ETV Bharat / state

ದೀಪಾವಳಿ ಹಬ್ಬದಂದು ಸೂರ್ಯ ಗ್ರಹಣ: ಗ್ರಹಣದ ಪರಿಣಾಮ, ಪಾಲನೆ, ಪೂಜಾ ವಿಧಾನ ಹೇಗಿರಬೇಕು? - ಹಬ್ಬದ ದಿನ ಸೂರ್ಯಗ್ರಹಣ

ದೀಪಾವಳಿಯ ಎರಡನೇ ದಿನದಂದು ಗೋವರ್ಧನ ಪೂಜೆ ಮಾಡಲಾಗುತ್ತದೆ. ಅಲ್ಲದೇ, ಅಂದು ಸಂಜೆ ಲಕ್ಷ್ಮೀ ಪೂಜೆ ಸಹ ನೆರವೇರಿಸಲಾಗುತ್ತದೆ. ಇದೇ ಸಂದರ್ಭ ಸೂರ್ಯ ಗ್ರಹಣ ಬಂದಿದೆ. ಅಕ್ಟೋಬರ್ 25 ರ ಸಂಜೆ 4:22 ಕ್ಕೆ ಸೂರ್ಯ ಗ್ರಹಣ ಪ್ರಾರಂಭವಾಗಲಿದ್ದು, ಸಂಜೆ 6.25ಕ್ಕೆ ಕೊನೆಗೊಳ್ಳುತ್ತದೆ.

solar eclipse
ಸೂರ್ಯ ಗ್ರಹಣ
author img

By

Published : Oct 22, 2022, 3:51 PM IST

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲೇ ಈ ಬಾರಿ ಸೂರ್ಯ ಗ್ರಹಣ ಸಂಭವಿಸಲಿದ್ದು, ಹಬ್ಬದ ಆಚರಣೆ ಮೇಲೆ ಸಾಕಷ್ಟು ಆತಂಕದ ಕರಿನೆರಳು ಚಾಚಿದೆ. ಜನರಲ್ಲಿ ಆಚರಣೆ ಸಂಬಂಧ ಸಾಕಷ್ಟು ಪ್ರಶ್ನೆಗಳು ಉದ್ಭವಿಸಿದ್ದು, ಗ್ರಹಣ ಕಾಲದಲ್ಲಿ ಯಾವ ವಿಧದ ಆಚರಣೆ ಸೂಕ್ತ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾರಾಂತ್ಯದ ರಜೆ ಬಳಿಕ ಈ ಸಾರಿ ದೀಪಾವಳಿ ಬಂದಿದೆ. 2022ನೇ ಸಾಲಿನಲ್ಲಿ 23 ರಂದು ಧನ ತ್ರಯೋದಶಿ, 24 ನರಕ ಚತುರ್ದಶಿ, 25 ಅಮಾವಾಸ್ಯೆ ಲಕ್ಷ್ಮೀ ಪೂಜೆ ಹಾಗೂ 26 ರಂದು ಬಲಿಪಾಡ್ಯಮಿ ದೀಪಾವಳಿ ಹೀಗೆ ನಾಲ್ಕು ದಿನಗಳ ಸಾಲು ಹಬ್ಬ ಇದೆ. ಶನಿವಾರ ಹಾಗೂ ಭಾನುವಾರದ ರಜೆ ಅನುಭವಿಸಿದವರಿಗೆ ಸೋಮವಾರ ಹಾಗೂ ಬುಧವಾರ ಸಹ ರಜೆ ಬಂದಿದೆ. ಮಂಗಳವಾರ ಒಂದು ದಿನ ರಜೆ ಹಾಕಿದರೆ ಬರೋಬ್ಬರಿ 5 ದಿನ ರಜೆ ಪಡೆದಂತೆ ಆಗಲಿದೆ.

ಉದ್ಯೋಗಿಗಳು ರಜೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿ ಪ್ರವಾಸದ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಸಾಂಪ್ರದಾಯಿಕ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರ ಪ್ರದೇಶ ಹಲವರು ಪಟಾಕಿ, ಹೊಸ ಬಟ್ಟೆ, ದೀಪ ಬೆಳಗಲು ಹಣತೆಗಳನ್ನು ಖರೀದಿಸಿ ಆಚರಣೆಗೆ ಮುಂದಾಗಿದ್ದಾರೆ. ಆದರೆ ಎಲ್ಲರಿಗೂ ಅಮಾವಾಸ್ಯೆ ಆತಂಕ ದೊಡ್ಡದಾಗಿ ಕಾಡಿದೆ.

ಹಿಂದೂ ಸನಾತನ ಧರ್ಮದಲ್ಲಿ ದೀಪಾವಳಿ ಆಚರಣೆಗೆ ಸಾಕಷ್ಟು ದೊಡ್ಡ ಪ್ರಮಾಣದ ಮಹತ್ವ ಇದೆ. ಈ ವರ್ಷ ದೀಪಾವಳಿ ಮತ್ತು ಗೋವರ್ಧನ ಪೂಜೆಯ ನಡುವೆ ಅಂದರೆ ಮಂಗಳವಾರ ಲಕ್ಷ್ಮೀ ಪೂಜೆ ದಿನ ಸೂರ್ಯಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣದ ಕರಿ ಛಾಯೆ ಹಬ್ಬದ ದಿನಗಳ ಮೇಲೆ ಯಾವ ವಿಧದ ಪರಿಣಾಮ ಬೀರಲಿದೆ ಎನ್ನುವ ಆತಂಕ ಸಹಜವಾಗಿ ಜನರಲ್ಲಿ ಮನೆ ಮಾಡಿದೆ.

ಹಬ್ಬದ ದಿನ ಸೂರ್ಯಗ್ರಹಣ: ದೀಪಾವಳಿಯ ಎರಡನೇ ದಿನದಂದು ಗೋವರ್ಧನ ಪೂಜೆ ಮಾಡಲಾಗುತ್ತದೆ. ಅಲ್ಲದೇ, ಅಂದು ಸಂಜೆ ಲಕ್ಷ್ಮೀಪೂಜೆ ಸಹ ನೆರವೇರಿಸಲಾಗುತ್ತದೆ. ಇದೇ ಸಂದರ್ಭ ಸೂರ್ಯಗ್ರಹಣ ಬಂದಿದೆ. ಅಕ್ಟೋಬರ್ 25 ರ ಸಂಜೆ 4:22 ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, ಸಂಜೆ 6.25ಕ್ಕೆ ಕೊನೆಗೊಳ್ಳುತ್ತದೆ. ಎರಡು ಗಂಟೆ ಮೂರು ನಿಮಿಷಗಳ ಕಾಲ ಗ್ರಹಣವಿರುತ್ತದೆ.

ಇದಕ್ಕೂ ಮುನ್ನ ಗ್ರಹಣದ ಪ್ರಭಾವ ಭೂಮಿಯ ಮೇಲಾಗುತ್ತದೆ ಎಂಬ ನಂಬಿಕೆಯೂ ಜನರಲ್ಲಿದೆ. ಗ್ರಹಣ ಕಳೆದ ಬಳಿಕ ಸ್ನಾನ ಮಾಡಿ ಪೂಜೆ ಮಾಡುವುದು ವಾಡಿಕೆ. ಯಾವ ವಿಧದದಲ್ಲಿ ಹಬ್ಬ ಆಚರಿಸಬೇಕೆಂಬ ಗೊಂದಲ ಜನರಲ್ಲಿ ಮೂಡಿದೆ. ಜ್ಯೋತಿಷಿಗಳ ಮಾಹಿತಿಯಂತೆ, ಗ್ರಹಣ ಸಂಭವಿಸುವ 12 ಗಂಟೆ ಮೊದಲು ಇದರ ಪರಿಣಾಮ ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಬಾರಿ ದೀಪಾವಳಿ ಮತ್ತು ಗೋವರ್ಧನ ಪೂಜೆಯ ನಡುವಿನ ಸೂರ್ಯಗ್ರಹಣದ ಸೂತಕ ಅವಧಿಯು ಅಕ್ಟೋಬರ್ 25 ರ ಬೆಳಗ್ಗೆ 4:22 ರಿಂದ ಪ್ರಾರಂಭವಾಗಲಿದೆ. ಹೀಗಾಗಿ, ಈ ಅವಧಿಯಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸುವಂತಿಲ್ಲ. ಪೂಜೆಗೆ ಸಂಬಂಧಿಸಿದ ಕೆಲಸ ಮಾಡುವಂತಿಲ್ಲ. ಆದರೆ, ಅದರ ಬದಲು ಈ ಸಮಯದಲ್ಲಿ ಮಂತ್ರಗಳ ಪಠಣ ಮತ್ತು ಕೀರ್ತನೆ ಮತ್ತು ದೇವರ ಸ್ಮರಣೆಯನ್ನು ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸೂರ್ಯಗ್ರಹಣ ಮುಗಿದ ನಂತರ, ಇಡೀ ಮನೆಯನ್ನು ಸ್ವಚ್ಛಗೊಳಿಸುವ ಜೊತೆಗೆ, ನಿಮ್ಮ ದೇವರಕೋಣೆಯನ್ನು ಸ್ವಚ್ಛಗೊಳಿಸಿ, ಮನೆಯ ಮೂಲೆ ಮೂಲೆಗಳಲ್ಲಿ ಗಂಗಾಜಲವನ್ನು ಸಿಂಪಡಿಸಿ. ಗ್ರಹಣದ ನಂತರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: 27 ವರ್ಷಗಳ ನಂತರ ದೀಪಾವಳಿ ಮರುದಿನ ಖಂಡಗ್ರಾಸ ಸೂರ್ಯಗ್ರಹಣ

ದೀಪಾವಳಿ ಪೂಜೆಗೆ ಅಭ್ಯಂತರವಿಲ್ಲ: ದೀಪಾವಳಿಯನ್ನು ಅ.24 ರಂದು ಆಚರಿಸಲಾಗುತ್ತದೆ. ಆದರೆ ಮರುದಿನ ಸೂರ್ಯಗ್ರಹಣ ಸಂಭವಿಸುತ್ತದೆ. ಹೀಗಾಗಿ, ದೀಪಾವಳಿ ಪೂಜೆಯ ಮೇಲೆ ಸೂರ್ಯಗ್ರಹಣದ ಪರಿಣಾಮ ಇರುವುದಿಲ್ಲ. ದೀಪಾವಳಿ 2022ನೇ ಸಾಲಿನಲ್ಲಿ 23 ರಂದು ಧನತ್ರಯೋದಶಿ, 24 ನರಕ ಚತುರ್ದಶಿ, 25 ಅಮಾವಾಸ್ಯೆ ಲಕ್ಷ್ಮಿ ಪೂಜೆ ಹಾಗೂ 26 ರಂದು ಬಲಿಪಾಡ್ಯಮಿ ದೀಪಾವಳಿ ಹೀಗೆ ನಾಲ್ಕು ದಿನಗಳ ಸಾಲು ಹಬ್ಬ ಇದೆ.
ಖಂಡಗ್ರಾಸ ಸೂರ್ಯಗ್ರಹಣವು ಕಾರ್ತಿಕ ಕೃಷ್ಣ ಪಕ್ಷದ ಅಮಾವಾಸ್ಯೆಯ ರಾತ್ರಿ ಅಕ್ಟೋಬರ್ 25 ರಂದು ಮಂಗಳವಾರ ಸಂಭವಿಸುತ್ತಿದೆ. ವಿಶೇಷವೆಂದರೆ, ದೀಪಾವಳಿ ಹಬ್ಬವು ಸಿದ್ಧಿಗಳ ದೊಡ್ಡ ಹಬ್ಬವಾದ್ದರಿಂದ ಋಷಿಮುನಿಗಳು ಇದನ್ನು ಸಿದ್ಧಿಕಾಲ ಎಂದು ಹೆಸರಿಸಿದ್ದಾರೆ. ಇದರಿಂದಾಗಿ ಗ್ರಹಣ ಸಂಭವಿಸಿದರೂ ಇದರಿಂದ ಯಾವುದೇ ಅಪಾಯ ಹಾಗೂ ಆತಂಕ ಇಲ್ಲ ಎಂದು ಹೇಳಲಾಗುತ್ತಿದೆ.

ಗ್ರಹಣದ ಸಮಯದಲ್ಲಿ ಶ್ರೀರಾಮಚಂದ್ರನು ಗುರು ವಶಿಷ್ಠರಿಂದ ಮತ್ತು ಶ್ರೀಕೃಷ್ಣನು ಗುರು ಸಂದೀಪನಿಂದ ದೀಕ್ಷೆ ಪಡೆದರು ಎಂಬ ನಂಬಿಕೆ ಇದೆ. ಅಲ್ಲದೇ, ಸೂರ್ಯಾಸ್ತದ ನಂತರ ಸಂಭವಿಸುವ ಸೂರ್ಯಗ್ರಹಣವು ಯಾವುದೇ ಪ್ರತಿಕೂಲ ಪರಿಣಾಮಗಳನ್ನು ಬೀರುವುದಿಲ್ಲ ಎಂದು ಹೇಳಲಾಗುತ್ತದೆ.

ಲಕ್ಷ್ಮೀ ಪೂಜೆ ಹೇಗೆ?: ಸಾಮಾನ್ಯವಾಗಿ ವ್ಯಾಪಾರಿಗಳು, ಉದ್ಯಮಿಗಳು, ಕಂಪನಿಗಳು ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಆಚರಿಸುವುದು ವಾಡಿಕೆ. ಆದರೆ ಈ ಸಾರಿ ಲಕ್ಷ್ಮೀಪೂಜೆಗೆ ಗ್ರಹಣ ಕಾಡಿದೆ. ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು, ಅಕ್ಕಪಕ್ಕದ ಅಂಗಡಿ, ಕಂಪನಿಯವರು, ಗ್ರಾಹಕರನ್ನು ಕರೆಸಿ ಈ ಬಾರಿ ಸಂಜೆ ಹೊತ್ತಲ್ಲೇ ಪೂಜೆ ನೆರವೇರಿಸುವುದು ಸೂಕ್ತವೇ ಎಂಬ ಅನುಮಾನ ಹಲವರಿಗೆ ಮೂಡಿದೆ.

ಜ್ಯೋತಿಷ್ಯದ ಪ್ರಕಾರ, ಅಕ್ಟೋಬರ್ 24 ರಂದು ನರಕ ಚತುರ್ದಶಿ ಇದ್ದು, ಇಂದೇ ಲಕ್ಷ್ಮೀ ಪೂಜೆ ಸಹ ನೆರವೇರಿಸುವುದು ಸೂಕ್ತ. ಅಂದು ಅಚರಿಸುವುದು ಶುಭ, ಮಂಗಳವಾರ ಗ್ರಹಣ ಇರುವುದರಿಂದ ಲಕ್ಷ್ಮಿ ಪೂಜೆ, ವ್ರತ ಯಾವುದನ್ನು ಮಾಡಬಾರದು ಎನ್ನಲಾಗುತ್ತದೆ. ಅದರೆ ಈ ದಿನ ಅಶುಭ ಎಂದು ಅರ್ಥ ಅಲ್ಲ. ಆದರೆ, ಜನರ ನಂಬಿಕೆಗೆ ಧಕ್ಕೆ ಆಗಬಾರದು ಎಂಬ ಉದ್ದೇಶ. ಸಂಜೆಯ ವೇಳೆ ನಡೆಸುವ ಲಕ್ಷ್ಮೀ ಪೂಜೆಯನ್ನು ಮೊದಲ ದಿನ ಇಲ್ಲವೇ ಮಾರನೇ ದಿನ ಆಚರಿಸಿದರೆ ಉತ್ತಮ. ಸಂಜೆ ಗ್ರಹಣ ಇರುವುದರಿಂದ ಪೂಜೆ ಅಥವಾ ವ್ರತದ ಪ್ರಯೋಜನ ಸಿಗುವುದಿಲ್ಲ ಎನ್ನಲಾಗುತ್ತದೆ.

ಹೀಗೂ ಮಾಡಬಹುದು: ಗ್ರಹಣ ಎನ್ನುವುದು ಭೌಗೋಳಿಕ ಕ್ರಿಯೆಯಾಗಿದ್ದು, ದೀಪಾವಳಿ ಲಕ್ಷ್ಮೀ ಪೂಜೆಯನ್ನು ಅಮಾವಾಸ್ಯೆಯ ದಿನವೇ ಮಾಡುವುದರಿಂದ ಗ್ರಹಣದ ದಿನ ಸಂಜೆಯ ನಂತರ ಶುದ್ಧವಾಗಿ ಪೂಜೆ ಮಾಡಬಹುದು ಎಂದು ಕೆಲವು ವೈದಿಕರು ಹೇಳುತ್ತಾರೆ. ಸೂರ್ಯ ಗ್ರಹಣದ ದಿನ ಪ್ರದೋಷದ ಸಮಯದಲ್ಲಿ, ಸೂರ್ಯಾಸ್ತದ ನಂತರ ಲಕ್ಷ್ಮೀ ಪೂಜೆಯನ್ನು ಮಾಡಲು ಉತ್ತಮ ಸಮಯ. ಸೂರ್ಯ ದೇವರು ಸ್ಥಳದಲ್ಲಿಲ್ಲದ ಕಾರಣ, ಗ್ರಹಣ ಸಮಯದಲ್ಲಿ ಲಕ್ಷ್ಮೀ ಪೂಜೆಯನ್ನು ಮಾಡುವುದು ಸಹ ಕಾರ್ಯ ಸಾಧ್ಯವಲ್ಲ, ಅದ್ದರಿಂದ ಸಂಜೆಯ ನಂತರ, ಸೂರ್ಯಗ್ರಹಣ ಮುಗಿದ ಮೇಲೆ ಶುದ್ದೀಕರಿಸಿಕೊಂಡು ಪೂಜೆ ಮಾಡಬಹುದು ಎಂಬ ಮಾತುಗಳು ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.