ETV Bharat / state

ಕ್ಯಾನ್ಸರ್​ನಿಂದ ಬಳಲುತ್ತಿದ್ದ ಐಪಿಎಸ್ ಅಧಿಕಾರಿ ಜಗದೀಶ್ ನಿಧನ: ಇಂದು ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ರಾಜಧಾನಿಯ ಹೆಚ್. ಸಿ. ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ IPS ಅಧಿಕಾರಿ ಕೆ.ವಿ ಜಗದೀಶ್ ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

Jagadeesh
Jagadeesh
author img

By

Published : Sep 27, 2021, 7:32 AM IST

ಬೆಂಗಳೂರು: ಕಳೆದ 6 ತಿಂಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಹಿರಿಯ IPS ಅಧಿಕಾರಿ ಕೆ.ವಿ ಜಗದೀಶ್ ಭಾನುವಾರ ಮೃತಪಟ್ಟಿದ್ದಾರೆ. ರಾಜಧಾನಿಯ HCG ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಗದೀಶ್, ನಿನ್ನೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 2006 ರಲ್ಲಿ ಪೊಲೀಸ್ ಸೇವೆಗೆ ಸೇರಿ 2017 ರಲ್ಲಿ ಐಪಿಎಸ್ ಅಧಿಕಾರಿಯಾಗಿ ಮುಂಬಡ್ತಿ ಪಡೆದಿದ್ದರು.

ಪೊಲೀಸ್ ಇಲಾಖೆಯ ವಲಯದಲ್ಲಿ ತಮ್ಮ ಅತ್ಯುತ್ತಮ‌ ಗುಣ, ದಕ್ಷತೆ, ಪ್ರಾಮಾಣಿಕತೆಯಿಂದಲೇ ಹೆಸರಾಗಿದ್ದ ಜಗದೀಶ್, ಅನೇಕ ದಿನಗಳಿಂದ ಕ್ಯಾನ್ಸರ್​ಗೆ ತುತ್ತಾಗಿದ್ದರು. ನಗರದ ಹೆಚ್.ಸಿ.ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

KSPS ತೇರ್ಗಡೆಯಾಗಿ ಅನೇಕ ಕಡೆ ಕೆಲಸ ಮಾಡಿದ್ದ ಜಗದೀಶ್, BDA ನಲ್ಲಿ ಎಸ್​ಪಿಯಾಗಿ ಕೆಲಸ ಮಾಡಿದ್ದರು. ಅಲ್ಲಿದ್ದಾಗಲೇ ಐಪಿಎಸ್ ಬಡ್ತಿ ಪಡೆದಿದ್ದರು. ನಂತರ ಟ್ರಾಫಿಕ್ ಡಿಸಿಪಿಯಾಗಿಯೂ ಕೆಲಸ ಮಾಡಿದ್ದರು. ಕ್ಯಾನ್ಸರ್ ಕಾರಣಕ್ಕೆ ಅನಿರ್ಧಿಷ್ಟಾವಧಿಗೆ ರಜೆ ಮೇಲೆ ತೆರಳಿದ್ದರು‌.

ಇನ್ನು ಜಗದೀಶ್ ಸಾವಿಗೆ ಪೊಲೀಸ್ ಕಮಿಷನರ್ ಕಮಲ್ ಪಂತ್, ಪೊಲೀಸ್ ಮಹಾ ನಿರ್ದೇಶಕರಾದ ಪ್ರವೀಣ್ ಸೂದ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಇಂದು ಧಾರ್ಮಿಕ ಸಂಪ್ರದಾಯ ಹಾಗೂ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.