ETV Bharat / state

ಸಿದ್ಧಾಂತಗಳನ್ನು ಗಾಳಿಗೆ ತೂರಿದ ಅನರ್ಹ, ಅಯೋಗ್ಯರನ್ನು ಸೋಲಿಸಿ: ಉಮಾಶ್ರೀ  ಕರೆ - k.r.puram by election in bangalore

ಕೋಮುವಾದಿ ಬಿಜೆಪಿ ಸೇರುವ ಮೂಲಕ ಮತದಾರರಿಗೆ ವಂಚಿಸಿ ಬಿಜೆಪಿ ಸೇರಿರುವ ಅಭ್ಯರ್ಥಿ ಬೈರತಿ ಬಸವರಾಜ ಅವರನ್ನು ಉಪಚುನಾವಣೆಯಲ್ಲಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಶಾಸಕಿ ಉಮಾಶ್ರೀ ಕುಟುಕಿದ್ದಾರೆ.

ಶಾಸಕಿ ಉಮಾಶ್ರೀ
author img

By

Published : Nov 22, 2019, 9:34 PM IST

Updated : Nov 22, 2019, 10:50 PM IST

ಬೆಂಗಳೂರು: ಕೋಮುವಾದಿ ಬಿಜೆಪಿ, ಆರ್​ಎಸ್​ಎಸ್​ ಧೋರಣೆ ಖಂಡಿಸಿದವರು, ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ. ಸಿದ್ಧಾಂತಗಳನ್ನು ಗಾಳಿಗೆ ತೂರಿದ ಅನರ್ಹರು, ಅಯೋಗ್ಯರನ್ನು ಸೋಲಿಸಲು ಇಲ್ಲಿನ ಮತದಾರರು ಮತ್ತೊಮ್ಮೆ ತೀರ್ಮಾನ ಮಾಡಬೇಕು ಎಂದು ಅನರ್ಹ ಶಾಸಕ ಬೈರತಿ ಬಸವರಾಜ ವಿರುದ್ಧ ಮಾಜಿ ಸಚಿವೆ ಉಮಾಶ್ರೀ ಹರಿಹಾಯ್ದಿದ್ದಾರೆ.

ಕೆ.ಆರ್.ಪುರಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಚಾರ

ಕೆ.ಆರ್.ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿ ಪರ ಮತಯಾಚಿಸಿ, ಮಾತನಾಡಿದ ಅವರು, ಜಾತ್ಯತೀತ ನಿಲುವು ಹೊಂದಿದ್ದ ಬಸವರಾಜ್ ಏಕಾಏಕಿ ಬಿಜೆಪಿಗೆ ಸೇರಿರುವುದು ಯಾಕೆ. ಸಿದ್ಧಾಂತಗಳ‌ ಮೇಲೆ ನಂಬಿಕೆ ಇಲ್ಲದವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಮತದಾರರ ನಂಬಿಕೆ ಹುಸಿಗೊಳಿಸಿ, ಜನರಿಗೆ ಅಗೌರವ ತೋರಿಸುವ ಕೆಲಸವನ್ನು ಬಸವರಾಜ್ ಮಾಡಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ಅನುದಾನ ಗಿಟ್ಟಿಸಿಕೊಂಡು‌ ಕ್ಷೇತ್ರದಲ್ಲಿ ಕೆಲಸ ಮಾಡಿಸುವವನೇ ನಿಜವಾದ ಶಾಸಕ. ‌‌‌ಇಂತಹ ಅಭಿವೃದ್ಧಿ ಕೆಲಸ ಮಾಡಿಸುವ ತಾಕತ್ತು ಬಸವರಾಜ್​ಗೆ ಇಲ್ಲ ಎಂದು ಕಿಡಿಕಾರಿದ್ದಾರೆ.

Intro:Body:ಮತದಾರರ ಸಿದ್ದಾಂತಕ್ಕೆ ಅಗೌರವ ತೋರಿದವರನ್ನು ತಿರಸ್ಕರಿಸಿ: ಉಮಾಶ್ರೀ

ಬೆಂಗಳೂರು: ಇಷ್ಟು ವರ್ಷಗಳ ಕಾಲ ಜಾತ್ಯಾತೀತ ಧೋರಣೆ ಹೊಂದಿದ್ದ ಬೈರತಿ ಬಸವರಾಜ್ ಅವರು ಏಕಾಏಕಿ ಕೋಮವಾದ ಪಕ್ಷವಾದ ಬಿಜೆಪಿಗೆ ಸೇರಿ ತಮ್ಮ ಬೆಳೆ ಬೇಯಿಸಿಕೊಳ್ಳಲು ಪಕ್ಷಾಂತರ ಮಾಡಿದ್ದಾರೆ. ಇಂತಹವರಿಗೆ ಮತದಾರರು ಸೂಕ್ತ ಪಾಠ ಕಲಿಸಬೇಕು ಎಂದು ಶಾಸಕಿ ಉಮಾಶ್ರೀ ಒತ್ತಾಯಿಸಿದ್ದಾರೆ‌.
ಕೆ.ಆರ್.ಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾಯಣಸ್ವಾಮಿಗೆ ಮತ ಹಾಕುವಂತೆ ಮತದಾರರಲ್ಲಿ ತೆರೆದ ವಾಹನದ ಮೂಲಕ ಪ್ರಚಾರ ನಡೆಸಿದರು. ಸಾರ್ವಜನಿಕರನ್ನು ಉದ್ದೇಶಿಸಿ‌ ಮಾತನಾಡಿದ ಅವರು. ಜಾತ್ಯತೀತ ನಿಲುವು ಹೊಂದಿದ್ದ ಬಸವರಾಜ್ ಏಕಾಏಕಿ ಬಿಜೆಪಿಗೆ ಸೇರಿರುವುದು ಯಾಕೆ.. ಸಿದ್ದಾಂತಗಳ‌ ಮೇಲೆ ನಂಬಿಕೆ ಇಲ್ಲದವರನ್ನು ಚುನಾವಣೆಯಲ್ಲಿ‌ ಜನರು ತಕ್ಕ ಶಾಸ್ತ್ರೀ ಮಾಡಬೇಕು ಎಂದರು..
ಅನರ್ಹ ಶಾಸಕರ ರಾಜೀನಾಮೆ‌ ಪ್ರಹಸನವನ್ನು ದೇಶದ ಜನರೇ ಗಮನಿಸಿದ್ದಾರೆ.. ಸುಪ್ರೀಂಕೋರ್ಟ್ ಸ್ಪೀಕರ್ ಅವರ ಆದೇಶವನ್ನು ಎತ್ತಿ ಹಿಡಿದಿದೆ. ರಾಜಕೀಯ ಸಿದ್ದಾಂತಗಳ ಆಧಾರದ ಮೇಲೆ ಚುನಾವಣೆಯಲ್ಲಿ ಪಕ್ಷಕ್ಕೆ ಮತ ಹಾಕ್ತಾರೆ..‌ ಇಂತಹ‌ ಮತದಾರರ ನಂಬಿಕೆ ಹುಸಿಗೊಳಿಸಿ ಜನರಿಗೆ ಅಗೌರವ ತೋರಿಸುವ ಕೆಲಸವನ್ನು ಬಸವರಾಜ್ ಮಾಡಿದ್ದಾರೆ. ಸಿದ್ದಾಂತ ಧೋರಣೆಯಿಲ್ಲದ ತಮ್ಮ ಬೆಳೆ ಬೇಯಿಸಿಕೊಳ್ಳಲು ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಕಿಡಿಕಾರಿದರು.
ಸಮ್ಮಿಶ್ರ ಸರ್ಕಾರದಲ್ಲಿ ವೈಯಕ್ತಿಕವಾಗಿ ಏನು ಲಾಭಗಳಿಸಲು ಸಾಧ್ಯವಿಲ್ಲ. ಮೈತ್ರಿ ಸರ್ಕಾರದಲ್ಲಿ 116 ಶಾಸಕರ ಪೈಕಿ 100 ಶಾಸಕರಿಗೆ ಇಲ್ಲದ ಅಭಿವೃದ್ಧಿ ಚಿಂತೆ 16 ಶಾಸಕರಿಗೆ ಅಭಿವೃದ್ದಿ ಚಿಂತೆ ಆಯ್ತಾ ಎಂದು ಪ್ರಶ್ನಿಸಿದ ಉಮಾಶ್ರೀ ವಿರೋಧ ಪಕ್ಷದಲ್ಲಿದ್ದರೂ ಅನುದಾನ ಗಿಟ್ಟಿಸಿಕೊಂಡು‌ ಕ್ಷೇತ್ರದಲ್ಲಿ ಕೆಲಸ ಮಾಡಿಸುವವನೇ ನಿಜವಾದ ಶಾಸಕ...‌‌‌ಇಂತಹ ಅಭಿವೃದ್ಧಿ ಕೆಲಸ ಮಾಡಿಸುವ ತಾಕತ್ ಬಸವರಾಜ್ ಗೆ ಇಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು.

Conclusion:
Last Updated : Nov 22, 2019, 10:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.