ETV Bharat / state

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ: ವಿವಿಧ ಭಾಷೆಯ 76 ಸಿನಿಮಾಗಳ ಪ್ರದರ್ಶನ - ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಇನ್ನೋವೇಟಿವ್‌ ಚಲನಚಿತ್ರೋತ್ಸವ (Innovative International Film Festival) ಕ್ಕೆ ಶುಕ್ರವಾರ ಚಾಲನೆ ನೀಡಲಾಗಿದೆ.

innovative-international-film-festival-in-bengaluru
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ: ವಿವಿಧ ಭಾಷೆಯ 76 ಸಿನಿಮಾಗಳ ಪ್ರದರ್ಶನ
author img

By

Published : Oct 16, 2021, 4:13 AM IST

Updated : Oct 16, 2021, 4:20 AM IST

ಬೆಂಗಳೂರು: ನಗರದಲ್ಲಿ ಅಂತಾರಾಷ್ಟ್ರೀಯ ಇನ್ನೋವೇಟಿವ್‌ ಚಲನಚಿತ್ರೋತ್ಸವ (Innovative International Film Festival) ಕ್ಕೆ ಚಾಲನೆ ಸಿಕ್ಕಿದೆ. ಮಾರತ್​ಹಳ್ಳಿಯ ಮಲ್ಟಿಪ್ಲೆಕ್ಸ್‌ನಲ್ಲಿ ಮೂರು ದಿನಗಳ ಕಾಲ 36 ದೇಶಗಳ 40 ಭಾಷೆಯ, 76 ಸಿನಿಮಾಗಳ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಮಾರತ್​ಹಳ್ಳಿಯ ಮಲ್ಟಿಪ್ಲೆಕ್ಸ್‌ನಲ್ಲಿ ರೆಡ್ ಕಾರ್ಪೆಟ್‌ ಸಂಭ್ರಮದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಜೆಕ್‌ ರಿಪಬ್ಲಿಕ್‌, ಪೆರು, ಬ್ರೆಜಿಲ್‌, ಇಸ್ರೇಲ್‌, ದಕ್ಷಿಣ ಕೋರಿಯಾ, ನೆದರ್‌ಲ್ಯ್ಸಾಂಡ್ಸ್‌, ಜಪಾನ್‌, ಮಲೇಷ್ಯಾ, ಪೋಲ್ಯಾಂಡ್‌ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

innovative-international-film-festival-in-bengaluru
ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಇನ್ನೋವೇಟಿವ್ ಫಿಲಂ ಅಕಾಡೆಮಿಯ ನಿರ್ದೇಶಕ ಸರವಣ ಪ್ರಸಾದ್, ಭಾರತೀಯ ಚಿತ್ರರಂಗಕ್ಕಾಗಿ ನಾವು ಅಂತಾರಾಷ್ಟ್ರೀಯ ಇನ್ನೋವೇಟಿವ್ ಚಲನಚಿತ್ರೋತ್ಸವ-20121ನ್ನು ಏರ್ಪಡಿಸಿರುವುದು ಖುಷಿಯ ವಿಚಾರ. ಈ ಚಿತ್ರೋತ್ಸವದಿಂದ ವಿದೇಶಿ ಸಿನಿಮಾಗಳ ಮಾರುಕಟ್ಟೆಯ ತಿಳಿದುಕೊಳ್ಳಲು ಅನುಕೂಲವಾಗಿದೆ. ಜೊತೆಗೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಲು ಮತ್ತು ಬೇರೆ ಬೇರೆ ದೇಶಗಳ ಪ್ರತಿಭೆಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದರು.

Innovative International Film Festival in bengaluru
ಚಲನಚಿತ್ರೋತ್ಸವಕ್ಕೆ ಚಾಲನೆ

ಮೊದಲ ದಿನ ಏಷ್ಯಾ ಖಂಡದ ಸಿನಿಮಾಗಳ ಪ್ರದರ್ಶನವಿತ್ತು. ಇಸ್ರೇಲ್​ನ ಸಿನಿಮಾವನ್ನೂ ಕೂಡ ಉದ್ಘಾಟನಾ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು. ರವಿಚಂದ್ರನ್‌ ನಟನೆಯ ‘ಕನ್ನಡಿಗ’ ಸಿನಿಮಾವನ್ನು ಇದೇ ಚಿತ್ರೋತ್ಸವದಲ್ಲಿ ಪ್ರೀಮಿಯರ್‌ ಮಾಡಲಾಯಿತು. ಈ ಚಿತ್ರೋತ್ಸವದಲ್ಲಿ ಹಲವು ಕಾರ್ಯಾಗಾರ, ಚರ್ಚೆಗಳು ನಡೆಯಲಿದ್ದು, ಉತ್ತಮ ಸಿನಿಮಾಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ಸಹ ನೀಡಲಾಗುತ್ತಿದೆ. ಉದ್ಘಾಟನಾ ಸಮಾರಂಭದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: IPL 2021: ಫೈನಲ್​ನಲ್ಲಿ ಮುಗ್ಗರಿಸಿದ KKR... 4ನೇ ಬಾರಿಗೆ ಚಾಂಪಿಯನ್​ ಪಟ್ಟಕ್ಕೇರಿದ ಧೋನಿ ಪಡೆ

Last Updated : Oct 16, 2021, 4:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.