ETV Bharat / state

ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ.. ವಿಚಾರಣಾ ಆಯೋಗಕ್ಕೆ ಜೂ. 8ರೊಳಗೆ ಅಹವಾಲು ಸಲ್ಲಿಸಲು ಸೂಚನೆ

author img

By

Published : Jun 1, 2022, 9:36 PM IST

ರಾಜ್ಯ ಸರ್ಕಾರವು ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗಕ್ಕೆ ಅಹವಾಲು ಅಥವಾ ಸಲಹೆ ಸಲ್ಲಿಸಲು ಸಮಯ ನಿಗದಿ ಮಾಡಿದೆ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು: ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಕುರಿತಂತೆ ವರದಿ ಸಲ್ಲಿಸಲು ರಚಿತವಾಗಿರುವ ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗಕ್ಕೆ ಅಹವಾಲು ಅಥವಾ ಸಲಹೆಗಳನ್ನು ಜೂನ್ 8 ರೊಳಗೆ ಸಲ್ಲಿಸುವಂತೆ ಆಯೋಗವು ತಿಳಿಸಿದೆ.

ರಾಜ್ಯ ಸರ್ಕಾರ ತನ್ನ ಆದೇಶದಲ್ಲಿ ಮೂರು ತಿಂಗಳೊಳಗೆ ವಿಚಾರಣಾ ವರದಿಯನ್ನು ಸಲ್ಲಿಸಲು ಆಯೋಗಕ್ಕೆ ಸೂಚಿಸಿದೆ. ಸಾರ್ವಜನಿಕರು, ವಿಶೇಷವಾಗಿ ಜನ ಪ್ರತಿನಿಧಿಗಳು, ಕಾರ್ಯದರ್ಶಿಗಳು, ನ್ಯಾಯಮೂರ್ತಿ ಕೆ. ಭಕ್ತವತ್ಸಲ ವಿಚಾರಣಾ ಆಯೋಗ, ಕೊಠಡಿ ಸಂಖ್ಯೆ : 133 ಮತ್ತು 134, ಮೊದಲನೇ ಮಹಡಿ ವಿಕಾಸಸೌಧ, ಡಾ. ಅಂಬೇಡ್ಕರ್ ರಸ್ತೆ, ಬೆಂಗಳೂರು – 560 001 ಇವರಿಗೆ ತಮ್ಮ ಅಹವಾಲು ಅಥವಾ ಸಲಹೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿ ಅಥವಾ ವಿವರಗಳು, ಅವಶ್ಯಕತೆ ಇದ್ದಲ್ಲಿ, ಆಯೋಗದ ಕಾರ್ಯದರ್ಶಿಯವರನ್ನು ದೂರವಾಣಿ ಸಂಖ್ಯೆ : 080 – 2235 2152 ಹಾಗೂ 080 – 2203 4004 ಮೂಲಕ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಓದಿ: ಸಚಿವ ಬಿ. ಸಿ ನಾಗೇಶ್ ಮನೆಗೆ ನುಗ್ಗಿ ದಾಂಧಲೆ ನಡೆಸಿದವರ ವಿರುದ್ಧ ಕ್ರಮ: ಸಿಎಂ ಬೊಮ್ಮಾಯಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.