ETV Bharat / state

ಕರ್ನಾಟಕ 50; ಕನ್ನಡ ಧ್ವಜದ ರಚನೆ ಹೇಗಾಯ್ತು, ಸಾಂವಿಧಾನಿಕ ಮಾನ್ಯತೆಗಾಗಿ ಏನೆಲ್ಲಾ ನಡೆದಿದೆ ಗೊತ್ತಾ? - ಕರ್ನಾಟಕ ಧ್ವಜದ ಇತಿಹಾಸ

Kannada Rajyothsava: ಪ್ರಸ್ತುತ ನಾವು ಬಳಕೆ ಮಾಡುತ್ತಿರುವ ಧ್ವಜ ಬೇರೊಂದು ಪಕ್ಷದ ಧ್ವಜವಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ 50ರ ವಿಶೇಷ ವರದಿ
ಕರ್ನಾಟಕ 50ರ ವಿಶೇಷ ವರದಿ
author img

By ETV Bharat Karnataka Team

Published : Nov 1, 2023, 4:29 PM IST

Updated : Nov 1, 2023, 4:59 PM IST

ಬೆಂಗಳೂರು: ಕರ್ನಾಟಕದ ಹೆಸರಿಗೆ ಇಂದು 50ರ ಸಂಭ್ರಮ. ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಹಳದಿ ಮತ್ತು ಕೆಂಪು ಬಣ್ಣದ ನಾಡಧ್ವಜಗಳು ಹಾರಾಡುತ್ತಿವೆ. ಆದರೆ ಈ ಧ್ವಜ ಅಧಿಕೃತ ನಾಡಧ್ವಜವಾ? ಈ ಧ್ವಜವನ್ನು ಯಾರು ರಚಿಸಿದ್ದು, ಸರ್ಕಾರ ನಾಡಧ್ವಜದ ವಿಚಾರದಲ್ಲಿ ಏನೆಲ್ಲಾ ಮಾಡಿದೆ. ನಾಡಧ್ವಜ ಹೊಂದಲು ಸಾಂವಿಧಾನಿಕ ಮಾನ್ಯತೆ ಇದೆಯಾ ಎನ್ನುವ ಕುರಿತ ವರದಿ ಇಲ್ಲಿದೆ.

1956ರಲ್ಲಿಯೇ ಕನ್ನಡಿಗರ ವಾಸಿಸುವ ಪ್ರದೇಶಗಳನ್ನು ಒಳಗೊಂಡು ರಾಜ್ಯ ಏಕೀಕರಣಗೊಂಡರೂ ಕರ್ನಾಟಕದ ಹೆಸರು ಪಡೆಯಲು 17 ವರ್ಷ ಹೋರಾಟ ನಡೆಸಲಾಯಿತು. 1973ರಲ್ಲಿ ಕಡೆಗೂ ವಿಶಾಲ ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಎನ್ನುವ ಹೆಸರನ್ನು ಅಧಿಕೃತವಾಗಿ ಪಡೆದುಕೊಂಡಿತಾದರೂ ಈವರೆಗೆ ಅಧಿಕೃತ ನಾಡಧ್ವಜವನ್ನು ಹೊಂದಬೇಕು ಎನ್ನುವ ಕನ್ನಡಿಗರ ಕನಸು ಇನ್ನು ಕನಸಾಗಿಯೇ ಇದೆ. ಹಳದಿ ಕೆಂಪು ಬಣ್ಣವನ್ನು ಒಳಗೊಂಡ ಧ್ವಜವೇ ಸದ್ಯಕ್ಕೆ ನಾಡಧ್ವಜದ ಸ್ಥಾನದಲ್ಲಿ ವಿರಾಜಮಾನವಾಗಿದೆ.

ಕನ್ನಡಪರ ಚಳವಳಿ, ಕನ್ನಡ ಹೋರಾಟ, ನಾಡು ನುಡಿಯ ಸಮ್ಮೇಳನದಲ್ಲಿ ಕಂಗೊಳಿಸುವ ಹಳದಿ, ಕೆಂಪು ಬಣ್ಣದ ಧ್ವಜ ಕನ್ನಡಿಗರ ಅಸ್ಮಿತೆಯಾಗಿದೆ. ಇದು ಪಕ್ಷವೊಂದರ ಧ್ವಜವಾಗಿ ರಚಿತವಾದರೂ ಕನ್ನಡಿಗರ ಆಸ್ತಿಯಾಗಿ ಪರಿವರ್ತನೆಯಾಗಿದೆ. ಕನ್ನಡ ಪರ ಸಂಘಟನೆಗಳು, ಕನ್ನಡ ಹೋರಾಟಗಾರರೆಲ್ಲಾ ಈ ಧ್ವಜವನ್ನೇ ಬಳಕೆ ಮಾಡಲು ಆರಂಭಿಸಿದ್ದಾರೆ. ಸರ್ಕಾರವೂ ಕೂಡ ಇದೇ ಧ್ವಜವನ್ನು ಹಾರಿಸಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡುವ ಮೂಲಕ ಈ ಧ್ವಜಕ್ಕೆ ನಾಡಧ್ವಜದ ಸ್ಥಾನಮಾನವನ್ನು ನೀಡಿದೆ.

ಕರ್ನಾಟಕ 50ರ ವಿಶೇಷ ವರದಿ
ಕರ್ನಾಟಕ 50ರ ವಿಶೇಷ ವರದಿ

ವಾಸ್ತವದಲ್ಲಿ ಕನ್ನಡದ ವೀರ ಸೇನಾನಿ ಮ.ರಾಮಮೂರ್ತಿ ಅವರು ರಚಿಸಿದ ಕನ್ನಡ ಪಕ್ಷದ ಅಧಿಕೃತ ಬಾವುಟವೇ ಇಂದು ನಾವು ಬಳಸುತ್ತಿರುವ ನಾಡಧ್ವಜವಾಗಿದೆ. ಕನ್ನಡ ಬಾವುಟದ ಹಳದಿ ಬಣ್ಣ ಕನ್ನಡಿಗರ ಸ್ವಾಭಿಮಾನ, ಶಾಂತಿ, ರಕ್ಷಣೆಯ ಪ್ರತೀಕವಾಗಿದೆ. ಕನ್ನಡ ನಾಡು ಚಿನ್ನದ ಬೀಡು ಎನ್ನುವ ಖ್ಯಾತಿ ಗಳಿಸಿದೆ ಎನ್ನುವುದು ಹಳದಿ ಪ್ರತಿನಿಧಿಸಿದರೆ, ಕೆಂಪು ಬಣ್ಣ, ಕನ್ನಡಿಗರ ಕ್ಷಾತ್ರತೇಜ, ತ್ಯಾಗ ಮತ್ತು ಕ್ರಾಂತಿಯ ಪ್ರತೀಕವಾಗಿ ಪ್ರತಿನಿಧಿಸಲಿದೆ ಎಂದು ಮ.ರಾಮಮೂರ್ತಿಯವರೇ ಧ್ವಜ ರಚನೆಯಾದ ನಂತರ ನಡೆದ ಸಮಾವೇಶದಲ್ಲಿ ಸ್ಪಷ್ಟನೆ ನೀಡಿದ್ದರು. ಅದನ್ನೇ ಕನ್ನಡಿಗರು ಕನ್ನಡಪರ ಹೋರಾಟಗಾರರು ನಾಡಧ್ವಜವನ್ನಾಗಿ ಬಳಸುವುದನ್ನು ರೂಢಿಸಿಕೊಂಡಿದ್ದಾರೆ. 60ರ ದಶಕದಲ್ಲಿ ಈ ಬಾವುಟದ ಬಳಕೆ ಆರಂಭವಾಯಿತು. ಗೋಕಾಕ್‌ ಚಳವಳಿ ಸೇರಿದಂತೆ ಕನ್ನಡ ಪರ ಉತ್ಸವ, ಕಾರ್ಯಕ್ರಮದಲ್ಲಿ ಬಳಸಿಕೊಂಡು ಬರಲಾಗಿದೆ. ಇಂದಿಗೂ ಇದೇ ಧ್ವಜ ಬಳಕೆಯಲ್ಲಿದೆ.

ಹಳದಿ ಕೆಂಪು ಬಣ್ಣದ ಧ್ವಜ ಚಾಲ್ತಿಗೆ ಬರುವ ಮೊದಲೇ ನಾಡಧ್ವಜದ ರಚನೆಯ ಕಸರತ್ತುಗಳು ನಡೆದಿದ್ದವು. ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಹಾಗು ಮ. ರಾಮಸ್ವಾಮಿ ಜಂಟಿಯಾಗಿ ಪ್ರಯತ್ನ ನಡೆಸಿದ್ದರು. ಕರ್ನಾಟಕದ ಲಾಂಛನ ಹಾಗು ಪೈರುಗಳನ್ನು ಒಳಗೊಂಡ ಧ್ವಜ ರಚಿಸಿದರು. ಆದರೆ ಅದು ಜನರನ್ನು ತಲುಪಲಿಲ್ಲ, ಸ್ವತಃ ಹೋರಾಟಗಾರರೂ ಪುರಸ್ಕರಿಸಲಿಲ್ಲ. ಹಾಗಾಗಿ ಆ ಧ್ವಜದ ಪ್ರಸ್ತಾಪ ಆರಂಭವಾದಲ್ಲಿಯೇ ನಿಂತಿತು. ಮ.ರಾಮಮೂರ್ತಿ ಅವರು ರಚಸಿಸಿದ ಹಳದಿ, ಕೆಂಪು ಬಣ್ಣದ ಧ್ವಜವನ್ನು ಎಲ್ಲೆಡೆ ಬಳಸಲು ಶುರು ಮಾಡಲಾಯಿತು. ಈ ಧ್ವಜವನ್ನು ರಾಜ್ಯ ಧ್ವಜವನ್ನಾಗಿ ಘೋಷಿಸಬೇಕು ಎಂದು 1998ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಕ್ಕೊತ್ತಾಯ ಮಂಡಿಸಿತು.

ಸರ್ಕಾರದ ಮೇಲೆ ಒತ್ತಡ ಹೇರಿತು. ಆದರೆ ಅಂದು ಅಧಿಕಾರದಲ್ಲಿದ್ದ ಜೆ.ಹೆಚ್. ಪಟೇಲ್ ಸರ್ಕಾರ ಕಾನೂನು ತೊಡಕಿನ ಕಾರಣ ನೀಡಿ ಕೈಚಲ್ಲಿತು. ಅದಾಗಿ 13 ವರ್ಷದ ನಂತರ ಮತ್ತೊಮ್ಮೆ ಕನ್ನಡ ಧ್ವಜದ ವಿಚಾರದಲ್ಲಿ ಕ್ರಾಂತಿಕಾರಕ ಹೆಜ್ಜೆ ಮೂಡಿತು. ಡಿ.ವಿ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ವೇಳೆ 2011ರಲ್ಲಿ ಕನ್ನಡ ರಾಜ್ಯೋತ್ಸವದಂದು ಸರ್ಕಾರಿ ಕಟ್ಟಡಗಳ ಮೇಲೆ ಕಡ್ಡಾಯವಾಗಿ ಕನ್ನಡ ಧ್ವಜ ಹಾರಿಸಲು ಸುತ್ತೋಲೆ ಹೊರಡಿಸಿದ್ದರು. ಆದರೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಹೈಕೋರ್ಟ್‌ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಹಾಗಾಗಿ ಈ ಸರ್ಕಾರಿ ಆದೇಶವೂ ಸಿಂಧುವಾಗಲಿಲ್ಲ. ಹಾಗಾಗಿ ಅಧಿಕೃತ ನಾಡಧ್ವಜ ಹೊಂದುವ ವಿಚಾರದಲ್ಲಿ ಸಾಂವಿಧಾನಿಕ ಮಟ್ಟದಲ್ಲಿ ರಾಜ್ಯಕ್ಕೆ ಹಿನ್ನಡೆಯಾಯಿತು.

ಆದರೆ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಅಧಿಕೃತ ನಾಡಧ್ವಜ ಹೊಂದುವ ವಿಚಾರದ ಚರ್ಚೆ ಮತ್ತೆ ಮುನ್ನಲೆಗೆ ಬಂದಿತು. ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆದವು. ಸಾಕಷ್ಟು ಸಮಯ ತೆಗೆದುಕೊಂಡ ಸಿದ್ದರಾಮಯ್ಯ ಕಡೆಗೂ ನಾಡಧ್ವಜದ ವಿನ್ಯಾಸದ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಯಿತು. 2018 ಮಾರ್ಚ್ 8 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರ ರಚನೆ ಮಾಡಿದ್ದ ಸಮಿತಿ ಸಿದ್ಧಪಡಿಸಿರುವ ನಾಡಧ್ವಜದ ವಿನ್ಯಾಸವನ್ನು ಸಿದ್ದರಾಮಯ್ಯ ಅನಾವರಣಗೊಳಿಸಿದ್ದರು.

ಕನ್ನಡಪರ ಸಂಘಟನೆಗಳ ಮುಖಂಡರು ಹಾಗೂ ಹಿರಿಯ ಸಾಹಿತಿಗಳ ಸಭೆ ನಡೆಸಿ ನಂತರವೇ ಹೊಸ ನಾಡಧ್ವಜದ ವಿನ್ಯಾಸವನ್ನು ಅನಾವರಣಗೊಳಿಸಿದ್ದರು. ಕನ್ನಡ ಪರ ಸಂಘಟನೆಗಳು ಬಳಸುತ್ತಿರುವ ಕಾರಣಕ್ಕೆ ಹಳದಿ ಕೆಂಪು ಇರುವ ಧ್ವಜವನ್ನು ನಾಡಧ್ವಜವಾಗಿ ಪರಿಗಣಿಸಲಾಗಲ್ಲ. ಸಂಘಟನೆಗಳು ನೋಂದಾಯಿಸಿಕೊಂಡಿವೆ, ಅಲ್ಲದೆ ನಾಡಧ್ವಜವಾಗಿ ಪರಿಗಣಿಸಿದಲ್ಲಿ ಅದಕ್ಕೆ ನೀಡಬೇಕಾದ ಗೌರವ, ಬಳಕೆಯ ನಿರ್ಬಂಧದ ಕಾರಣಕ್ಕೆ ಸಂಘಟನೆಗಳಿಗೆ ತೊಂದರೆಯಾಗಲಿದೆ ಎನ್ನುವುದನ್ನು ಪ್ರಸ್ತಾಪಿಸಿ ಹಳದಿ, ಬಿಳಿ, ಕೆಂಪು ಬಣ್ಣದ ಧ್ವಜ ಮತ್ತು ಮಧ್ಯದಲ್ಲಿ ಸರ್ಕಾರದ ಲಾಂಛನ ಇರುವ ಧ್ವಜವನ್ನು ಅಂತಿಮಗೊಳಿಸಲಾಯಿತು.

ರಾಜ್ಯಕ್ಕೆ ಒಂದು ನಾಡಧ್ವಜ ಬೇಕು ಎಂಬ ಚರ್ಚೆ ಮೊದಲಿನಿಂದಲೂ ನಡೆಯುತ್ತಿತ್ತು. ಇದು ಕನ್ನಡಿಗರ ಅಪೇಕ್ಷೆಯೂ ಆಗಿತ್ತು. ಅದಕ್ಕೆ ನಮ್ಮ ಸರ್ಕಾರದ ಧ್ವನಿಯಾಗುವುದರ ಜೊತೆಗೆ ರಾಜ್ಯಕ್ಕೆ ನಮ್ಮದೇ ಆದ ನಾಡಧ್ವಜ ಬೇಕು ಎಂಬ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದೆ, ಯಾವುದೇ ರಾಜ್ಯ ಪ್ರತ್ಯೇಕ ಧ್ವಜ ಹೊಂದಲು ಸಂವಿಧಾನದಲ್ಲಿ ವಿರೋಧ ಇಲ್ಲ. ಜೊತೆಗೆ ರಾಷ್ಟ್ರಧ್ವಜಕ್ಕಿಂತ ಕೆಳಗೆ ನಾಡಧ್ವಜ ಹಾರಿಸಲಿದ್ದೇವೆ ಎಂದು ನಾಡಧ್ವಜ ಹೊಂದುವ ನಿಲುವನ್ನು ಸಮರ್ಥಿಸಿಕೊಂಡಿದ್ದರು. ಜೊತೆಗೆ ಕನ್ನಡ ಬಾವುಟದಲ್ಲಿನ ಹಳದಿ ಮತ್ತು ಕೆಂಪು ಬಣ್ಣ ಜೊತೆಗೆ ಶಾಂತಿಯ ಸಂಕೇತವಾದ ಬಿಳಿಯ ಬಣ್ಣವನ್ನು ಸೇರಿಸಿಕೊಂಡು ನಾಡಧ್ವಜದ ವಿನ್ಯಾಸ ರಚಿಸಲಾಗಿದೆ. ಬಿಳಿಯ ಬಣ್ಣದ ಮಧ್ಯಭಾಗದಲ್ಲಿ ಸರ್ಕಾರದ ಲಾಂಛನ ಇರಲಿದೆ ಎಂದು ತಿಳಿಸಿದ್ದರು.

ಆದರೆ ಅಂದು ಪ್ರತಿಪಕ್ಷದಲ್ಲಿದ್ದ ಬಿಜೆಪಿ ಸರ್ಕಾರದ ನಿಲುವನ್ನು ಸ್ವಾಗತಿಸಿದ್ದರೂ ಸರ್ಕಾರದ ಧೋರಣೆಗೆ ವಿರೋಧ ವ್ಯಕ್ತಪಡಿಸಿತ್ತು. ನಾಡಧ್ವಜದ ವಿಚಾರದಲ್ಲಿ ಸರ್ಕಾರ ಪ್ರತಿಪಕ್ಷವನ್ನು ಕಡೆಗಣಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿ ಸಂಪುಟದಲ್ಲಿ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರದ ಅನುಮತಿ ಕೋರಿ ದೆಹಲಿಗೆ ಕಳಿಸಿಕೊಟ್ಟರು. ಆದರೆ ಆ ಪ್ರಸ್ತಾವನೆ ಇನ್ನೂ ನೆನೆಗುದಿಗೆಗೆ ಬಿದ್ದಿದೆ. ಆರಂಭದಲ್ಲಿ ನೀತಿ ಸಂಹಿತೆಯ ಕಾರಣ ನೀಡಿದ್ದ ಕೇಂದ್ರ ಸರ್ಕಾರ ನಂತರ ಈ ವಿಚಾರದಿಂದ ಅಂತರ ಕಾಯ್ದುಕೊಂಡಿತು. 2018ರಲ್ಲಿ ಸಿದ್ದರಾಮಯ್ಯ ಸರ್ಕಾರ ಮರಳಿ ಅಧಿಕಾರಕ್ಕೆ ಬರಲಿಲ್ಲ.

ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾಯಿತು. ಮೈತ್ರಿ ಕಸರತ್ತಿನ ನಡುವೆ ಕನ್ನಡ ಧ್ವಜದ ವಿಚಾರವನ್ನು ಕಾಂಗ್ರೆಸ್ ಮರೆತುಬಿಟ್ಟಿತು. ಆದರೆ 2019ರಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಯಿತು. ಆದರೆ ಬಿಜೆಪಿ ಸರ್ಕಾರ ಈ ವಿಚಾರದಲ್ಲಿ ಆಸಕ್ತಿ ತೋರಲಿಲ್ಲ. ಒಂದು ದೇಶ ಒಂದು ಸಂವಿಧಾನ ಒಂದು ಧ್ವಜ ಎನ್ನುವ ಪರಿಕಲ್ಪನೆ ಹೊಂದಿರುವ ಬಿಜೆಪಿ ವರಿಷ್ಠರು ಕಾಶ್ಮೀರದ ಪ್ರತ್ಯೇಕ ಧ್ವಜದ ವಿರುದ್ಧ ಹೋರಾಟ ನಡೆಸಿದ್ದವರು, ಅಲ್ಲದೆ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿದ ನಂತರ ಪ್ರತ್ಯೇಕ ಧ್ವಜದ ವಿಚಾರವೇ ಬಿಜೆಪಿ ಹೈಕಮಾಂಡ್ ಮಟ್ಟದಲ್ಲಿ ಅಪ್ರಸ್ತುತವಾಗಿದೆ ಹೀಗಾಗಿ ಅವರು ಕನ್ನಡಕ್ಕೆ ಪ್ರತ್ಯೇಕ ನಾಡಧ್ವಜ ವಿಚಾರದಲ್ಲಿ ಮೌನವಹಿಸಿದರು. ಇದನ್ನೇ ಪರೋಕ್ಷವಾಗಿ ಪ್ರತಿಪಾದಿಸಿದ್ದ ಅಂದು ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ ಸಿಟಿ ರವಿ ಪ್ರತ್ಯೇಕ ಧ್ವಜ ಹೊಂದಲು ಸಾಂವಿಧಾನಿವಾಗಿ ಅವಕಾಶವಿಲ್ಲ ಎಂದಿದ್ದರು.

ಇಷ್ಟೆಲ್ಲಾ ಘಟನಾವಳಿಗಳು ನಡೆದರೂ ಕನ್ನಡದ ಅಸ್ಮಿತೆಯಾಗಿರುವ ಹಳದಿ ಮತ್ತು ಕೆಂಪು ಬಣ್ಣವನ್ನು ಹೊಂದಿರುವ ಧ್ವಜ ಮಾತ್ರ ರಾಜ್ಯದ ಕನ್ನಡಿಗರ ಹೃದಯದಲ್ಲಿ ವಿರಾಜಮಾನವಾಗಿದೆ. ಕನ್ನಡ ಪರ ಹೋರಾಟ, ಕನ್ನಡ ಚಳವಳಿಗಳಲ್ಲಿ ಬಳಕೆಯಲ್ಲಿದೆ. ರಾಜ್ಯೋತ್ಸವದಂದು ಇಡೀ ನಾಡನ್ನು ಹಳದಿ, ಕೆಂಪುಮಯವಾಗಿಸಿ ಸಂಭ್ರಮಿಸಿಕೊಂಡು ಬರುವುದನ್ನು ಮಾತ್ರ ನಿಲ್ಲಿಸಿಲ್ಲ. ಪ್ರತ್ಯೇಕ ರಾಜ್ಯಧ್ವಜದ ಮಾನ್ಯತೆ ಸಿಗದಿದ್ದರೂ ಇರುವ ಧ್ವಜವನ್ನೇ ಅಭಿಮಾನಪೂರ್ವಕವಾಗಿ ಹಾರಿಸುತ್ತಿದ್ದಾರೆ.

ಆದರೆ ಈಗ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆಯಾಗಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿದ್ದಾರೆ. ಇದೀಗ ಮತ್ತೊಮ್ಮೆ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಅಧಿಕೃತ ನಾಡಧ್ವಜ ಬೇಕು ಎನ್ನುವ ಕೂಗು ಆರಂಭಗೊಂಡಿದೆ. ಈ ಕುರಿತು ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರಲ್ಲಿಯೇ ಶಾಸಕ ರಿಜ್ವಾನ್ ಅರ್ಹದ್ ಪ್ರಸ್ತಾಪ ಮಾಡಿದರು. ಕನ್ನಡಿಗರಿಗೆ ಕನ್ನಡದ್ದೇ ಆದ ಧ್ವಜ ಬೇಕು, ಆರು ವರ್ಷದ ಹಿಂದೆ ನಾವು ಶಿಫಾರಸ್ಸು ಮಾಡಿದ್ದೆವು ಆದರೆ ಕೇಂದ್ರದಿಂದ ಆರು ವರ್ಷದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಎಲ್ಲ ಕನ್ನಡಿಗರೂ ಕೇಂದ್ರದ ಮೇಲೆ ಒತ್ತಡ ತರಬೇಕು, ಕನ್ನಡಧ್ವಜ ನಮ್ಮ ಅಭಿಮಾನದ ಹೆಗ್ಗುರುತು ಕನ್ನಡ ಧ್ವಜ ನಮ್ಮಧ್ವಜವಾಗಿದೆ. ಇದಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯಕ್ಕೆ ಈ ವಿಚಾರದಲ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹಿಂದೆ ತಾವೇ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಶಿಫಾರಸು ಇನ್ನೂ ಕೇಂದ್ರದ ಮುಂದೆ ಬಾಕಿ ಇರುವುದರ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚಿಸಿ ನಂತರ ಮುಂದುವರೆಯಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಕನ್ನಡಿಗರ ಅಸ್ಮಿತೆಯಾಗಿ ಹಳದಿ ಮತ್ತು ಕೆಂಪು ಬಣ್ಣದ ಧ್ವಜ ರಾರಾಜಿಸುತ್ತಿದೆ. ಎಲ್ಲೆಡೆ ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎನ್ನುವ ಘೋಷವಾಕ್ಯದೊಂದಿಗೆ ಕನ್ನಡ ಧ್ವಜ ಹಾರಾಡುತ್ತಿದೆ.

ಇದನ್ನೂ ಓದಿ: ರಾಜ್ಯೋತ್ಸವ: ಧಾರವಾಡದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ಸಂತೋಷ್​ ಲಾಡ್

Last Updated : Nov 1, 2023, 4:59 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.