ETV Bharat / state

ರಾಜಕೀಯ ಚಟುವಟಿಕೆ ಕೇಂದ್ರವಾಗುತ್ತಿದೆಯಾ ಸಿಎಂ ನಿವಾಸ: ನಿನ್ನೆ ಕಟೀಲ್, ಇಂದು ಸಂತೋಷ್ ಭೇಟಿ ಮೂಡಿಸಿದೆ ಕುತೂಹಲ..! - karnataka bjp politics news 2021

ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಅವರನ್ನ ಬದಲಾಯಿಸಲಾಗುತ್ತದೆ ಎನ್ನುವ ವದಂತಿಗಳ ನಡುವೆ ಕೆಲ ಸನ್ನಿವೇಶ ಅನುಮಾನಕ್ಕೆ ಎಡೆ ಮಾಡುವಂತೆ ಮಾಡಿದ್ದು, ಕಾವೇರಿ ನಿವಾಸ ಸದ್ದಿಲ್ಲದೇ ರಾಜಕೀಯ‌ ಚಟುವಟಿಕೆಯ ಕೇಂದ್ರವಾಗುತ್ತಿದೆ.

is-residence-of-cm-becoming-a-center-of-political-activity
ಸಿಎಂ ಬಿಎಸ್​ವೈ ಹಾಗೂ ಬಿ ಎಲ್ ಸಂತೋಷ್​
author img

By

Published : May 11, 2021, 7:57 PM IST

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ತೀವ್ರ ಚರ್ಚೆಯಾಗುತ್ತಿದೆ. ಬಿಜೆಪಿ ಹಿರಿಯ ನಾಯಕರೆಲ್ಲ ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟೀಕರಣ ನೀಡಿದರೂ ಚರ್ಚೆ ಮಾತ್ರ ಮುಂದುವರೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಬಿ ಎಸ್ ಯಡಿಯೂರಪ್ಪ ಅವರನ್ನ ಬದಲಾಯಿಸಲಾಗುತ್ತದೆ ಎನ್ನುವ ವದಂತಿಗಳ ನಡುವೆ ಕೆಲ ಸನ್ನಿವೇಶ ಅನುಮಾನಕ್ಕೆ ಎಡೆಮಾಡುವಂತೆ ಮಾಡಿದೆ. ಕಾವೇರಿ ನಿವಾಸ ಸದ್ದಿಲ್ಲದೇ ರಾಜಕೀಯ‌ ಚಟುವಟಿಕೆಯ ಕೇಂದ್ರವಾಗುತ್ತಿದೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿ ಮಾಡಿ ಬಂದ ಬೆನ್ನಲ್ಲೇ, ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ನಿವಾಸ ಕಾವೇರಿಗೆ ಭೇಟಿ ನೀಡಿ ಬಿಎಸ್​ವೈ ಭೇಟಿ ಮಾಡಿ ಮಾತುಕತೆ ನಡೆಸಿದರು. ಸಿಎಂ ಭೇಟಿ ನಂತರ ನಾಯಕತ್ವ ಬದಲಾವಣೆ ಇಲ್ಲ ಎನ್ನುವ ಸ್ಪಷ್ಟ ಸಂದೇಶ ನೀಡಿದ್ದರು.

ಅದರ ಬೆನ್ನಲ್ಲೇ ಇಂದು ಬೆಳಗ್ಗೆ ಸಿಎಂ ಯಡಿಯೂರಪ್ಪ ಅವರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಭೇಟಿ ಮಾಡಿದರು. ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿ 15 ನಿಮಿಷ ಮಾತುಕತೆ ನಡೆಸಿದರು.

ಕೋವಿಡ್ ನಿರ್ವಹಣೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ‌ ನಡುವಿನ ಸಂವಹನದ ಕೊರತೆ ಬಗ್ಗೆ ಮಾತುಕತೆ ನಡೆಸಿದ್ದು, ಸಹಜವಾಗಿ ಇಂತಹ ಸಮಸ್ಯೆ ಉಂಟಾಗಿ ಬಿಡುತ್ತದೆ. ಇನ್ನು ಮುಂದೆ ಆ ರೀತಿ ಸಮಸ್ಯೆಗಳಾಗದಂತೆ ನೋಡಿಕೊಳ್ಳಬೇಕು ಎನ್ನುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಆದರೆ, ಈ ಭೇಟಿ ವೇಳೆಯಲ್ಲಿ ಯಾವುದೇ ರಾಜಕೀಯ ವಿಷಯ ಚರ್ಚೆ ನಡೆದಿಲ್ಲ, ಕೋವಿಡ್ ಕುರಿತು ಕೇಂದ್ರದಿಂದ ಅಗತ್ಯ ನೆರವು ಕಲ್ಪಿಸಲು ಸಹಕಾರ ನೀಡುವ ಭರವಸೆಯನ್ನು ಸಂತೋಷ್ ನೀಡಿದ್ದಾರೆ ಎಂದು ಸ್ವತಃ ಸಿಎಂ ಸ್ಪಷ್ಟಪಡಿಸಿದ್ದಾರೆ. ಆದರೂ ಪಕ್ಷದ ಪಡಸಾಲೆಯಲ್ಲಿ ಮಾತ್ರ ಇನ್ನು ನಾಯಕತ್ವ ಬದಲಾವಣೆ ವಿಷಯದ ಚರ್ಚೆ ನಿಂತಿಲ್ಲ.

ಸಚಿವರ ಜೊತೆ ಸಂತೋಷ್ ಸಭೆ: ಬಿಜೆಪಿ‌ ರಾಷ್ಟ್ರೀಯ ಸಂಘಟನಾ‌ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ಭೇಟಿ ಮಾಡಿದ ಡಿಸಿಎಂ ಡಾ. ಅಶ್ವತ್ಥ ನಾರಾಯಣ್​ ಕೆಲಕಾಲ ಮಾತುಕತೆ ನಡೆಸಿದರು. ಬೆಳಗ್ಗೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿದ ಬಳಿಕ‌ ಡಿಸಿಎಂ ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಗೆ ಕರೆಸಿಕೊಂಡು ಚರ್ಚಿಸಿದರು. ಈ ವೇಳೆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ‌‌ನಿರ್ವಹಣೆ ಕುರಿತು ಸಂತೋಷ್ ಗೆ ಡಿಸಿಎಂ ಅಶ್ವತ್ಥ ನಾರಾಯಣ್ ವಿವರ ನೀಡಿದ್ದಾರೆ.

ಸಂತೋಷ್ ಭೇಟಿ ನಂತರ ಮಾತನಾಡಿದ ಡಿಸಿಎಂ ಡಾ. ಅಶ್ವತ್ಥ ನಾರಾಯಣ್, ಬಿ ಎಲ್ ಸಂತೋಷ್ ಭೇಟಿ ಮಾಡಿದ್ದೇನೆ. ಪಕ್ಷದ ಹಿರಿಯರು ಬಂದಾಗ ಭೇಟಿ ಮಾಡೋದು ನಮ್ಮ ಕರ್ತವ್ಯ, ಇನ್ನಷ್ಟು ಚೆನ್ನಾಗಿ ಕೊರೊನಾ ನಿರ್ವಹಣೆ ಮಾಡಿ ಅಂತಾ ಹಿರಿಯರು ಸಲಹೆ ಕೊಟ್ಟಿದ್ದಾರೆ. ಖಂಡಿತಾ ಯಾವುದೇ ರಾಜಕೀಯ ಉದ್ದೇಶಗಳ ಭೇಟಿ ಇಲ್ಲ. ಕೋವಿಡ್ ಸಂದರ್ಭದಲ್ಲಿ ಪಕ್ಷ ಸರ್ಕಾರದ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿದೆ. ಇದರಲ್ಲಿ ಯಾವುದೇ ವ್ಯತ್ಯಾಸ ಇಲ್ಲ ರಾಜಕೀಯ ಕಾರಣ ಹುಡುಕುವ ಅಗತ್ಯವಿಲ್ಲ ಎಂದರು.

ಡಿಸಿಎಂ ಜೊತೆಗಿನ ಸಭೆ ನಂತರ ಆರೋಗ್ಯ ಸಚಿವ ಡಾ. ಸುಧಾಕರ್ ಅವರನ್ನೂ ಕೂಡಾ ಕರೆಸಿಕೊಂಡಿರುವ ಬಿ.ಎಲ್ ಸಂತೋಷ್, ಕೆಲಕಾಲ ಸಮಾಲೋಚನೆ ನಡೆಸಿದರು. ಆರೋಗ್ಯ ಇಲಾಖೆ ಯಾವ ರೀತ ಕೊರೊನಾ ನಿರ್ವಹಣೆಗೆ ಕ್ರಮ ಕೈಗೊಂಡಿದೆ ಎನ್ನುವ ಕುರಿತು ಸಮಗ್ರವಾಗಿ ವಿವರ ನೀಡಿದರು ಎಂದು ತಿಳಿದುಬಂದಿದೆ.

ನಂತರ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಕೂಡಾ ಬಿ. ಎಲ್ ಸಂತೋಷ್ ರನ್ನು ಭೇಟಿ ಮಾಡಿದರು. ಕೆಲಕಾಲ ಮಾತುಕತೆ ನಡೆಸಿದರು.‌ ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಮುನಿರತ್ನ ಸಂತೋಷ್ ಅವರನ್ನು ಭೇಟಿ ಮಾಡಿದ್ದು, ಕುತೂಹಲ ಕೆರಳಿಸಿದೆ. ಆದರೆ, ಯಾವುದೇ ರಾಜಕೀಯ ಉದ್ದೇಶದ ಭೇಟಿ ಇದಲ್ಲ ಎಂದು ಮುನಿರತ್ನ ಕೂಡ ಸ್ಪಷ್ಟಪಡಿಸಿದ್ದಾರೆ.

ಯಾವುದೇ ರಾಜಕೀಯ ವಿಚಾರ ಇಲ್ಲ. ನಮ್ಮನ್ನು ಯಾರೂ ಕರೆಸಿಕೊಂಡಿಲ್ಲ. ನಾವಾಗಿಯೇ ಬಂದಿರೋದು, ಪಕ್ಷದಿಂದ ನಾವೆಲ್ಲಾ ಗೆದ್ದು ಬಂದಿದ್ದೇವೆ. ಅವರು ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು, ಹಾಗಾಗಿ ಬಂದು ಮಾತಾಡಿಸಿ ಸೌಜನ್ಯ ತೋರಿದ್ದೇವೆ ಎಂದರು.

ಓದಿ: ವ್ಯಾಕ್ಸಿನ್ ಇಲ್ಲದೇ ಲಸಿಕೆ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದ್ದಾರೆ.. ಸಿದ್ದರಾಮಯ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.