ETV Bharat / state

ರಾಜ್ಯದಲ್ಲಿ ಕಲ್ಲುಗಣಿಗಾರಿಕೆ ಸ್ಪೋಟ ಘಟನೆಗಳಿಗೆ ಅಂತ್ಯವೇ ಇಲ್ಲವೇ?: ಎಸ್​ಆರ್ ಪಾಟೀಲ್​​ - quarrying events in the state

ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿಯಲ್ಲಿ 22 ವೀರ ಯೋಧರು ಹುತಾತ್ಮರಾಗಿದ್ದಾರೆ. ಇದು ಅತ್ಯಂತ ನೋವಿನ ವಿಷಯ. ದೇಶ ವೀರ ಯೋಧರನ್ನು ಕಳೆದುಕೊಂಡಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಇಡೀ ದೇಶ ಅವರ ನೋವನ್ನು ಹಂಚಿಕೊಳ್ಳಲಿದೆ..

ಎಸ್​ಆರ್ ಪಾಟೀಲ್​​
ಎಸ್​ಆರ್ ಪಾಟೀಲ್​​
author img

By

Published : Apr 5, 2021, 6:00 PM IST

ಬೆಂಗಳೂರು : ಹಾಸನದಲ್ಲಿ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವ ಘಟನೆ ಖಂಡಿಸಿರುವ ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್, ಇಂತಹ ಘಟನೆಗಳಿಗೆ ಅಂತ್ಯವೇ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ ಸ್ಫೋಟದ ನಂತರ ಈಗ ಹಾಸನದಲ್ಲೂ ಅಂತದ್ದೇ ಘಟನೆ ನಡೆದಿದೆ. ಹಾಸನದ ಚಾಕೇನಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆಗೆ ಸ್ಫೋಟಕ ಸಂಗ್ರಹಿಸಿದ್ದ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ ವ್ಯಕ್ತಿಯೊಬ್ಬ ಮೃತನಾಗಿದ್ದಾನೆ, ಇಬ್ಬರು ಗಾಯಗೊಂಡಿದ್ದಾರೆ. ರಾಜ್ಯದಲ್ಲಿ ಈ ರೀತಿಯ ಘಟನೆಗಳಿಗೆ ಅಂತ್ಯವೇ ಇಲ್ಲವೇ?

  • ರಾಜ್ಯದಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸೂಕ್ತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದ್ಯಾವುದೂ ಇಲ್ಲದೇ ಎಚ್ಚರಿಕೆ ತಪ್ಪಿದ್ದೇ ದುರಂತಗಳಿಗೆ ಕಾರಣ. ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಿದಾಗ ಇಂತಹ ಘಟನೆಗಳು ಆಗುತ್ತವೆ. ಜಿಲ್ಲಾ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳ ಗಮನಕ್ಕೆ ಬಾರದೇ ಈ ಅಕ್ರಮ ಸಾಗಾಣಿಕೆ ಹೇಗೆ ನಡೆಯುತ್ತಿದೆ..? 3/4

    — S R Patil (@srpatilbagalkot) April 5, 2021 " class="align-text-top noRightClick twitterSection" data=" ">

ಒಂದರ ನಂತರ ಒಂದರಂತೆ ಸ್ಫೋಟಗಳು ನಡೆಯುತ್ತಿದ್ದರೂ ಬಿಜೆಪಿ ಸರ್ಕಾರ ಮೌನವಹಿಸಿರೋದು ಯಾಕೆ? ರಾಜ್ಯದಲ್ಲಿ ಸ್ಫೋಟಕಗಳ ಅಕ್ರಮ ಸಾಗಾಟ ಮತ್ತು ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ ಅನ್ನೋದಕ್ಕೆ ಶಿವಮೊಗ್ಗ, ಚಿಕ್ಕಬಳ್ಳಾಪುರ ಮತ್ತು ಈಗ ಹಾಸನದಲ್ಲಿ ನಡೆದಿರೋ ಘಟನೆಗಳೇ ಸಾಕ್ಷಿ ಎಂದಿದ್ದಾರೆ.

ನಿಯಮ ಉಲ್ಲಂಘನೆಯೇ ದುರಂತಗಳಿಗೆ ಕಾರಣ : ರಾಜ್ಯದಲ್ಲಿ ಸ್ಫೋಟಕಗಳನ್ನು ಸಾಗಿಸುವಾಗ ಸೂಕ್ತ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇದ್ಯಾವುದೂ ಇಲ್ಲದೇ ಎಚ್ಚರಿಕೆ ತಪ್ಪಿದ್ದೇ ದುರಂತಗಳಿಗೆ ಕಾರಣ. ನಿಯಮ ಉಲ್ಲಂಘಿಸಿ ಸಾಗಾಣಿಕೆ ಮಾಡಿದಾಗ ಇಂತಹ ಘಟನೆಗಳು ಆಗುತ್ತವೆ.

ಜಿಲ್ಲಾ ಹಾಗೂ ರಾಜ್ಯ ಗುಪ್ತಚರ ಅಧಿಕಾರಿಗಳ ಗಮನಕ್ಕೆ ಬಾರದೇ ಈ ಅಕ್ರಮ ಸಾಗಾಣಿಕೆ ಹೇಗೆ ನಡೆಯುತ್ತಿದೆ? ಗಣಿ ಇಲಾಖೆಯಲ್ಲಿ ಹಫ್ತಾ ವಸೂಲಿ ದಂಧೆ ನಡೆಯುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ.

ಅದರಿಂದಲೇ ಸ್ಫೋಟದಂತಹ ಅವಘಡಗಳು ನಡೆಯುತ್ತಿದೆ. ಸಿಎಂ ಬಿ ಎಸ್ ಯಡಿಯೂರಪ್ಪ ಮತ್ತು ಗಣಿ ಸಚಿವ ಮುರುಗೇಶ್ ನಿರಾಣಿ ಅವರೇ ಸ್ಫೋಟಕ ಸಂಗ್ರಹ ಮತ್ತು ಸಾಗಣೆ ಮೇಲೆ ನಿಯಂತ್ರಣಕ್ಕೆ ಕ್ರಮವಹಿಸಿ ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಯೋಧರಿಗೆ ಸಂತಾಪ : ಛತ್ತೀಸ್‌ಗಢದಲ್ಲಿ ನಕ್ಸಲರ ದಾಳಿಯಲ್ಲಿ 22 ವೀರ ಯೋಧರು ಹುತಾತ್ಮರಾಗಿದ್ದಾರೆ. ಇದು ಅತ್ಯಂತ ನೋವಿನ ವಿಷಯ. ದೇಶ ವೀರ ಯೋಧರನ್ನು ಕಳೆದುಕೊಂಡಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಇಡೀ ದೇಶ ಅವರ ನೋವನ್ನು ಹಂಚಿಕೊಳ್ಳಲಿದೆ. ಯೋಧರ ಬಲಿದಾನವನ್ನು ದೇಶ ಎಂದಿಗೂ ಮರೆಯುವುದಿಲ್ಲ ಎಂದು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ.. ಬಿಜೆಪಿಯಲ್ಲಿ ವಂಶಪಾರಂಪರ್ಯ ಇಲ್ಲ, ಬಿಎಸ್​ವೈ ಪಕ್ಷದ ನಾಯಕರೇ ಹೊರತು ಮಾಲೀಕರಲ್ಲ : ಸಿ ಟಿ ರವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.