ETV Bharat / state

3 ತಿಂಗಳು ಬಂಧಿಯಾಗಿದ್ದ ಅಮಾಯಕ: ಗಾಂಜಾ ಅಮಲಿನಲ್ಲಿ ಯುವಕನ ದರ್ಪ - bangalore man beaten news

ಮಂಗಳೂರು ಮೂಲದ ಸ್ವರೂಪ್ ಶೆಟ್ಟಿ ಎಂಬ ವ್ಯಕ್ತಿ ಅಮಾಯಕ ಯುವಕನಿಗೆ ಹಣದ ಆಮಿಷ ತೋರಿಸಿ, ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡು ಬಳಿಕ ಆತನ ಕುಟುಂಬಸ್ಥರಿಂದ ಹಣವನ್ನು ಪಡೆದುಕೊಂಡಿದ್ದಾನೆ. ಅಲ್ಲದೇ ಯುವಕನನ್ನು ಮೂರು ತಿಂಗಳು ಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಗಾಂಜಾ ಅಮಲಿನಲ್ಲಿ ಯುವಕನ ದರ್ಪ
ಗಾಂಜಾ ಅಮಲಿನಲ್ಲಿ ಯುವಕನ ದರ್ಪ
author img

By

Published : Dec 21, 2020, 2:45 PM IST

ಬೆಂಗಳೂರು: ಮಂಗಳೂರು ಮೂಲದ ಸ್ವರೂಪ್ ಶೆಟ್ಟಿ ಎಂಬಾತ‌ ಹಾವೇರಿ ಮೂಲದ ಯುವಕನನ್ನು ಮೊದಲು ಬೆಂಗಳೂರಿನ ಎಟ್ರಿಯಾ (ರಾಡಿಸನ್ ಬ್ಲೂ) ಹೋಟೆಲ್​ನಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಅದೇ ಹೋಟೆಲ್​ನಲ್ಲಿ ಅಮಾಯಕ ಯುವಕ ಕೆಲಸ ಮಾಡುತ್ತಿದ್ದು, ಹೋಟೆಲ್​ಗೆ ಗ್ರಾಹಕನಾಗಿ ಯಾವಾಗಲು ಸ್ವರೂಪ್ ಬರುತ್ತಿದ್ದನು.

ಪ್ರತಿ ದಿನಾಲೂ ಈ ಯುವಕನೇ ಸ್ವರೂಪ್​ಗೆ ಸಪ್ಲೈ ಮಾಡ್ತಿದ್ದ. ಹೀಗೆ ಇಬ್ಬರ ನಡುವೆ ಸ್ನೇಹ ಬೆಳೆದಿದೆ. ಬಳಿಕ ಯುವಕ ತನಗೆ ಹಣಕಾಸಿನ ತೊಂದರೆ ಇದೆ ಎಂದು ಸ್ವರೂಪ್​ ಬಳಿ ಹೇಳಿಕೊಂಡಿದ್ದ. ನಂತರ ಸ್ವರೂಪ್​ ನಾನು ನಿನಗೆ ಸಹಾಯ ಮಾಡುತ್ತೇನಿ, ಆದರೆ ಸಹಾಯ ಮಾಡುತ್ತಿರುವುದನ್ನು ಯಾರಿಗೂ ಹೇಳಬಾರದು ಎಂದಿದ್ದಾನೆ.

ಬಳಿಕ ಸ್ವರೂಪ್ ಕೇರಳ ಮೂಲದ ಓರ್ವ ಸ್ವಾಮೀಜಿ ಬಗ್ಗೆ ಯುವಕನ ಜೊತೆ ಮಾತನಾಡಿ, ಅವರು ನನಗೆ 24 ಲಕ್ಷ ರೂ. ಹಣವನ್ನು ಅಕೌಂಟ್​ಗೆ ಹಾಕಿದ್ದಾರೆ ಎಂದಿದ್ದಾನೆ. ಇದಕ್ಕೆ ಟ್ಯಾಕ್ಸ್​ ಕಟ್ಟಬೇಕು. ಆ ಹಣವನ್ನು ನೀನು ಕೊಡು ಎಂದು ಯುವಕನಿಗೆ ಹೇಳಿದ್ದಾನೆ. ಆಗ ಯುವಕ ತನ್ನ ಮಾವನನ್ನು ಸಂಪರ್ಕ ಮಾಡಿ ಐದು ಲಕ್ಷ ರೂ. ಹಣವನ್ನು ಸ್ವರೂಪ್​ಗೆ ಕೊಟ್ಟಿದ್ದಾನೆ. ಟ್ಯಾಕ್ಸ್​ ಕಟ್ಟಿದ ಮೇಲೂ ಯುವಕನ ಖಾತೆಗೆ ಯಾವುದೇ ಹಣ ಬಂದಿರುವುದಿಲ್ಲ. ಈ ಬಗ್ಗೆ ಕೇಳಿದಾಗ ಮತ್ತೆ ಹಣವನ್ನು ಆತನೇ ಕೊಡುವುದಾಗಿ ಹೇಳಿ, ಕಾಡುಗೋಡಿ ಬಳಿಯ ತನ್ನ ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡಿದ್ದಾನೆ.

ಗಾಂಜಾ ಅಮಲಿನಲ್ಲಿ ಯುವಕನ ದರ್ಪ
ಮಂಗಳೂರು ಮೂಲದ ಸ್ವರೂಪ್ ಶೆಟ್ಟಿ

ಅಪಾರ್ಟ್​ಮೆಂಟ್​ಗೆ ಕರೆಸಿಕೊಂಡು ಬರೋಬ್ಬರಿ ಮೂರು ತಿಂಗಳು ಅಕ್ರಮವಾಗಿ ಬಂಧನದಲ್ಲಿಟ್ಟು, ಪೊಲೀಸರ ರೀತಿ ಅರ್ಷದ್​ ತಾಯಿಗೆ ಫೋನ್ ಮಾಡಿ ಚೆಕ್ ಬೌನ್ಸ್ ಕೇಸ್​ನಲ್ಲಿ ಅರೆಸ್ಟ್ ಮಾಡಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ರೀತಿ ಹೇಳಿ ಬರೋಬ್ಬರಿ 48 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ. ಬಳಿಕ ಮೋಸ ಹೋಗುತ್ತಿರುವ ವಿಚಾರ ತಿಳಿದ ಯುವಕನ ಕುಟುಂಬಸ್ಥರು ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸ್ವರೂಪ್​ ಮೂರು ತಿಂಗಳು ಅಮಾಯಕ ಯುವಕನಿಗೆ ಹೊಡೆಯುವುದು, ಒದೆಯುವುದು ಮಾಡಿ ಚಿತ್ರಹಿಂಸೆ ನೀಡಿದ್ದಾನೆ.

ಓದಿ:ಡ್ರಗ್ಸ್​​ ಪ್ರಕರಣ : ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಅರೆಸ್ಟ್​

ಇನ್ನು ತನಿಖೆ ವೇಳೆ, ಆರೋಪಿ ವಿರುದ್ಧ ಮಂಗಳೂರು ಸುತ್ತಮುತ್ತ ಏಳು ವಂಚನೆ ಹಾಗೂ ಅಕ್ರಮ ಬಂಧನ ಕೇಸ್ ದಾಖಲಾಗಿರುವುದು ತಿಳಿದು ಬಂದಿದೆ. ಕೆಲ ದಿನಗಳ ಹಿಂದೆ ಪುಣೆಯಲ್ಲಿ ಓರ್ವರಿಗೆ ತಾನು ಎಮ್​ಎನ್​ಸಿ ಕಂಪನಿ ಸಿಇಒ ಎಂದು ಹೇಳಿಕೊಂಡು, ತನಗೆ ಹಣದ ಅವಶ್ಯಕತೆ ಇದೆ ಎಂದು ನಂಬಿಸಿ ಬರೋಬ್ಬರಿ ಹತ್ತು ಲಕ್ಷ ವಂಚನೆ ಮಾಡಿದ್ದಾನೆ. ಹೀಗಾಗಿ ಸದ್ಯ ಅರೋಪಿ ಸ್ವರೂಪ್ ಶೆಟ್ಟಿ ವಿರುದ್ಧ ಪುಣೆಯಲ್ಲಿ ಸಹ ಕೇಸ್ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.