ETV Bharat / state

ದಿಢೀರ್ ಮುಖ್ಯಮಂತ್ರಿಯಾದವರು ಯಶಸ್ವಿ ಆಡಳಿತ ನಡೆಸಲು ಸಾಧ್ಯವೇ?; ಇತಿಹಾಸ ಹೀಗೆನ್ನುತ್ತೆ..

ಬಸವರಾಜ ಬೊಮ್ಮಾಯಿ ಅವರೀಗ ಏಕಕಾಲಕ್ಕೆ ಯಡಿಯೂರಪ್ಪ ಮತ್ತವರ ವಿರೋಧಿಗಳನ್ನು ನಿಭಾಯಿಸಬೇಕಾಗಿದೆ. ಎರಡು ದೋಣಿಗಳಲ್ಲಿ ಕಾಲಿಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಯಾವುದೇ ದೋಣಿ ಮುಂದೆ ಹೋದರೂ ಕಷ್ಟ. ಎರಡೂ ದೋಣಿಗಳನ್ನು ಬ್ಯಾಲೆನ್ಸ್ ಮಾಡುವ ಅನಿವಾರ್ಯತೆ ಅವರ ಮೇಲಿದೆ. ಇದರ ಮಧ್ಯೆ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಲು ಸಾಧ್ಯವೇ?ಎಂಬುದು ಸದ್ಯದ ಬಹುಮುಖ್ಯ ಪ್ರಶ್ನೆ..

is sudden chief minister succeeded in their tenure?
ದಿಢೀರ್ ಮುಖ್ಯಮಂತ್ರಿಯಾದವರು
author img

By

Published : Sep 28, 2021, 7:37 PM IST

ಬೆಂಗಳೂರು : ರಾಜ್ಯ ಬಿಜೆಪಿಯಲ್ಲಾದ ವಿದ್ಯಮಾನಗಳಿಂದ ಬಸವರಾಜ ಬೊಮ್ಮಾಯಿ ಅವರು ದಿಢೀರ್ ಮುಖ್ಯಮಂತ್ರಿ ಗದ್ದುಗೆ ಏರಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿ ಎಸ್ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಳಿಯುವುದು ಅನಿವಾರ್ಯವಾದಾಗ, ದಿಢೀರನೆ ಬಸವರಾಜ ಬೊಮ್ಮಾಯಿ ಆ ಸ್ಥಾನ ಅಲಂಕರಿಸಿದ್ದು ಬಿಜೆಪಿ ವಲಯದಲ್ಲೇ ಅಚ್ಚರಿ ಮೂಡಿಸಿದಂತೂ ಸತ್ಯ.

ಆದರೆ, ರಾಜ್ಯಕ್ಕೆ ದಕ್ಕಿದ ದಿಢೀರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯಶಸ್ವಿ ಆಡಳಿತ ನೀಡಲು ಸಾಧ್ಯವೇ? ಎಂಬುದು ಹೇಗೆ ಕುತೂಹಲದ ಪ್ರಶ್ನೆ. ಜೊತೆಗೆ ದಿಢೀರ್ ಮುಖ್ಯಮಂತ್ರಿಗಳಾದವರು ಯಶಸ್ವಿಯಾದ ಉದಾಹರಣೆಗಳು ಇತಿಹಾಸದಲ್ಲಿ ವಿರಳ. ಕರ್ನಾಟಕದಲ್ಲಿ ದಿಢೀರ್ ಮುಖ್ಯಮಂತ್ರಿಗಳ ಪರಂಪರೆ ಇಂದು ನಿನ್ನೆಯದಲ್ಲ. ಇದಕ್ಕೆ ಇತಿಹಾಸವೇ ಇದೆ.

ದಿಢೀರ್ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ : ದಿಢೀರನೆ ಮುಖ್ಯಮಂತ್ರಿಯಾದ ಕಡಿದಾಳ್‌ ಮಂಜಪ್ಪ ಅವರಿಂದ ಆರಂಭವಾಗುತ್ತದೆ. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿಯಾಗಿದ್ದರು.

ಆ ಸಂದರ್ಭದಲ್ಲಿ ಕೆಂಗಲ್ ಹನುಮಂತಯ್ಯ ಹಾಗೂ ಸಾಹುಕಾರ್‌ ಚೆನ್ನಯ್ಯ ನಡುವಿನ ಸಂಘರ್ಷ ಹೆಚ್ಚಾದಾಗ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಚೆನ್ನಯ್ಯ ಅವರ ಬೆಂಬಲಕ್ಕೆ ನಿಂತಾಗ, ಇದರ ಪರಿಣಾಮವಾಗಿ ಕೆಂಗಲ್‌ ಹನುಮಂತಯ್ಯ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವ ಪರಿಸ್ಥಿತಿ ಬರುತ್ತದೆ.

ಈ ಹಂತದಲ್ಲಿ ಉದ್ಭವಿಸಿದ ದಿಢೀರ್ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರು. ಆದರೆ, ಅವರು ಬಹುಕಾಲ ಆ ಕುರ್ಚಿಯಲ್ಲಿ ಕೂರಲು ಸಾಧ್ಯವಾಗುವುದಿಲ್ಲ. ಕೆಲವೇ ತಿಂಗಳ ಕಾಲ ಅವರು ಸಿಎಂ ಹುದ್ದೆಯಲ್ಲಿ ಕೂರಲು ಸಾಧ್ಯವಾಗುತ್ತದೆ. ನಂತರ ಎಸ್ ಆರ್ ಕಂಠಿ 1962ರಲ್ಲಿ ದಿಢೀರ್ ಮುಖ್ಯಮಂತ್ರಿಯಾಗುತ್ತಾರೆ.

ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸದುರ್ಗ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಸ್. ನಿಜಲಿಂಗಪ್ಪ ಅವರು ಸೋಲುಂಡಿರುತ್ತಾರೆ. ಆ ವೇಳೆ ಚುನಾವಣೆವರೆಗೂ ಬಿ ಡಿ ಜತ್ತಿ ಸಿಎಂ ಆಗಿದ್ದರೂ, ಚುನಾವಣೆ ಬಳಿಕ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿರುತ್ತದೆ. ಇದರ ಬಗ್ಗೆ ಮಾಹಿತಿ ಅರಿತ ವಿರೋಧಿಗಳು ನಿಜಲಿಂಗಪ್ಪ ಅವರಿಗೆ ಅಡ್ಡಗಾಲಾಗಿ, ಜಾತಿಯ ಒಳಪಂಗಡಗಳ ರಾಜಕೀಯ ಅಸ್ತ್ರ ಉಪಯೋಗಿಸಿ ಅವರು ಸೋಲುವಂತೆ ಮಾಡುತ್ತಾರೆ.

ದಿಢೀರನೆ ಮುಖ್ಯಮಂತ್ರಿಯಾಗಿದ್ದ ಎಸ್ ಆರ್ ಕಂಠಿ : ಈ ಹಂತದಲ್ಲಿ ಬಿ ಡಿ ಜತ್ತಿ ಅವರೇ ಪುನ: ಮುಖ್ಯಮಂತ್ರಿಯಾಗುವ ಲಕ್ಷಣಗಳು ಕಂಡಾಗ ನಿಜಲಿಂಗಪ್ಪ ಬಣ ತಿರುಗಿ ಬೀಳುತ್ತದೆ. ಅಷ್ಟೇ ಅಲ್ಲ, ತನಗಿರುವ ಬಲದಿಂದ ಎಸ್.ಆರ್.ಕಂಠಿ ಎಂಬ ನಾಯಕ ಮೇಲೆದ್ದು ಕೂರುವಂತೆ ಮಾಡುತ್ತದೆ.

ಶಾಸಕಾಂಗ ಪಕ್ಷದಲ್ಲಿ ನಿಜಲಿಂಗಪ್ಪ ಬಣ ಪವರ್‌ ಫುಲ್‌ ಆಗಿದ್ದರಿಂದ ಬಿ ಡಿ ಜತ್ತಿ ಅಸಹಾಯಕರಾಗುತ್ತಾರೆ. ಎಸ್.ಆರ್.ಕಂಠಿ ದಿಢೀರನೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ. ಆದರೆ, ಕೆಲವೇ ಕಾಲದಲ್ಲಿ ನಿಜಲಿಂಗಪ್ಪ ಅವರು ಉಪ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಗೆದ್ದ ನಿಜಲಿಂಗಪ್ಪ ಅವರಿಗೆ ಕುರ್ಚಿ ಬಿಟ್ಟು ಕೊಡುವುದರೊಂದಿಗೆ ಎಸ್.ಆರ್. ಕಂಠಿ ಯುಗ ಮುಕ್ತಾಯವಾಗುತ್ತದೆ.

ವೀರೇಂದ್ರ ಪಾಟೀಲ್​​ಗೆ ಅವಕಾಶ : ಇದಾದ ಬಳಿಕ ಕರ್ನಾಟಕದಲ್ಲಿ ದಿಢೀರ್ ಮುಖ್ಯಮಂತ್ರಿಯಾಗಿ ಉದ್ಭವಿಸಿದ ನಾಯಕ ಎಂದರೆ ವೀರೇಂದ್ರ ಪಾಟೀಲ್.‌ 1967ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾದ ನಿಜಲಿಂಗಪ್ಪ ಅವರು ಮರು ವರ್ಷವೇ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗುತ್ತಾರೆ.

ಹೀಗೆ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸನ್ನಿವೇಶ ಎದುರಾಗಿದ್ದರಿಂದ ನಿಜಲಿಂಗಪ್ಪ ಅವರು ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ. ಈ ಹಂತದಲ್ಲಿ ಮುಖ್ಯಮಂತ್ರಿಯಾಗಲು ನಿಜಲಿಂಗಪ್ಪ ಅವರು ಮೊದಲ ಆಫರ್‌ ಅನ್ನು ತಮ್ಮ ಶಿಷ್ಯ ರಾಮಕೃಷ್ಣ ಹೆಗಡೆ ಅವರಿಗೆ ಕೊಡುತ್ತಾರೆ.

ಆದರೆ, ಶಾಸಕಾಂಗದಲ್ಲಿ ಲಿಂಗಾಯತರ ಬಲ ಹೆಚ್ಚು ಇದ್ದ ಕಾರಣ ನನ್ನ ಆಯ್ಕೆಯನ್ನು ಅವರು ವಿರೋಧಿಸಬಹುದು ಎನ್ನುವ ಹೆಗಡೆ ಆ ಆಫರ್‌ ಅನ್ನು ನಿರಾಕರಿಸುತ್ತಾರೆ. ಈ ಸಂದರ್ಭದಲ್ಲಿ ವೀರೇಂದ್ರ ಪಾಟೀಲ್‌ ಅವಕಾಶ ಪಡೆಯುತ್ತಾರೆ. ಆದರೆ, 1971ರ ಲೋಕಸಭಾ ಚುನಾವಣೆಯಲ್ಲಿ ಅವರ ನೇತೃತ್ವದ ಕಾಂಗ್ರೆಸ್(ಓ) ಸೋಲುತ್ತದೆ.

ಇದರ ಪರಿಣಾಮವಾಗಿ ವೀರೇಂದ್ರ ಪಾಟೀಲರ ಸರ್ಕಾರ ಉರುಳುತ್ತದೆ. ಮುಂದೆ ಕರ್ನಾಟಕದಲ್ಲಿ ದಿಢೀರ್ ಮುಖ್ಯಮಂತ್ರಿಯಾಗಿದ್ದು 1978ರಲ್ಲಿ. ಆ ಹೊತ್ತಿಗೆ ಮುಖ್ಯಮಂತ್ರಿ ದೇವರಾಜ ಅರಸು ಹಾಗೂ ಇಂದಿರಾಗಾಂಧಿ ನಡುವಣ ವಿಶ್ವಾಸ ಹಳಸಿಹೋಗಿರುತ್ತದೆ.

ಇದೇ ಕಾರಣಕ್ಕಾಗಿ ಅರಸರನ್ನು ಕೆಳಗಿಳಿಸಲು ಮುಂದಾದ ಇಂದಿರಾಗಾಂಧಿ ಅವರ ಕಣ್ಣಿಗೆ ಬಿದ್ದವರೇ ಆರ್.ಗುಂಡೂರಾವ್. ತಮ್ಮ ತಪ್ಪು ನಿರ್ಧಾರಗಳಿಂದ ರಾಜ್ಯದಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರ್ಕಾರ ಬರಲು ಕಾರಣರಾಗಿದ್ದೇ ಆರ್.ಗುಂಡೂರಾವ್ ಅವರು.

ರಾಮಕೃಷ್ಣ ಹೆಗಡೆ : 1983ರಲ್ಲಿ ಗುಂಡೂರಾವ್ ಸರ್ಕಾರ ಪತನವಾದ ನಂತರ ದಿಢೀರ್ ಮುಖ್ಯಮಂತ್ರಿಯಾಗಿ ಉದ್ಭವಿಸುವವರು ರಾಮಕೃಷ್ಣ ಹೆಗಡೆ. ಅಂದು ಚುನಾವಣೆಗಳಲ್ಲಿ ಜನತಾರಂಗ ಅಧಿಕಾರ ಹಿಡಿಯುವ ಸನ್ನಿವೇಶ ನಿರ್ಮಾಣವಾದಾಗ ಸಿಎಂ ಹುದ್ದೆಯ ರೇಸಿನಲ್ಲಿ ಕ್ರಾಂತಿರಂಗದ ನಾಯಕ ಎಸ್.ಬಂಗಾರಪ್ಪ, ಜನತಾ ಪಕ್ಷದ ನಾಯಕರಾದ ಹೆಚ್.ಡಿ.ದೇವೇಗೌಡ ಮತ್ತು ಎಸ್.ಆರ್.ಬೊಮ್ಮಾಯಿ ಸಿಎಂ ಹುದ್ದೆಯ ಆಕಾಂಕ್ಷಿಗಳಾಗಿರುತ್ತಾರೆ. ಆದರೆ, ರಾಷ್ಟ್ರ ನಾಯಕ ಚಂದ್ರಶೇಖರ್‌ ಅವರ ಮೂಲಕ ಗೇಮ್‌ ಪ್ಲಾನ್ ರೂಪಿಸಿ ರಾಮಕೃಷ್ಣ ಹೆಗಡೆ ಸಿಎಂ ಹುದ್ದೆಯ ಮೇಲೆ ಬಂದು ಕೂರುತ್ತಾರೆ.

ದಿಢೀರ್ ಮುಖ್ಯಮಂತ್ರಿಯಾದ ಕಾರಣಕ್ಕಾಗಿಯೇ ರಾಮಕೃಷ್ಣ ಹೆಗಡೆ ಅವರು ಎರಡು ವರ್ಷಗಳ ಕಾಲ ಮುಜುಗರ ಅನುಭವಿಸಬೇಕಾಗುತ್ತದೆ. ಒಂದೆಡೆ ಬೆಂಬಲ ನೀಡಿದ ಬಿಜೆಪಿ, ಮತ್ತೊಂದೆಡೆ ದೇವೇಗೌಡರ ಸಹಕಾರದಿಂದ ಸಿಎಂ ಆದ ಮುಲಾಜು. ಹೀಗಾಗಿ, 1984ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಎದುರು ಜನತಾ ಪಕ್ಷಕ್ಕೆ ಹೀನಾಯ ಸೋಲಾಗುತ್ತದೆ.

ಇದೇ ನೆಪವಾಗಿಟ್ಟುಕೊಂಡು ಅವರು ವಿಧಾನಸಭೆಯನ್ನು ವಿಸರ್ಜಿಸುತ್ತಾರೆ. ಸ್ವಯಂ ಬಲದ ಮೇಲೆ ಪಕ್ಷ ಅಧಿಕಾರಕ್ಕೆ ಬರುವಂತೆ ಮಾಡಿ ಬಲಿಷ್ಠ ಮುಖ್ಯಮಂತ್ರಿಯಾಗಿ ಹೊರ ಹೊಮ್ಮುತ್ತಾರೆ. ಇದರ ನಂತರ ದಿಢೀರ್ ಮುಖ್ಯಮಂತ್ರಿಯಾದವರು ಬಸವರಾಜ ಬೊಮ್ಮಾಯಿ ಅವರ ತಂದೆ ಎಸ್.ಆರ್.ಬೊಮ್ಮಾಯಿ. 1988ರಲ್ಲಿ ರಾಮಕೃಷ್ಣ ಹೆಗಡೆ ಅವರು ಟೆಲಿಫೋನ್‌ ಕದ್ದಾಲಿಕೆ ಆರೋಪ ಹೊತ್ತು ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕಾಗಿ ಬರುತ್ತದೆ.

ಎಸ್.ಆರ್.ಬೊಮ್ಮಾಯಿ : ಈ ಸಂದರ್ಭದಲ್ಲಿ ಹೆಗಡೆ ಬೆಂಬಲಿಗ ಶಾಸಕರ ಬೆಂಬಲದಿಂದ ಎಸ್.ಆರ್.ಬೊಮ್ಮಾಯಿ ದಿಢೀರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಾರೆ. ಆದರೆ, ಅವರು ಅವಧಿ ಪೂರೈಸಲೂ ಸಾಧ್ಯವಾಗದೆ ಕೆಳಗಿಳಿದರು. ಇದಕ್ಕೆ ರಾಜ್ಯಪಾಲ ವೆಂಕಟಸುಬ್ಬಯ್ಯ ಅವರ ದುಡುಕು ನಿರ್ಧಾರ ಕಾರಣವಾಗಿದ್ದು ಮತ್ತು ರಾಮಕೃಷ್ಣ ಹೆಗಡೆ ಮತ್ತು ಹೆಚ್.ಡಿ. ದೇವೇಗೌಡರ ನಡುವಣ ಸಂಘರ್ಷದ ನಡುವೆ ಎಸ್.ಆರ್.ಬೊಮ್ಮಾಯಿ ಬಳಲಿದರು ಎಂಬ ಮಾತು ಕೇಳಿ ಬಂದಿದ್ದವು.

ಡಿ.ವಿ.ಸದಾನಂದಗೌಡ : ಇದಾದ ನಂತರ ರಾಜ್ಯದಲ್ಲಿ ದಿಢೀರ್ ಸಿಎಂ ಆದವರು ಡಿ.ವಿ.ಸದಾನಂದಗೌಡರು. ಅಕ್ರಮ ಗಣಿಗಾರಿಕೆ ವರದಿಯ ಹಿನ್ನೆಲೆ ಮುಖ್ಯಮಂತ್ರಿ ಹುದ್ದೆಗೆ ತಾವು ರಾಜೀನಾಮೆ ನೀಡುವುದು ಅನಿವಾರ್ಯವಾದಾಗ ಯಡಿಯೂರಪ್ಪ ಅವರು ದಿಢೀರ್ ಮುಖ್ಯಮಂತ್ರಿ ಬರಲು ಕಾರಣವಾದರು. ಆದರೆ, ಹೆಚ್ಚು ದಿನ ಸಿಎಂ ಕುರ್ಚಿ ಮೇಲೆ ಇರಲು ಸಾಧ್ಯವಾಗಲಿಲ್ಲ. ಬಿಎಸ್ ವೈ, ಜಗದೀಶ್‌ ಶೆಟ್ಟರ್‌ ಅವರನ್ನು ಸಿಎಂ ಮಾಡಿದರು. ಆದರೆ, ಅವರಿಗೆ ಅತ್ಯಲ್ಪ ಕಾಲಾವಕಾಶ ಸಿಕ್ಕಿತ್ತು. ಹೀಗಾಗಿ, ಅವರು ಏನು ಅನ್ನುವುದು ಸ್ಪಷ್ಟವಾಗುವ ಮೊದಲೇ ಬಿಜೆಪಿ ಸರ್ಕಾರದ ಅವಧಿ ಮುಗಿದು 2013ರ ವಿಧಾನಸಭಾ ಚುನಾವಣೆ ಎದುರಾದವು.

ಬಸವರಾಜ ಬೊಮ್ಮಾಯಿ : ಇದಾದ ಹಲವು ವರ್ಷಗಳ ನಂತರ ಮತ್ತೊಮ್ಮೆ ದಿಢೀರನೆ ಮುಖ್ಯಮಂತ್ರಿಯಾದವರು ಈಗ ಬಸವರಾಜ ಬೊಮ್ಮಾಯಿ ಅವರು. ಈ ಬೆಳವಣಿಗೆಗೂ ಯಡಿಯೂರಪ್ಪ ಕಾರಣಕರ್ತರು ಎಂಬುದು ಗೊತ್ತಿರುವ ಸಂಗತಿ. ಆದರೆ, ಹೀಗೆ ಅವಕಾಶ ಪಡೆದ ಬಸವರಾಜ ಬೊಮ್ಮಾಯಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ?ಎಂಬುದೇ ಸದ್ಯದ ಕುತೂಹಲಕಾರಿ ಸಂಗತಿ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವರ ತಂದೆ ಎಸ್.ಆರ್.ಬೊಮ್ಮಾಯಿ ಅವರು ಹೆಗಡೆ-ದೇವೇಗೌಡರ ನಡುವಣ ಸಂಘರ್ಷವನ್ನು ನಿಭಾಯಿಸಲಾಗದೆ ಕುಸಿದಿದ್ದರು.

ಈಗ ಬಸವರಾಜ ಬೊಮ್ಮಾಯಿ ಅವರೂ ಇಂತಹದೇ ಸನ್ನಿವೇಶವನ್ನು ಎದುರಿಸಬೇಕಾಗಿದೆ. ಅವರೀಗ ಏಕಕಾಲಕ್ಕೆ ಯಡಿಯೂರಪ್ಪ ಮತ್ತವರ ವಿರೋಧಿಗಳನ್ನು ನಿಭಾಯಿಸಬೇಕಾಗಿದೆ. ಎರಡು ದೋಣಿಗಳಲ್ಲಿ ಕಾಲಿಟ್ಟಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು, ಯಾವುದೇ ದೋಣಿ ಮುಂದೆ ಹೋದರೂ ಕಷ್ಟ. ಎರಡೂ ದೋಣಿಗಳನ್ನು ಬ್ಯಾಲೆನ್ಸ್ ಮಾಡುವ ಅನಿವಾರ್ಯತೆ ಬೊಮ್ಮಾಯಿ ಮೇಲಿದೆ.

ಇದರ ಮಧ್ಯೆ ಬಸವರಾಜ ಬೊಮ್ಮಾಯಿ ಯಶಸ್ವಿಯಾಗಲು ಸಾಧ್ಯವೇ?ಎಂಬುದು ಸದ್ಯದ ಬಹುಮುಖ್ಯ ಪ್ರಶ್ನೆ. ಆದಾಗ್ಯೂ, ರಾಜ್ಯದ ಹಿತ ಕಾಪಾಡುವ ವಿಷಯದಲ್ಲಿ ಬೊಮ್ಮಾಯಿ ಅವರು ತಮ್ಮತನ ತೋರಿ ಚಕ್ರವ್ಯೂಹ ಬೇಧಿಸಿಕೊಂಡು ಬರುವರೇ ಎಂಬುದು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.