ETV Bharat / state

ಸತತ 6 ಗಂಟೆ ನಂತರ ಬಿನೇಶ್ ಕೊಡಿಯೇರಿ ವಿಚಾರಣೆ ಅಂತ್ಯ

ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನ ವಿಚಾರಣೆ ಸತತ 6 ಗಂಟೆಗಳ ನಂತರ ಮುಕ್ತಾಯವಾಗಿದೆ.

inquiry-end-kodiyeri-balakrishnan-son-of-former-home-minister-kerala
ಸತತ 6 ಗಂಟೆ ನಂತರ ಬಿನೇಶ್ ಕೊಡಿಯೇರಿ ವಿಚಾರಣೆ ಅಂತ್ಯ
author img

By

Published : Oct 6, 2020, 6:17 PM IST

ಬೆಂಗಳೂರು: ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿರುವ ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಪುತ್ರನ ವಿಚಾರಣೆಯನ್ನ ಸತತ 6 ಗಂಟೆಗಳ ಕಾಲ ಇಡಿ ಅಧಿಕಾರಿಗಳು ನಡೆಸಿದ್ದಾರೆ. ಬಳಿಕ ಸಾಕಷ್ಟು ಗಾಬರಿಗೊಂಡಿರುವ ಬಿನೇಶ್ ವಿಚಾರಣೆ ಮುಗಿಸಿ ಇಡಿ ಕಚೇರಿ ವಿಸಿಟರ್ ಏರಿಯಾದಲ್ಲಿ ಸುಸ್ತಾಗಿ ವಿಶ್ರಾಂತಿ ಪಡೆದಿದ್ದಾರೆ.

ಸತತ 6 ಗಂಟೆ ನಂತರ ಬಿನೇಶ್ ಕೊಡಿಯೇರಿ ವಿಚಾರಣೆ ಅಂತ್ಯ

ಬೆಳಗ್ಗೆ 11 ಗಂಟೆಗೆ ಶಾಂತಿನಗರ ಬಳಿಯ ಜಾರಿ ನಿರ್ದೇಶಾನಾಲಯ ಕಚೇರಿಗೆ ಸಮನ್ಸ್ ಹಿನ್ನೆಲೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಎನ್​ಸಿಬಿ ಬಂಧಿಸಿದ ಅನೂಪ್ ಜೊತೆಗಿನ ವ್ಯವಹಾರ ಬಗ್ಗೆ ಮಾಹಿತಿ ಕಲೆಹಾಕಿದರು. ಬೆಂಗಳೂರು ಮತ್ತು ಕೇರಳದಲ್ಲಿ ಹೋಟೆಲ್ ನಡೆಸಿದ್ದೆವು, ಆದರೆ ಯಾವುದೇ ಡ್ರಗ್ ದಂಧೆಯಲ್ಲಿ ಭಾಗಿಯಾಗಿಲ್ಲ. ನಾನು ಅನೂಪ್​ಗೆ 50 ಲಕ್ಷ ಅಲ್ಲ, 70 ಲಕ್ಷ ಹಣ ನೀಡಿದ್ದೆ. ನಾನು ಡ್ರಗ್ ವ್ಯವಹಾರ ನಡೆಸಿಲ್ಲ ಎಂದು ಅಧಿಕಾರಿಗಳ ಎದುರು ತಿಳಿಸಿದ್ದಾರೆ‌.

ಸದ್ಯ ಕೆಲ ಮಾಹಿತಿಗಳನ್ನ ಕಲೆಹಾಕಿರುವ ಇಡಿ ಮತ್ತೆ ವಿಚಾರಣೆಗೆ ಅವಶ್ಯಕತೆ ಇದ್ದರೆ ಕರೆಯುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.