ಬೆಂಗಳೂರು: ಐಪಿಎಲ್ 12ನೇ ಆವೃತ್ತಿಗೆ ಕೇವಲ ಮೂರು ದಿನಗಳಷ್ಟೇ ಬಾಕಿ ಇದ್ದು, ಮೊದಲ ಪಂದ್ಯ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ತಾಲೀಮು ನಡೆಸುತ್ತಿದೆ.
ಈ ಬಾರಿ ಶತಾಯಗತಾಯ ಕಪ್ ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕೊಹ್ಲಿ ಬಳಗಗ ತನ್ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಎದುರಿಸಲಿದೆ.
ಈಗಾಗಲೇ ಬಲಿಷ್ಠ ಆಟಗಾರರನ್ನು ಹೊಂದಿರುವ ಆರ್ಸಿಬಿ ತಂಡವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ. ಎಬಿಡಿ ವಿಲಿಯರ್ಸ್, ಪಾರ್ಥಿವ್ ಪಟೇಲ್, ಕಾಲಿನ್ ಡಿ ಗ್ರ್ಯಾಂಡ್ಹೋಮ್ ಬ್ಯಾಟಿಂಗ್ನಲ್ಲಿ ಉಮೇಶ್ ಯಾದವ್, ಯಜುವೇಂದ್ರ ಚೌಹ್ವಾಲ್ ಬೌಲಿಂಗ್ನಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.
ಅತ್ತ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಸಹ ಬಲಿಷ್ಠವಾಗಿಯೇ ಇದ್ದು ತವರು ನೆಲದಲ್ಲಿ ಗೆಲ್ಲಲೇಬೇಕಾದ ಒತ್ತಡ ವಿರಾಟ್ ಪಡೆ ಮುಂದಿದೆ. ಈ ನಿಟ್ಟಿನಲ್ಲಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬೌಲಿಂಗ್ ಕೋಚ್ ಆಶೀಶ್ ನೆಹ್ರಾರ ನೇತೃತ್ವದಲ್ಲಿ ತಂಡ ಭರ್ಜರಿ ಪ್ರಾಕ್ಟೀಸ್ ನಡೆಸುತ್ತಿದೆ.
ಮೊದಲ ಪಂದ್ಯವನ್ನು ತವರು ಅಭಿಮಾನಿಗಳ ಸಮ್ಮುಖದಲ್ಲಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡುವ ಉತ್ಸಾಹದಲ್ಲಿ ವಿರಾಟ್ ಪಡೆ ಇದ್ದರೆ ಈ ಉತ್ಸಾಹಕ್ಕೆ ಟಕ್ಕರ್ ನೀಡಲು ಧೋನಿ ಬಳಗ ಸಿದ್ಧವಾಗಿದೆ. ಹೀಗಾಗಿ ಎರಡು ಬಲಿಷ್ಠ ತಂಡಗಳ ಆಟ ಅತ್ಯಂತ ರೋಚಕವಾಗಿರೋದಂತು ಸತ್ಯ. ಅಂದ ಹಾಗೆ ಐಪಿಎಲ್ನ ಈ ಬಾರಿಯ ಮೊದಲ ಪಂದ್ಯ ಮಾರ್ಚ್ 23ರಂದು ನಡೆಯಲಿದೆ.