ETV Bharat / state

ಕೊರೊನಾ ನಡುವೆ ಚುನಾವಣೆ ಬೇಕಿರಲಿಲ್ಲ: ಹೆಚ್‌.ಡಿ. ಕುಮಾರಸ್ವಾಮಿ - Former CM H D Kumaraswamy

ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ವಿವೇಚನೆ ಇದ್ದಿದ್ದರೆ ವಿಧಾನ ಪರಿಷತ್ ಚುನಾವಣೆ, ಉಪಚುನಾವಣೆ ಹಾಗೂ ಬಿಹಾರ ಸೇರಿದಂತೆ ದೇಶದ ಹಲವು ಕಡೆ ಚುನಾವಣೆಗಳನ್ನು ನಡೆಸಬಾರದಿತ್ತು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Is there a need for an election amid Corona?: Kumaraswamy Question
ಕೊರೊನಾ ನಡುವೆ ಚುನಾವಣೆ ನಡೆಸುವ ಅಗತ್ಯವಿದೆಯೇ?: ಕುಮಾರಸ್ವಾಮಿ ಪ್ರಶ್ನೆ
author img

By

Published : Oct 8, 2020, 3:55 PM IST

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರಕ್ಕೆ ವಿವೇಚನೆ ಇದ್ದಿದ್ದರೆ ವಿಧಾನ ಪರಿಷತ್ ಚುನಾವಣೆ, ಉಪಚುನಾವಣೆ ಹಾಗೂ ಬಿಹಾರ ಸೇರಿದಂತೆ ದೇಶದ ಹಲವೆಡೆ ಚುನಾವಣೆಗಳನ್ನು ನಡೆಸಬಾರದಿತ್ತು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

ಕೊರೊನಾ ನಡುವೆ ಚುನಾವಣೆ ನಡೆಸುವ ಅಗತ್ಯವಿದೆಯೇ?: ಕುಮಾರಸ್ವಾಮಿ ಪ್ರಶ್ನೆ

ಪಕ್ಷದ ಕಚೇರಿ ಜೆ.ಪಿ. ಭವನದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶದಲ್ಲಿ ಅದರಲ್ಲೂ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ಅವಶ್ಯಕತೆ ಇದೆಯಾ? ಹಳ್ಳಿಗಳಿಗೆ ಹೋದರೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟ. ಇನ್ನು ಮೂರು ತಿಂಗಳು ಚುನಾವಣೆಗಳನ್ನು ಮುಂದೆ ಹಾಕಿದ್ದರೆ ಏನಾಗುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಶಾಲಾ-ಕಾಲೇಜು ತೆರೆಯುವುದು ಬೇಡ:

ಕೊರೊನಾ ಬಗ್ಗೆ ಮಕ್ಕಳ ಪೋಷಕರಲ್ಲಿ ಇನ್ನೂ ಆತಂಕ ಇದೆ. ಹಾಗಾಗಿ, ಸದ್ಯಕ್ಕೆ ರಾಜ್ಯದಲ್ಲಿ ಶಾಲಾ-ಕಾಲೇಜು ಪ್ರಾರಂಭ ಮಾಡುವುದು ಬೇಡ ಎಂದು ಕುಮಾರಸ್ವಾಮಿ ಸಲಹೆ ನೀಡಿದರು. ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳದೆ ಶಾಲಾ-ಕಾಲೇಜುಗಳನ್ನು ಪ್ರಾರಂಭ ಮಾಡುವುದು ಸೂಕ್ತವಲ್ಲ. ಏಕಾಏಕಿ ಶಾಲೆ ಪ್ರಾರಂಭ ಮಾಡಿ ಮಕ್ಕಳ ಜೊತೆ ಚೆಲ್ಲಾಟ ಆಡುವುದು ಬೇಡ. ಸರ್ಕಾರ ಶಾಲೆ ಪ್ರಾರಂಭ ಮಾಡುವ ಬಗ್ಗೆ ತೆಗೆದುಕೊಂಡಿರುವ ನಿರ್ಧಾರ ವಾಪಸ್ ಪಡೆಯಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.