ETV Bharat / state

ಎಫ್​ಐಆರ್​ ವರ್ಗಾಯಿಸಿದ  ಬಳಿಕ ನ್ಯಾಯಾಲಯಕ್ಕೆ ತಿಳಿಸಿ: ಗೃಹ ಇಲಾಖೆಗೆ ಹೈಕೋರ್ಟ್​ ಸೂಚನೆ - ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ

ಒಂದು ಪೊಲೀಸ್​ ಠಾಣೆಯಿಂದ ಮತ್ತೊಂದು ಠಾಣೆಗೆ ಎಫ್​ಐಆರ್​ ವರ್ಗಾವಣೆ ಮಾಡಿದ ಬಳಿಕ ನ್ಯಾಯಾಲಯಕ್ಕೆ ತಿಳಿಸಬೇಕೆಂದು ಗೃಹ ಇಲಾಖೆಗೆ ಹೈಕೋರ್ಟ್​ ಸೂಚನೆ ನೀಡಿದೆ.

Inform court after transfer of FIR  High court notice to home department  Karnataka high court news  ಎಫ್​ಐಆರ್​ ವರ್ಗಾವಣೆಯಿಸಿದ ಬಳಿಕ ನ್ಯಾಯಾಲಯಕ್ಕೆ ತಿಳಿಸಿ  ಗೃಹ ಇಲಾಖೆಗೆ ಹೈಕೋರ್ಟ್​ ಸೂಚನೆ  ಠಾಣೆಯಿಂದ ಮತ್ತೊಂದು ಠಾಣೆಗೆ ಎಫ್​ಐಆರ್​ ವರ್ಗಾವಣೆ  ಪೊಲೀಸ್​ ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್  ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ  ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಆದೇಶ
ಗೃಹ ಇಲಾಖೆಗೆ ಹೈಕೋರ್ಟ್​ ಸೂಚನೆ
author img

By

Published : Oct 20, 2022, 10:24 AM IST

ಬೆಂಗಳೂರು: ಪೊಲೀಸ್​ ಠಾಣೆಯಲ್ಲಿ ದಾಖಲಾಗುವ ಎಫ್‌ಐಆರ್ ಅ​ನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾಯಿಸಿದ ತಕ್ಷಣ ಸಂಬಂಧಪಟ್ಟ ನ್ಯಾಯಾಲಯದ ಗಮನಕ್ಕೆ ತರಬೇಕು. ಈ ಬಗ್ಗೆ ಎಲ್ಲ ಪೊಲೀಸ್ ಠಾಣೆ ಮತ್ತು ಸರ್ಕಾರಿ ಅಭಿಯೋಜಕರಿಗೆ ಸೂಚಿಸಿ ಅಗತ್ಯ ಸುತ್ತೋಲೆ ಹೊರಡಿಸಬೇಕು ಎಂದು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಆದೇಶಿಸಿದೆ.

ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿಎನ್ ದೇಸಾಯಿ ಅವರ ನ್ಯಾಯಪೀಠ, ಸಹಾಯಕ ಸರ್ಕಾರಿ ಅಭಿಯೋಜಕರು ಮತ್ತು ತನಿಖಾಧಿಕಾರಿಗಳು ಎಫ್‌ಐಆರ್ ವರ್ಗಾವಣೆ ಮತ್ತು ಆರೋಪಪಟ್ಟಿ ಸಲ್ಲಿಕೆ ಮಾಡುವ ಬಗ್ಗೆ ಸಂಬಂಧಿಸಿದ ಕೋರ್ಟ್‌ಗಳಿಗೆ ಮಾಹಿತಿ ನೀಡದ ಕುರಿತು ಬೇಸರ ವ್ಯಕ್ತಪಡಿಸಿತು.

ಅಲ್ಲದೇ, ಸರ್ಕಾರಿ ಅಭಿಯೋಜಕರಾಗಲಿ ಮತ್ತು ತನಿಖಾಧಿಕಾರಿಯಾಗಲಿ ಎಫ್‌ಐಆರ್ ವರ್ಗಾವಣೆ ಮತ್ತು ಆರೋಪ ಪಟ್ಟಿ ಸಲ್ಲಿಕೆ ಬಗ್ಗೆ ನಿಗಾವಹಿಸಿಲ್ಲ. ಇದರಿಂದ ನ್ಯಾಯದಾನ ಸಫಲವಾಗಲಿಲ್ಲ. ಇನ್ನೂ ಎರಡೆರಡು ನ್ಯಾಯಾಲಯಗಳಲ್ಲಿ ವಿಚಾರಣಾ ಪ್ರಕ್ರಿಯೆ ನಡೆದಿದೆ. ಹಾಗಾಗಿ, ವಿಚಾರಣಾ ನ್ಯಾಯಾಲಯವು ಸರ್ಕಾರಿ ಅಭಿಯೋಜಕರು ಹಾಗೂ ತನಿಖಾಧಿಕಾರಿಯಿಂದ ಆರೋಪ ಪಟ್ಟಿ ಸಲ್ಲಿಕೆ ಖಾತರಿಪಡಿಕೊಳ್ಳಬೇಕು. ಎಫ್‌ಐಆರ್ ವರ್ಗಾವಣೆಯಾದ ಕೂಡಲೇ ಸಂಬಂಧಪಟ್ಟ ಕೋರ್ಟ್‌ನ ಗಮನಕ್ಕೆ ತರಬೇಕು. ಈ ಸಂಬಂಧ ಎಲ್ಲ ಪೊಲೀಸ್ ಠಾಣೆಗಳಿಗೆ ಮತ್ತು ಅಭಿಯೋಜಕರಿಗೆ ಸೂಚಿಸಿ ಸರ್ಕಾರವು ಸುತ್ತೋಲೆ ಹೊರಡಿಸಬೇಕು ಎಂದು ನಿರ್ದೇಶಿಸಿದೆ.

ಪ್ರಕರಣದ ಹಿನ್ನಲೆ ಏನು? : ಅಪರಿಚಿತ ಶವ ಪತ್ತೆ ಸಂಬಂಧ 2021ರ ಆ.8ರಂದು ದಾಖಲಾದ ದೂರು ಸಂಬಂಧ ಕಲಬುರಗಿಯ ಮಹಾಗಾಂವ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು, 2021ರ ಸೆ.10ರಂದು ಆರೋಪಿ ಸುನೀಲ್ ಅನ್ನು ಕೊಲೆ ಆರೋಪದಡಿ ಬಂಧಿಸಿದ್ದರು. ನಂತರ ನಿಗದಿತ 90 ದಿನಗಳಲ್ಲಿ ಆರೋಪಪಟ್ಟಿ ಸಲ್ಲಿಸಿಲ್ಲ ಎಂದು ತಿಳಿಸಿ ಜಾಮೀನು ಕೋರಿ 2021ರ ಡಿ.17ರಂದು ಸುನೀಲ್‌ಗೆ ಅರ್ಜಿ ಸಲ್ಲಿಸಿದ್ದನು.

ಇದರಿಂದ ‘ಡಿಫಾಲ್ಟ್ ಜಾಮೀನು’ ನೀಡಿದ್ದ ಕಲಬುರಗಿಯ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜಾಮೀನಿಗೆ ಭದ್ರತಾ ಖಾತರಿ ಪಡೆಯಲು ಪ್ರಕರಣವನ್ನು 2021ರ ಡಿ.22ಕ್ಕೆ ನಿಗದಿಪಡಿಸಿತ್ತು. ಈ ನಡುವೆ ನ್ಯಾಯಾಲಯದ ಕ್ಲರ್ಕ್ ಟಿಪ್ಪಣಿ ಹಾಕಿ, ಘಟನೆ ನಡೆದ ಆಧಾರದ ಮೇಲೆ ಪ್ರಕರಣದ ದಾಖಲಾದ ಒಂದು ತಿಂಗಳೊಳಗೆ ಕಲಬುರಗಿ ಗ್ರಾಮಾಂತರ ಠಾಣೆಗೆ ಎಫ್‌ಐಆರ್ ವರ್ಗಾವಣೆಗೊಂಡಿದೆ.

ನಂತರ ಗ್ರಾಮಾಂತರ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಿ, ನಿಗದಿತ 90 ದಿನಗಳ ಒಳಗೆ ದೋಷಾರೋಪ ಪಟ್ಟಿಯನ್ನು 5ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಫ್‌ಸಿ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಆದರೆ, ವಿಚಾರವನ್ನು ಕೋರ್ಟ್‌ಗೆ ತಿಳಿಸಿರಲಿಲ್ಲ ಎಂದು ಮಾಹಿತಿ ನೀಡಿದ್ದರು.

ಇದರಿಂದ 1ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಭದ್ರತಾ ಖಾತರಿ ಸ್ವೀಕರಿಸಲು ನಿರಾಕರಿಸಿತ್ತು. ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸುನೀಲ್ ಅರ್ಜಿ ಸಲ್ಲಿಸಿ, ಭದ್ರತಾ ಖಾತರಿ ಸ್ವೀಕರಿಸಲು ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

ಓದಿ: ಮಕ್ಕಳ ಪೋಷಣೆಗೆ ಮೆಕ್ಸಿಕೋ ಪತ್ನಿ - ಭಾರತದ ಪತಿ ನಡುವೆ ಸಂಧಾನ ಮಾಡಿದ ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.