನಿಯಾ ಹೀಟ್ ಪೈಪ್ ಒದಗಿಸುವ ಎರಡನೇ ಸಂಸ್ಥೆ 'ಅಜ್ರಿ' ಆಗಿದೆ ಎಂದು ಅದರ ಸಂಸ್ಥಾಪಕ ಬಸವರಾಜ್ ಅಜ್ರಿ ತಿಳಿಸಿದರು. ದೇಶದ 60% ಸಲಕರಣೆಗಳಿಂದಲೇ ದೇಶೀ ಉಪಗ್ರಹಗಳು ನಿರ್ಮಾಣವಾಗುತ್ತಿರುವುದು ಹೆಮ್ಮೆ ಎಂದರು.

ಶ್ರೀಹರಿಕೋಟಾದಿಂದ ಉಡಾವಣೆ : ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಇದೀಗ ಸೂರ್ಯನ ಅಧ್ಯಯನಕ್ಕೆ ಮುಂದಾಗಿದೆ. ಆದಿತ್ಯ ಎಲ್​-1 ವೀಕ್ಷಣಾಲಯ ಹೊತ್ತ ರಾಕೆಟ್‌ ಅನ್ನು ಸೆಪ್ಟೆಂಬರ್​ 2ರಂದು ಬೆಳಗ್ಗೆ 11:50 ನಿಮಿಷಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಇಂದು (ಸೋಮವಾರ) ಘೋಷಿಸಿದೆ.

ಸೂರ್ಯನ ಅಧ್ಯಯನ ಮಾಡುವ ಭಾರತದ ಮೊಟ್ಟ ಮೊದಲ ಬಾಹ್ಯಾಕಾಶ ವೀಕ್ಷಣಾಲಯ ಇದಾಗಿದೆ. ಈ ಮಿಷನ್ ಭೂಮಿಯಿಂದ 1.5 ಮಿಲಿಯನ್ ಕಿಲೋಮೀಟರ್ ದೂರ ಕ್ರಮಿಸಲಿದೆ. ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಪ್ರಯಾಣ ಇದಾಗಿದೆ.

ಇದನ್ನೂ ಓದಿ: ಚಂದ್ರನ ಅಂಗಳದಲ್ಲಿ ಸಂಶೋಧನೆ ಹೇಗೆ?: ನೆಹರು ತಾರಾಲಯದ ಹಿರಿಯ ವಿಜ್ಞಾನಿ ಆನಂದ್ ಮಾಹಿತಿ

Last Updated : Aug 28, 2023, 10:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.