ETV Bharat / state

ಠಾಣೆಯಲ್ಲೇ ಆರೋಪಿಗೆ ಶಿಕ್ಷೆ ನೀಡಿದ ಬಗ್ಗೆ ತನಿಖೆಯಾಗಲಿ: ಡಾ.ಜಿ. ಪರಮೇಶ್ವರ್

ಜನಸ್ನೇಹಿಯಾಗಿರಬೇಕಾದ ಪೊಲೀಸ್​ ಸ್ಟೇಷನ್​ಗಳಲ್ಲಿ ಈ ರೀತಿ ವರ್ತನೆ ಸಲ್ಲ. ಗೃಹ ಸಚಿವರು ಈ ಕೂಡಲೇ ಆರೋಪಿಯನ್ನು ಅಮಾನವೀಯವಾಗಿ ಶಿಕ್ಷೆಗೆ ಗುರಿಪಡಿಸಿದುದರ ಕುರಿತು ತನಿಖೆ ನಡೆಸಬೇಕು ಎಂದು ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಟ್ವೀಟ್ ಮಾಡಿದ್ದಾರೆ.

ಡಾ.ಜಿ. ಪರಮೇಶ್ವರ್
author img

By

Published : Sep 13, 2019, 10:36 PM IST

ಬೆಂಗಳೂರು: ನಗರದಲ್ಲಿ ಆರೋಪಿಯೊಬ್ಬರನ್ನು ಪೊಲೀಸ್‌ ಅಧಿಕಾರಿ ಠಾಣೆಯಲ್ಲಿಯೇ ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡುವ ಮೂಲಕ ಪೊಲೀಸ್‌ ಇಲಾಖೆ ಬಗ್ಗೆಯೇ ಜನರಲ್ಲಿ ಭೀತಿ ಉಂಟು ಮಾಡುವಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಗೃಹ ಸಚಿವರು ಗಮನ ಹರಿಸಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

  • ಬೆಂಗಳೂರಿನಲ್ಲಿ ಆರೋಪಿಯೊಬ್ಬರಿಗೆ ಪೋಲೀಸ್ ಠಾಣೆಯಲ್ಲಿ ಕಿರುಕುಳ ಕೊಟ್ಟಿರುವ ದೃಶ್ಯಾವಳಿ ಗಮನಕ್ಕೆ ಬಂದಿದೆ. ಇಂತಹ ಘಟನೆಗಳಿಂದಲೇ ಪೋಲೀಸರ ಮೇಲೆ ಜನರಲ್ಲಿ ಭೀತಿ ಹೆಚ್ಚುವುದು. ಆರೋಪಿಯನ್ನು ಅಪರಾಧಿಯೆಂದು ನಿರ್ಧರಿಸಿ ಶಿಕ್ಷಿಸುವ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇರುವುದು. ಇದರ ಬಗ್ಗೆ ಕೂಡಲೆ ಗೃಹ ಸಚಿವರು ತನಿಖೆ ನಡೆಸಬೇಕು. @BSBommai

    — Dr. G Parameshwara (@DrParameshwara) September 13, 2019 " class="align-text-top noRightClick twitterSection" data=" ">

ಇದು ನ್ಯಾಯಾನಾ.. ಇದು ನೀತಿನಾ? ಪೊಲೀಸರಿಂದ ವ್ಯಕ್ತಿಗೆ ಹಿಗ್ಗಾ ಮುಗ್ಗ ಥಳಿತ... ಸದ್ದು ಮಾಡ್ತಿರೋ ವಿಡಿಯೋ

ಪೊಲೀಸ್‌ ಇಲಾಖೆಯನ್ನು ಜನಸ್ನೇಹಿ ಮಾಡಬೇಕೆಂದು ಹಿಂದಿನ ನಮ್ಮ ಸರ್ಕಾರ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೀಗ, ಬಿಜೆಪಿ ಸರ್ಕಾರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಪೊಲೀಸ್‌ ಠಾಣೆಯಲ್ಲೇ ಆರೋಪಿಯಬ್ಬರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಪೊಲೀಸರ ಮೇಲೆ ಇನ್ನಷ್ಟು ಭಯ ಮೂಡುವಂತೆ ಮಾಡಿದ್ದಾರೆ. ಪೊಲೀಸರಿಗೆ ಆರೋಪಿಯನ್ನು ಬಂಧಿಸುವ ಅಧಿಕಾರವಿದೆ. ಸತ್ಯ ಹೇಳುವಂತೆ ಮಾಡಲು ಇತರೆ ಮಾರ್ಗ ಅನುಸರಿಸಬೇಕೇ ವಿನಃ, ಈ ರೀತಿಯಾದ ಶಿಕ್ಷೆ ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿನ ಈ ಬೆಳವಣಿಗೆ ಅತ್ಯಂತ ಆತಂಕಕಾರಿಯಾಗಿದೆ. ಗೃಹ ಸಚಿವರು ಈ ಬಗ್ಗೆ ಕೂಡಲೇ ಗಮನ ಹರಿಸಿ ತನಿಖೆ ನಡೆಸಲಿ. ಗೃಹ ಸಚಿವರು ಪೊಲೀಸ್​ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲಿ ಎಂದು ಅವರು ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.

Intro:Body:KN_BNG_06_GPARAMESHWAR_TWEET_SCRIPT_7201951

ಠಾಣೆಯಲ್ಲಿ ಆರೋಪಿ ಥಳಿತದ ಬಗ್ಗೆ ತನಿಖೆಯಾಗಲಿ: ಡಾ.ಜಿ. ಪರಮೇಶ್ವರ

ಬೆಂಗಳೂರು: ಬೆಂಗಳೂರಿನಲ್ಲಿ ಆರೋಪಿಯೊಬ್ಬರನ್ನು ಪೊಲೀಸ್‌ ಅಧಿಕಾರಿ ಠಾಣೆಯಲ್ಲಿಯೇ ಅಮಾನವೀಯ ರೀತಿಯಲ್ಲಿ ಶಿಕ್ಷೆ ನೀಡುವ ಮೂಲಕ ಪೊಲೀಸ್‌ ಇಲಾಖೆ ಬಗ್ಗೆಯೇ ಜನರಲ್ಲಿ ಭೀತಿ ಉಂಟು ಮಾಡುವಂತೆ ನಡೆದುಕೊಂಡಿದ್ದಾರೆ. ಈ ಬಗ್ಗೆ ಗೃಹ ಸಚಿವರು ಗಮನ ಹರಿಸಿ ಈ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕೆಂದು ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

ಪೊಲೀಸ್‌ ಇಲಾಖೆಯನ್ನು ಜನಸ್ನೇಹಿ ಮಾಡಬೇಕೆಂದು ಹಿಂದಿನ ನಮ್ಮ ಸರಕಾರ ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಆದರೀಗ, ಬಿಜೆಪಿ ಸರಕಾರದಲ್ಲಿ ಪೊಲೀಸ್‌ ಅಧಿಕಾರಿಯೊಬ್ಬರು ಪೊಲೀಸ್‌ ಠಾಣೆಯಲ್ಲೇ ಆರೋಪಿಯಬ್ಬರನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡು ಪೊಲೀಸರ ಮೇಲೆ ಇನ್ನಷ್ಟು ಭಯ ಮೂಡುವಂತೆ ಮಾಡಿದ್ದಾರೆ. ಪೊಲೀಸರಿಗೆ ಆರೋಪಿಯನ್ನು ಬಂಧಿಸುವ ಅಧಿಕಾರವಿದೆ. ಸತ್ಯ ಹೇಳುವಂತೆ ಮಾಡಲು ಇತರೆ ಮಾರ್ಗ ಅನುಸರಿಸಬೇಕೇ ವಿನಃ, ಈ ರೀತಿಯಾದ ಶಿಕ್ಷೆ ಖಂಡನಾರ್ಹ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪೊಲೀಸ್‌ ಇಲಾಖೆಯಲ್ಲಿನ ಈ ಬೆಳವಣಿಗೆ ಅತ್ಯಂತ ಆತಂಕಕಾರಿಯಾಗಿದೆ. ಗೃಹ ಸಚಿವರು ಈ ಬಗ್ಗೆ ಕೂಡಲೇ ಗಮನ ಹರಿಸಿ ತನಿಖೆ ನಡೆಸಲಿ. ಗೃಹ ಸಚಿವರು ಇಲಾಖೆಯನ್ನು ಜನಸ್ನೇಹಿಯನ್ನಾಗಿ ಮಾಡಲಿ ಎಂದು ಅವರು ಟ್ವೀಟ್‌ ಮೂಲಕ ಒತ್ತಾಯಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.