ಬೆಂಗಳೂರು: ಕೊರೊನಾ ಹರಡುವಿಕೆಯಿಂದ ಲಾಕ್ ಡೌನ್ ಜಾರಿ ಮಾಡಿದ ಬೆನ್ನಲ್ಲೇ ರೈಲ್ವೆ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಬಳಿಕ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಆದ ನಂತರ 59 ದಿನಗಳ ಬಳಿಕ ರಾಜ್ಯದಲ್ಲಿ ರೈಲ್ವೆ ಸಂಚಾರ ಪುನಾರಂಭವಾಗಿದೆ.
ಮೇ 22 ರಂದು ಅಂತರ್ ಜಿಲ್ಲೆ ರೈಲು ಸಂಚಾರ ಆರಂಭವಾಗಿದೆ. ಆದರೆ ಕೊರೊನಾ ಭೀತಿಯಿಂದ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿದೆ. ಬೆಂಗಳೂರು-ಬೆಳಗಾವಿ ಟ್ರೈ ವೀಕ್ಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರಿನಿಂದ ಸೋಮವಾರ- ಬುಧವಾರ- ಶುಕ್ರವಾರ ಬೆಳಗ್ಗೆ 8 ಗಂಟೆಗೆ ಹೊರಡುತ್ತದೆ. ಬೆಳಗಾವಿ - ಬೆಂಗಳೂರಿಗೆ, ಮಂಗಳವಾರ - ಗುರುವಾರ- ಶನಿವಾರ ಬೆಳಗ್ಗೆ 8 ಗಂಟೆಗೆ ಹೊರಡುವುದು. ಬೆಂಗಳೂರಿನಿಂದ ಮೈಸೂರಿಗೆ ಭಾನುವಾರ ಹೊರತು ಪಡಿಸಿ ಆರು ದಿನಗಳು ಸೇವೆ ಇರುವುದು. 9.20ಕ್ಕೆ ಹೊರಟು 12.45 ಕ್ಕೆ ತಲುಪಲಿದೆ. ಮೈಸೂರಿನಿಂದ ಮತ್ತೆ ಮಧ್ಯಾಹ್ನ 1.45 ಕ್ಕೆ ಹೊರಟು ಸಂಜೆ 6 ಗಂಟೆಗೆ ತಲುಪುತ್ತೆ.
ಮೂರು ದಿನದ ರೈಲು ಓಡಾಟದಲ್ಲಿ ಸಂಚರಿಸಿದ ಪ್ರಯಾಣಿಕರು ಎಷ್ಟು?
- 22-05-2020
ಬೆಂಗಳೂರು-ಬೆಳಗಾವಿ : 338 ಪ್ರಯಾಣಿಕರು
ಬೆಂಗಳೂರು-ಮೈಸೂರು : 37 ಪ್ರಯಾಣಿಕರು
- 23-5-2020
ಬೆಳಗಾವಿ - ಬೆಂಗಳೂರು : 99 ಪ್ರಯಾಣಿಕರು
- 25-5-2020
ಬೆಂಗಳೂರು - ಬೆಳಗಾವಿ : 319 ಪ್ರಯಾಣಿಕರು
ಬೆಂಗಳೂರು - ಮೈಸೂರು : 100 ಪ್ರಯಾಣಿಕರು