ETV Bharat / state

ಕನ್ನಡ ಸಾಹಿತ್ಯ ಪರಿಷತ್ ಮುಂಭಾಗ ಪಂಪನ ಪ್ರತಿಮೆ ಸ್ಥಾಪನೆ: ಡಾ.ಮಹೇಶ ಜೋಶಿ

ಪಂಪ ಮಹಾಕವಿ ರಸ್ತೆಯನ್ನು ಆಕರ್ಷಣೀಯವಾಗಿ ಆಧುನೀಕರಣಗೊಳಿಸಿ ಕನ್ನಡಮಯ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.

installation-of-pampa-mahakavi-statue-in-front-of-kannada-sahitya-parishad
ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದಲ್ಲಿ ಪಂಪ ಮಹಾಕವಿ ಪ್ರತಿಮೆ ಸ್ಥಾಪನೆ: ಡಾ.ಮಹೇಶ ಜೋಶಿ
author img

By

Published : Apr 5, 2023, 9:59 PM IST

ಬೆಂಗಳೂರು: ಮನುಷ್ಯ ಜಾತಿ ತಾನೊಂದೆ ವಲಂ ಎಂಬ ಘೋಷವಾಕ್ಯವನ್ನು ನೀಡುವ ಮೂಲಕ ಜಾತ್ಯತೀಯ ವಿಚಾರವನ್ನು ಪ್ರಚುರಪಡಿಸಿದ್ದ ಕನ್ನಡದ ಆದಿಕವಿ, ಮಹಾಕವಿ ಪಂಪನ ಪುತ್ಥಳಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದ ಆವರಣದ ಗೋಡೆಗೆ ತಗುಲಿಕೊಂಡಂತೆ ಪಂಪ ಮಹಾಕವಿ ರಸ್ತೆಯ ಪಕ್ಕದಲ್ಲಿ ಸ್ಥಾಪಿಸಲು ಹಾಗೂ ರಸ್ತೆಯನ್ನು ವಿಶೇಷ ರಸ್ತೆ ಎಂದು ಪರಿಗಣಿಸಿ ಪ್ರೇಕ್ಷಣೀಯ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಅನುಮತಿ ಕೇಳಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತು ತನ್ನ ಕಚೇರಿಯ ಮುಂಭಾಗದಲ್ಲಿರುವ ಪಂಪ ಮಹಾಕವಿ ರಸ್ತೆಯಲ್ಲಿ ಆದಿಕವಿ ಪಂಪನ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಪಂಪ ಮಹಾಕವಿ ರಸ್ತೆಯನ್ನು ಕನ್ನಡ ಇತಿಹಾಸ ಸಾರುವ ರಸ್ತೆಯನ್ನಾಗಿಸಿ ಮೇಲು ದರ್ಜೆಗೆ ಏರಿಸಬೇಕೆಂದು ಪರಿಷತ್ತಿನ ಉದ್ದೇಶವಾಗಿದೆ. ಸಮಗ್ರ ಕನ್ನಡಿಗರ ಏಕಮಾತ್ರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಹಾಗೂ ಎಲ್ಲ ಸಂಘ-ಸಂಸ್ಥೆಗಳಿಗೆ ಮಾತೃ ಸಂಸ್ಥೆಯಾಗಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮುಂಭಾಗದಲ್ಲಿನ ಮಿಂಟೋ ಕಣ್ಣಿನ ಆಸ್ಪತ್ರೆಯಿಂದ ನ್ಯಾಷನಲ್ ಕಾಲೇಜು ರಸ್ತೆ ತುದಿಯವರೆಗೆ ಇರುವ ಪಂಪ ಮಹಾಕವಿ ರಸ್ತೆಯನ್ನು ಆಕರ್ಷಣೀಯವಾಗಿ ಆಧುನಿಕರಣಗೊಳಿಸಿ ಕನ್ನಡಮಯ ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಬೇಕೆಂಬುದು ಪರಿಷತ್ತಿನ ಆಶಯವಾಗಿದೆ.

ಈ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಗಳಾದ ರಾಕೇಶ್ ಸಿಂಗ್‌ ಅವರ ಬಳಿಯೂ ಚರ್ಚಿಸಲಾಗಿದೆ. ಈ ರಸ್ತೆಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ ಸೌಂದರ್ಯೀಕರಣಗೊಳಿಸಿ, ಕನ್ನಡ ಗೀತೆಗಳು, ಕನ್ನಡದ ಸಂಗೀತವನ್ನು ಬಿತ್ತರಿಸುವ ವ್ಯವಸ್ಥೆ ಮಾಡುವುದರ ಜೊತೆಗೆ ಇನ್ನಿತರೆ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿಕೊಡಬೇಕೆಂದು ಕೋರಿ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: ಕಸಾಪದಲ್ಲಿ ನಾಡು ನುಡಿಗೆ ಮಹತ್ವವೇ ಹೊರತು ರಾಜಕೀಯಕ್ಕಲ್ಲ: ಡಾ.ಮಹೇಶ್​ ಜೋಶಿ

ಇದಾದ ನಂತರ ಎರಡನೆಯ ಪತ್ರವನ್ನು ನೀಡಲಾಗಿದೆ, ಪರಿಷತ್ತಿನ ಪತ್ರಕ್ಕೆ ಪಾಲಿಕೆಯ ಆಡಳಿತಗಾರರು ಮುಖ್ಯ ಆಯುಕ್ತರಿಗೆ ಪಂಪ ಮಹಾಕವಿ ರಸ್ತೆಯನ್ನು ವಿಶೇಷ ರಸ್ತೆ ಎಂದು ಪರಿಗಣಿಸಿ, ಅಭಿವೃದ್ಧಿಪಡಿಸುವ ಕುರಿತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಶ್ರೀ ಗಣೇಶ್ ಚಾರಿಟಬಲ್ ಟ್ರಸ್ಟ್ ಅವರ ಸಹಯೋಗದೊಂದಿಗೆ ಪಾರಂಪರಿಕ ಮಹತ್ವವುಳ್ಳ ಆದಿ ಕವಿ ಪಂಪನ ಪ್ರತಿಮೆ ಸ್ಥಾಪಿಸಬೇಕೆಂಬ ಸದುದ್ದೇಶವನ್ನು ಕನ್ನಡ ಸಾಹಿತ್ಯ ಪರಿಷತ್ತು ಹೊಂದಿದೆ. '

ಇದನ್ನೂ ಓದಿ: ಪದ್ಮವಿಭೂಷಣ ಮಾಜಿ ಸಿಎಂ ಎಸ್ ಎಂ ಕೃಷ್ಣರಿಗೆ ಕನ್ನಡ ಸಾಹಿತ್ಯ ಪರಿಷತ್​ದಿಂದ ಸನ್ಮಾನ

ಈ ಪುತ್ಥಳಿ ಸ್ಥಾಪನೆಯಿಂದಾಗಿ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಲೀ, ವಾಹನಗಳ ಸಂಚಾರಕ್ಕೆ ವ್ಯತ್ಯಯವಾಗಲೀ ಉಂಟಾಗುವುದಿಲ್ಲ, ಪರಿಷತ್ತಿನ ಕಟ್ಟಡಕ್ಕೆ ಹತ್ತಿರವಾಗುವಂತೆ ಪುತ್ಥಳಿಯನ್ನು ಸ್ಥಾಪಿಸಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಉದ್ದೇಶವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಪಂಪ ಮಹಾಕವಿ ಮಾರ್ಗದ ಹೆಸರು ಬದಲಾವಣೆ ವದಂತಿ: ಕಸಾಪ ಅಧ್ಯಕ್ಷ ಮಹೇಶ್​ ಜೋಶಿ ಸ್ಪಷ್ಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.