ETV Bharat / state

ಪೊಲೀಸರಿಂದ ರಕ್ತಚಂದನ ದುರ್ಬಳಕೆ ಆರೋಪ : ತನಿಖೆ ಚುರುಕು

ರಕ್ತಚಂದನದ ತುಂಡುಗಳನ್ನು ಪೊಲೀಸರು ಠಾಣೆಗೆ ತಂದು ಡೈರಿಯಲ್ಲಿ ನಮೋದಿಸಿದ್ದರು. ಆದರೆ, ಆರೋಪಿಗಳು ಸಿಗದ ಕಾರಣ ಎಫ್​ಐಆರ್ ದಾಖಲಿಸದೆ ಹಾಗೆ ಬಿಟ್ಟಿದ್ದರು. ಹೀಗಾಗಿ, ಪೊಲೀಸರು ರಕ್ತಚಂದನ ದುರ್ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿದೆ..

Subramanyeswara Rao
Subramanyeswara Rao
author img

By

Published : Mar 21, 2022, 3:09 PM IST

Updated : Mar 21, 2022, 3:19 PM IST

ಬೆಂಗಳೂರು : ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ರಾಮಮೂರ್ತಿನಗರ ಪೊಲೀಸರು 750 ಕೆಜಿ ರಕ್ತಚಂದನ ಜಪ್ತಿ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಬಗ್ಗೆ ಬೆಂಗಳೂರು ನಗರ ಪೂರ್ವ ವಿಭಾಗದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ‌.

ಈ ಬಗ್ಗೆ ಪೂರ್ವ ವಲಯ ಹೆಚ್ಚುವರಿ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಮಾಹಿತಿ ನೀಡಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಗಾಂಜಾ ಪ್ರಕರಣದ ಆರೋಪಿಗಳ ಪತ್ತೆಗೆ ತೆರಳಿದ್ದರು. ಈ ವೇಳೆ ಒಂದು ಬ್ಯಾಗ್ ಪತ್ತೆಯಾಗಿತ್ತು.

ಪೊಲೀಸರಿಂದ ರಕ್ತಚಂದನ ದುರ್ಬಳಕೆ ಆರೋಪ : ತನಿಖೆ ಚುರುಕು

ಆ ಸಮಯದಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಬ್ಯಾಗ್​ನಲ್ಲಿ ಗಾಂಜಾ ಬದಲಿಗೆ 16 ತುಂಡುಗಳು ರಕ್ತಚಂದನ ಪತ್ತೆಯಾಗಿದ್ದು, ಗಾಂಜಾ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಪತ್ತೆಯಾಗಿತ್ತು.

ನಂತರ ರಕ್ತಚಂದನದ ತುಂಡುಗಳನ್ನು ಪೊಲೀಸರು ಠಾಣೆಗೆ ತಂದು ಡೈರಿಯಲ್ಲಿ ನಮೋದಿಸಿದ್ದರು. ಆದರೆ, ಆರೋಪಿಗಳು ಸಿಗದ ಕಾರಣ ಎಫ್​ಐಆರ್ ದಾಖಲಿಸದೆ ಹಾಗೆ ಬಿಟ್ಟಿದ್ದರು. ಹೀಗಾಗಿ, ಪೊಲೀಸರು ರಕ್ತಚಂದನ ದುರ್ಬಳಕೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿದೆ.

ಇದರಲ್ಲಿ ಆರೋಪಿಗಳಿಗೆ ಪೊಲೀಸರು ಯಾರಾದರೂ ಸಹಾಯ ಮಾಡಿದ್ದಾ ಅಥವಾ ಬೇರೆ ಏನಾದರೂ ಕಾರಣವಿದೆಯೇ? ಎಂಬುವುದು ಸೇರಿದಂತೆ ಎಲವೂ ತನಿಖೆಯಲ್ಲಿ ಗೊತ್ತಾಗುತ್ತೆ.‌ ಈ ತನಿಖೆಯ ಮೇಲ್ವಿಚಾರಣೆಯನ್ನು ಪೂರ್ವ ವಲಯ ಡಿಸಿಪಿ ಮಾಡುತ್ತಿದ್ದಾರೆ ಎಂದು ಎಎಸ್‌ರಾವ್ ತಿಳಿಸಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಶಾಲೆಯತ್ತ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯ: ಶಿವಮೊಗ್ಗ ಡಿಸಿಗೆ ದೂರು ಕೊಟ್ಟ ವಿದ್ಯಾರ್ಥಿ

Last Updated : Mar 21, 2022, 3:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.