ETV Bharat / state

ಅಮಾಯಕರನ್ನು ಬೆದರಿಸಿ ನಗನಾಣ್ಯ ದೋಚುತ್ತಿದ್ದ ವ್ಯಕ್ತಿ ಸೆರೆ

ಟ್ರಾಕ್ಟರ್ ಇಂಜಿನ್ ರಿಪೇರಿ ಮಾಡಿಸಲು ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯಿಂದ ಹಣ ದೋಚಿದ್ದ ಕಳ್ಳನನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಕುಖ್ಯಾತ ಸರಗಳ್ಳನ ಬಂಧಿಸುವಲ್ಲಿ ವಿಲ್ಸನ್ ಗಾರ್ಡನ್ ಪೊಲೀಸರು ಯಶಸ್ವಿ
author img

By

Published : Oct 23, 2019, 9:52 AM IST

ಬೆಂಗಳೂರು: ಸರಗಳ್ಳತನ ಸೇರಿದಂತೆ ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ವ್ಯಕ್ತಿಯನ್ನು ವಿಲ್ಸನ್ ಗಾರ್ಡನ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮೊಹಮ್ಮದ್ ಅಬ್ಬಾಸ್ ಬಂಧಿತ ಆರೋಪಿ.

ಈತ ಟ್ರಾಕ್ಟರ್ ಇಂಜಿನ್ ರಿಪೇರಿ ಮಾಡಿಸಲು ಬೆಂಗಳೂರಿಗೆ ಬಂದಿದ್ದ ನಾರಾಯಣ ಸ್ವಾಮಿ ಎಂಬುವವರನ್ನು ಅಡ್ಡಗಟ್ಟಿ ಗಾಂಜಾ ಮಾರಾಟ ಮಾಡುತ್ತಿದ್ದೀರಾ ಎಂದು ಬೆದರಿಸಿ ಹಲ್ಲೆ ಮಾಡಿದ್ದಾನೆ. ಬಳಿಕ ಅವರಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದ. ಘಟನೆ ಹಿನ್ನಲೆಯಲ್ಲಿ ನಾರಾಯಣಸ್ವಾಮಿ ವಿಲ್ಸನ್​ ಗಾರ್ಡನ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆರೋಪಿಯನ್ನು ಅರೆಸ್ಟ್ ಮಾಡಿರುವ ಪೊಲೀಸರು 3 ಲಕ್ಷ ರೂ ಬೆಲೆಬಾಳುವ 2 ದ್ವಿಚಕ್ರ ವಾಹನ, 76 ಗ್ರಾಂ ಚಿನ್ನಾಭಾರಣ ವಶಪಡಿಸಿಕೊಂಡಿದ್ದಾರೆ.

ಈತನ ವಿರುದ್ಧ ಕಲಾಸಿಪಾಳ್ಯ, ಚಾಮರಾಜ ಪೇಟೆ, ಕೆಂಗೇರಿ, ವಿಜಯನಗರ , ಜೆ.ಸಿ ನಗರ, ಭಾರತಿನಗರ, ಹೆಚ್ಎಎಲ್ ಹೀಗೆ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 11 ಪ್ರಕರಣಗಳು ದಾಖಲಾಗಿವೆ. ಅಪರಾಧ ಕೃತ್ಯಗಳಲ್ಲಿ ಆರೋಪಿಗೆ ಸಾಥ್ ನೀಡುತ್ತಿದ್ದ ಇತರರಿಗಾಗಿ ಶೋಧ ಮುಂದುವರೆದಿದೆ.

Intro:ಕುಖ್ಯಾತ ರಾಬರಿ ಹಾಗೂ ಸರಗಳ್ಳತನ ಮಾಡುತ್ತಿದ ಆರೋಪಿ ಅಂದರ್
ಆರೋಪಿಯಿಂದ ಹಲವಾರು ಪ್ರಕರಣ ಪತ್ತೆ wrap ಮೂಲಕ ಕಳುಹಿಸಲಾಗಿದೆ

ಕುಖ್ಯಾತ ರಾಬರಿ ಹಾಗೂ ಸರಗಳ್ಳತನ ಮಾಡುತ್ತಿದ ಆರೋಪಿಯ ಬಂಧನ ಮಾಡುವಲ್ಲಿ ವಿಲ್ಸನ್ ಗಾರ್ಡನ್ ಪೊಲೀಸರು ಯಶಸ್ವಿಯಾಗಿ ದ್ದಾರೆ.ಮೊಹಮ್ಮದ್ ಅಬ್ಬಾಸ್ ಬಂಧಿತ ಆರೋಪಿ.

ನಾರಾಯಣಸ್ವಾಮಿ ಎಂಬುವವರು ಚಿಕ್ಕಬಳ್ಳಾಪುರ ದಿಂದ. ಅವರ ಟ್ರಾಕ್ಟರ್ ಇಂಜಿನ್ ರಿಪೇರಿ ಮಾಡಿಸಲು ಬೆಂಗಳೂರಿಗೆ ಬಂದಾಗ ಬಡಾಮಲಾನ್ ಮಸೀದಿಯ ಪಕ್ಕದಲ್ಲಿರುವ.ಮರದ ಬಳಿ ಬರುತ್ತಿರುವಾಗ್ಲೆ ಮೈದಾನದ ಕಡೆಯಿಂದ ಬಿಳಿ‌ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಅಪರಿಚಿತ ಅಸಾಮಿಗಳು ಅಡ್ಡಗಟ್ಟಿ ಗಾಂಜಾ ಮಾರಾಟ ಮಾಡಲು ಬರುತ್ತಿದ್ದಿರ ಎಂದು ಹೆದರಿಸಿ ಗಾಂಜಾ ಕೊಡಿ ಎಂದು ಹೇಳಿ ಹಲ್ಲೆ ಮಾಡಿ ನಂತ್ರ ರಾಬರಿ ಮಾಡಿದ್ದರು.

ಹೀಗಾಗಿ ಈ ಸಂಬಂಧ ನಾರಾಯಣಸ್ವಾಮಿ ವಿಲ್ಸಾನ್ ಗಾರ್ಡನ್ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಹೀಗಾಗಿ ಮೊಹಮ್ಮದ್ ಅಬ್ಬಾಸ್ ಎಂಬಾತನನ್ನ ಬಂಧಿಸಿ ವಿಚಾರಣೆಗೆ ಓಳಪಡಿಸಿದಾಗ ವಿಚಾರಣೆ ವೇಳೆ ಇದೇ ರೀತಿ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯವೆಸಗಿರುವ ವಿಚಾರ ಬೆಳಕಿಗೆ ಬಂದಿದೆ.

ಈತನ ವಿರುದ್ದ ಕಲಾಸಿಪಾಳ್ಯ, ಚಾಮರಾಜ ಪೇಟೆ, ಕೆಂಗೇರಿ, ವಿಜಯನಗರ , ಜೆ.ಸಿನಗರ, ಭಾರತಿನಗರ, ಹೆಚ್ ಎ ಎಲ್ ಪೊಲಿಸ್ ಠಾಣೆಗಳಲ್ಲಿ 11 ಪ್ರಕರಣ ಗಳು ಪತ್ತೆಯಾಗಿದ್ದು ಸುಮಾರು 3ಲಕ್ಷ ಬೆಲೆಬಾಳುವ 2ದ್ವಿಚಕ್ರ ವಾಹನ 76ಗ್ರಾಂ ತೂಕದ 4ಚಿನ್ನಾಭಾರಣ ವಶಪಡಿಸಿ ತನಿಖೆ ಮುಂದುವರೆಸಿ ಈತನ ಜೊತೆ ಭಾಗಿಯಾದ ಮತ್ತೋರ್ವ ಆರೋಪಿಗೆ ಶೋಧ ಮುಂದುವರೆಸಿದ್ದಾರೆBody:kN_BNG_07_THEFT_7204498Conclusion:kN_BNG_07_THEFT_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.