ETV Bharat / state

ಬೆಂಗಳೂರಿನಲ್ಲಿ ಪ್ರಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಕಲೆ ಪ್ರದರ್ಶನ - International print art exhibition in bengaluru

14 ದಿನಗಳು ನಡೆಯುವ ಈ ಕಲಾಪ್ರದರ್ಶನದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಮುದ್ರಣ ಶಿಬಿರವೊಂದನ್ನು ಕೂಡಾ ಲಲಿತ ಕಲಾ ಅಕಾಡೆಮಿ ಆಯೋಜಿಸುತ್ತಿದೆ.

international-print-art-exhibition-for-the-first-time-in-bangalore
ಮುದ್ರಣ ಕಲೆಯ ಪ್ರದರ್ಶನ
author img

By

Published : Jan 10, 2022, 10:02 PM IST

ಬೆಂಗಳೂರು: ನಗರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮುದ್ರಣ ಕಲೆಯ ದೈವಾರ್ಷಿಕ ಪ್ರದರ್ಶನವನ್ನು ಕೇಂದ್ರ ಲಲಿತಕಲಾ ಅಕಾಡೆಮಿ ಹಾಗು ಚಿತ್ರಕಲಾ ಪರಿಷತ್ ಸಹಯೋಗದೊಂದಿಗೆ ಸಿಕೆಪಿ ಆವರಣದಲ್ಲಿ ಏರ್ಪಡಿಸಲಾಗಿದೆ. ಜನವರಿ 10 ರಿಂದ 30 ರವರೆಗೆ ಈ ಕಾರ್ಯಕ್ರಮ ನಡೆಯಲಿದೆ.

ಲಲಿತ ಕಲೆಯ ಒಂದು ಪ್ರಮುಖ ಮಾಧ್ಯಮವಾಗಿರುವ ಪ್ರಿಂಟ್ ಮೇಕಿಂಗ್​ನ ಈ ಪ್ರದರ್ಶನದಲ್ಲಿ ಭಾರತವೂ ಸೇರಿದಂತೆ ಜರ್ಮನಿ, ರಷ್ಯಾ, ನೆದರ್ ಲ್ಯಾಂಡ್ಸ್, ಮೆಕ್ಸಿಕೋ, ಬಾಂಗ್ಲಾದೇಶ, ಅಮೆರಿಕ, ಫ್ರಾನ್ಸ್, ಅರ್ಜೆಂಟೈನಾ, ಪೋಲೆಂಡ್, ಕ್ರೋಏಷಿಯಾ, ಇಸ್ರೇಲ್, ಪೆರು ಹಾಗೂ ನೇಪಾಳ ಇತ್ಯಾದಿ 14 ದೇಶಗಳ ಕಲಾಕೃತಿಗಳನ್ನು ಪ್ರದರ್ಶಿಸಲಾಗಿದೆ. ಇದರಲ್ಲಿ ಅಂತಾರಾಷ್ಟ್ರೀಯ ವಿಭಾಗದಲ್ಲಿ 28, ಆಹ್ವಾನಿತ ಕಲಾವಿದರಲ್ಲಿ 33 ಹಾಗೂ ರಾಷ್ಟ್ರಮಟ್ಟದ 121 ಕಲಾಕೃತಿಗಳಿವೆ.

ನಮ್ಮ ದೇಶದ ಅತ್ಯಂತ ಪ್ರಸಿದ್ಧ ಮುದ್ರಣ ಕಲಾವಿದರಾಗಿದ್ದ ಶಾಂತಿನಿಕೇತನದ ಸೋಮನಾಥ ಹೋರೆ ಅವರ ಜನ್ಮಶತಾಬ್ದಿಯ ನೆನಪಿನಲ್ಲಿ ವಿಶೇಷ ವಿಭಾಗ ತೆರೆಯಲಾಗಿದೆ. 14 ದಿನಗಳು ನಡೆಯುವ ಈ ಕಲಾಪ್ರದರ್ಶನದ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಮುದ್ರಣ ಶಿಬಿರವೊಂದನ್ನು ಕೂಡಾ ಲಲಿತ ಕಲಾ ಅಕಾಡೆಮಿ ಆಯೋಜಿಸುತ್ತಿದೆ. ಈ ಕಲಾ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್, ಕೇಂದ್ರ ಲಲಿತಕಲಾ ಅಕಾಡೆಮಿಯ ಉಪಾಧ್ಯಕ್ಷ ಡಾ. ನಂದಲಾಲ್ ಠಾಕೂರ್ ಉದ್ಘಾಟಿಸಿದರು.

ಇದನ್ನೂ ಓದಿ: ಚೇತರಿಸಿಕೊಂಡ ಸಿದ್ದರಾಮಯ್ಯ.. ನಾಳೆಯಿಂದ ಮತ್ತೆ ಪಾದಯಾತ್ರೆಗೆ ಸಜ್ಜು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.