ETV Bharat / state

ಮಣಿಪುರಕ್ಕೆ ಭೇಟಿ ನೀಡುವ ಬದಲು ವಿದೇಶಕ್ಕೆ ಹೋಗಿ ವರ್ಚಸ್ಸು ಹೆಚ್ಚಿಸಿಕೊಳ್ತಿದ್ದಾರೆ: ಮೋದಿ ವಿರುದ್ದ ಮಮತಾ ಆಕ್ರೋಶ - ಮೈತ್ರಿಕೂಟ ಸಭೆ

ಪ್ರಧಾನಿ ಮೋದಿ ವಿದೇಶ ಪ್ರವಾಸದ ಬಗ್ಗೆ ಮಮತಾ ಬ್ಯಾನರ್ಜಿ ಅಸಮಾಧಾನ ಹೊರಹಾಕಿದ್ದಾರೆ.

ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
author img

By

Published : Jul 18, 2023, 7:32 PM IST

ಬೆಂಗಳೂರು : ಗಲಭೆ ಪೀಡಿತ ಮಣಿಪುರಕ್ಕೆ ಹೋಗುವ ಬದಲು ವಿವಿಧೆಡೆ ಭೇಟಿ ನೀಡಿ ತಮ್ಮ ವೈಯ್ಯಕ್ತಿಕ ವರ್ಚಸ್ಸು ಹೆಚ್ಚಿಸುವಲ್ಲಿ ನಿರತರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ನಡೆದ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷದ ಮೈತ್ರಿಕೂಟದ ಸಭೆಯಲ್ಲಿ ಅವರು ಕಿಡಿಕಾರಿದ್ದಾರೆ.

ಸಭೆಯಲ್ಲಿ ಮಾತನಾಡಿದ ಅವರು, ಮಣಿಪುರ ಹೊತ್ತಿ ಉರಿಯುತ್ತಿದ್ದು, ನೂರಾರು‌ ಮಹಿಳೆಯರು ರಸ್ತೆಯಲ್ಲಿದ್ದಾರೆ. ಮಣಿಪುರದ ಮಹಿಳೆಯರಿಗೆ ನಾನು ಸಲ್ಯೂಟ್ ಮಾಡುತ್ತೇನೆ. ಅವರು ರಸ್ತೆಗಿಳಿದು ಹೋರಾಟ ಮಾಡುವ ಮೂಲಕ ಮಣಿಪುರವನ್ನು ರಕ್ಷಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಣಿಪುರ ಮಹಿಳೆಯರ ಚಳವಳಿ ಬಹಳ ಶಕ್ತಿಯುತವಾಗಿದೆ.

ಆದರೆ, ಮಣಿಪುರದ ಸ್ಥಿತಿ ನೋಡಿ ನಮಗೆ ಬೇಸರವಾಗಿದೆ. ಜೊತೆಗೆ ನಾಚಿಗೆಯಾಗಿದೆ. ಕೇಂದ್ರ ಸರ್ಕಾರ ಯಾರನ್ನೂ ಮಣಿಪುರಕ್ಕೆ ಭೇಟಿ ನೀಡಲು ಅವಕಾಶ ಕೊಡುತ್ತಿಲ್ಲ. ಆದರೆ ಬಿಜೆಪಿ ನಾಯಕರು ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಆ ಮೂಲಕ ತಮ್ಮ ವೈಯಕ್ತಿಕ ಇಮೇಜ್ ಹೆಚ್ಚಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ವಿದೇಶ ಪ್ರವಾಸಕ್ಕೆ ತಿರುಗೇಟು ನೀಡಿದರು.

ಮಾಸ್ಟರ್ ಮೈಂಡ್ ಡಿಕೆಶಿ : ಸಭೆಗೆ ಆಗಮಿಸುತ್ತಿದ್ದ ಹಾಗೆ ಮಮತಾ ಬ್ಯಾನರ್ಜಿಗೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎದುರಾಗುತ್ತಾರೆ. ಈ ವೇಳೆ ಮಮತಾ ಡಿಕೆಶಿ ಮಾಸ್ಟರ್ ಮೈಂಡ್ ಆಫ್ ಗೇಮ್ ಎಂದು ಆಡಿ ಹೊಗಳಿದರು. ಬೆಂಗಳೂರಿನ ಹವಾಮಾನ ಬಹಳ ಉತ್ತಮವಾಗಿದ್ದು, ರಾಜಕೀಯ ವಾತಾವರಣ ಕೂಡ ಚೆನ್ನಾಗಿದೆ. ಡಿಕೆ ಶಿವಕುಮಾರ್​ ಮಾಸ್ಟರ್ ಮೈಂಡ್ ಆಫ್ ಗೇಮ್‌ ಆಗಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ, ಕೇರಳ ಮಾಜಿ ಸಿಎಂ ಉಮನ್ ಚಾಂಡಿ ನಿಧನಕ್ಕೆ ಮಮತಾ ಕಂಬನಿ ಮಿಡಿದರು. ನನಗೆ ಅವರು ಗೊತ್ತು. ಅವರ ಸಾವಿನಿಂದ ಬೇಸರ ಆಗಿದೆ. ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಅವರ ಕುಟುಂಬಕ್ಕೆ ಅವರ ನಿಧನದ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಎನ್​ಡಿಎ ಸವಾಲು ಮಾಡಲಿದೆಯಾ : ತಾಜ್​ವೆಸ್ಟ್​ಎಂಡ್​ ಸಭೆ ನಡೆಸಿದ ವಿಪಕ್ಷಗಳು ಮಹಾಘಟಬಂಧನಕ್ಕೆ ಇಂಡಿಯಾ ಎಂದು ಹೆಸರಿಟ್ಟಿದ್ದು, ಈ ವೇಳೆ ಮಾತನಾಡಿದ ಮಮತಾ ಬ್ಯಾನರ್ಜಿ 'ಇಂಡಿಯಾ'ಕ್ಕೆ ಎನ್​ಡಿಎ ಸವಾಲು ಮಾಡಲಿದೆಯಾ, ಭಾರತಕ್ಕೆ ಮೋದಿ ಕೂಟ ಸವಾಲಾಗಲು ಸಾಧ್ಯವೇ ಇಲ್ಲ. ದೇಶವನ್ನು ಉಳಿಸಲು ನಾವು ಒಂದಾಗಬೇಕಿದೆ. ದೇಶ, ನಮ್ಮ ಸಂಸ್ಥೆಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಚಾಲೆಂಜ್​ಗಳನ್ನು ಎದುರಿಸಲು ನಾವು ಸಿದ್ಧರಿದ್ದೇವೆ. ಇಂಡಿಯಾ ಗೆಲ್ಲುತ್ತೆ, ಎನ್​ಡಿಎ ಸೋಲುತ್ತೆ. ದೇಶದ ಪ್ರತಿ ಜನರೂ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. 26 ಪಕ್ಷಗಳ ನಾಯಕರು ದೇಶಕ್ಕಾಗಿ ಒಂದಾಗಿದ್ದೇವೆ ಎಂದು ಮಮತಾ ಹೇಳಿದರು.

ಮಣಿಪುರ, ಹಿಮಾಚಲ ಪ್ರದೇಶ, ಪಶ್ಚಿಮಬಂಗಾಳ, ಬಿಹಾರ, ಮಹಾರಾಷ್ಟ್ರ ಸರ್ಕಾರ ಪತನ ಮಾಡುವುದು ಕೇಂದ್ರ ಸರ್ಕಾರದ ಕೆಲಸವಾಗಿದೆ. ಇಂಡಿಯಾವನ್ನು ಬಿಜೆಪಿ ಚಾಲೆಂಜ್ ಮಾಡುತ್ತದಾ?, ನಾವು ಯುವಕರಿಗಾಗಿ, ರೈತರಿಗಾಗಿ, ದಲಿತರಿಗಾಗಿ, ದೇಶಕ್ಕಾಗಿ ಇದ್ದೇವೆ. ದೇಶವನ್ನು ಬಿಜೆಪಿ ಮಾರಾಟದ ವಸ್ತುವನ್ನಾಗಿ ಮಾಡಿಕೊಂಡಿದೆ. ಪ್ರಜಾಪ್ರಭುತ್ವ ಖರೀದಿಸುವ ವ್ಯಾಪಾರವನ್ನಾಗಿ ಮಾಡಿಕೊಂಡಿದೆ ಎಂದು ಬಿಜೆಪಿ ವಿರುದ್ದ ಮಮತಾ ಆಕ್ರೋಶ ಹೊರಹಾಕಿದರು.

ಇದನ್ನೂ ಓದಿ : ಸೋನಿಯಾಗೆ ಇನ್ನಷ್ಟು ಹತ್ತಿರವಾದ ಮಮತಾ.. ''ಪ್ರತಿಪಕ್ಷಗಳ ಸಭೆ ಪ್ರಜಾಪ್ರಭುತ್ವಕ್ಕೆ ಉತ್ತಮ'': ಮಮತಾ ಬ್ಯಾನರ್ಜಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.