ETV Bharat / state

ಇಂದಿರಾ ಕ್ಯಾಂಟೀನ್ ಊಟಕ್ಕೆ ಪೌರಕಾರ್ಮಿಕರ ನಕಾರ: ಭತ್ಯೆಗೆ ಬೇಡಿಕೆ - undefined

ಬಿಬಿಎಂಪಿಯ ಪೌರಕಾರ್ಮಿಕರ ಬಿಸಿಯೂಟದ ಯೋಜನೆಯ ಊಟ ಸರಿಯಿಲ್ಲ ಎಂದು ಪೌರಕಾರ್ಮಿಕರು ದೂರಿದ್ದು,ಊಟದ ಭತ್ಯೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.

ಇಂದಿರಾ ಕ್ಯಾಂಟೀನ್ ಊಟಕ್ಕೆ ಪೌರಕಾರ್ಮಿಕರ ಅಪಸ್ವರ,ಊಟದ ಭತ್ಯೆಗೆ ಬೇಡಿಕೆ
author img

By

Published : Jun 14, 2019, 12:36 AM IST

ಬೆಂಗಳೂರು: ಮೂರು ವರ್ಷಗಳ ಹಿಂದೆ ಜಾರಿಯಾದ ಬಿಬಿಎಂಪಿಯ ಪೌರಕಾರ್ಮಿಕರ ಬಿಸಿಯೂಟದ ಯೋಜನೆ ಹಳ್ಳಹಿಡಿಯುವ ಮುನ್ಸೂಚನೆ ಸಿಕ್ಕಿದೆ. ನಗರದ ಬಹುತೇಕ ವಾರ್ಡ್​ಗಳಲ್ಲಿ ಪೌರಕಾರ್ಮಿಕರಿಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಸರಿ ಇಲ್ಲ. ಈ ಊಟ ತಿಂದರೆ ಹೊಟ್ಟೆನೋವು, ವಾಂತಿ-ಬೇಧಿ ಆರೋಗ್ಯ ಸಮಸ್ಯೆಗಳು ಎದುರಾಗ್ತಿವೆ. ನಮಗೆ ಊಟ ಬೇಡವೇ ಬೇಡ ಎಂದು ತಿರಸ್ಕರಿಸಿದ್ದಾರೆ.

ಊಟ ಬೇಡ, ಊಟಕ್ಕೆ ಪಾಲಿಕೆ ಖರ್ಚು ಮಾಡುತ್ತಿರುವ ದುಡ್ಡನ್ನೆ ನಮ್ಮ ಅಕೌಂಟ್​ಗೆ ಹಾಕಿ ಎಂದು ಪೌರಕಾರ್ಮಿಕರ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಹೀಗಾಗಿ ಬಿಬಿಎಂಪಿ ಪ್ರತಿ ಪೌರಕಾರ್ಮಿಕನ ಅಕೌಂಟ್​ಗೆ ತಿಂಗಳಿಗೆ 600 ರೂ. ಹಾಕುವ ಕುರಿತ ಚರ್ಚೆ ನಡೆಸಿದೆ ಎಂಬ ಅಧಿಕೃತ ಮಾಹಿತಿ ಈಟಿವಿ ಭಾರತ್‌ಗೆ​ ಸಿಕ್ಕಿದೆ. ಪ್ರತಿ ದಿನ ಒಂದು ಹೊತ್ತು ಬಿಸಿಯೂಟಕ್ಕೆ ಬಿಬಿಎಂಪಿ, 26 ಸಾವಿರ ಪೌರಕಾರ್ಮಿಕರಿಗೆ ತಲಾ 20 ರುಪಾಯಿಯಂತೆ ಒಂದು ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ. ಆದರೆ ಅನೇಕ ವಾರ್ಡ್​ಗಳಲ್ಲಿ ಪೌರಕಾರ್ಮಿಕರು ಊಟ ಮಾಡುವುದನ್ನೆ ಬಿಟ್ಟಿದ್ದಾರೆ. ಚೆಫ್​ಟಾಕ್ 110 ವಾರ್ಡ್​ಗಳಿಗೆ ಹಾಗೂ ರಿವಾರ್ಡ್ಸ್ ಸಂಸ್ಥೆಗಳು 88 ವಾರ್ಡ್​ಗಳ ಪೌರಕಾರ್ಮಿಕರಿಗೆ ಊಟ ನೀಡುತ್ತಿದೆ. ಆದ್ರೆ ಇಂದಿರಾ ಕ್ಯಾಂಟೀನ್​ನಲ್ಲಿ ನೀಡುವಷ್ಟೇ ಗುಣಮಟ್ಟದ ಆಹಾರವನ್ನು ನೀಡುತ್ತೇವೆ. ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ದುಡ್ಡು ಪಡೆದುಕೊಳ್ಳುವ ಉದ್ದೇಶದಿಂದ ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡುತ್ತಾರೆ ಎಂದು ರಿವಾರ್ಡ್ಸ್ ಸಂಸ್ಥೆಯ ಗುತ್ತಿಗೆದಾರ ಬಲ್​ದೇವ್ ಸಿಂಗ್ ತಿಳಿಸಿದರು. ಆದರೆ, 20 ರೂಗೆ 350 ಗ್ರಾಂ ಗೂ ಹೆಚ್ಚು ಅನ್ನ ಹಾಗೂ ಸಾಂಬಾರ್​ನ್ನ 800ಕ್ಕೂ ಹೆಚ್ಚು ಸ್ಥಳಗಳಿಗೆ ರವಾನಿಸಿ ಊಟ ನೀಡುತ್ತಿರುವುದು ನಮಗೂ ಲಾಭದಾಯಕವಲ್ಲ ಎಂದು ಗುತ್ತಿಗೆದಾರರು ಅಭಿಪ್ರಾಯಪಟ್ಟಿದ್ದಾರೆ.

ಊಟದ ಭತ್ಯೆ ನೀಡುವಂತೆ ಪೌರಕಾರ್ಮಿಕರ ಬೇಡಿಕೆ

ಆದರೆ ಪೌರಕಾರ್ಮಿಕರು ಈಟಿವಿ ಭಾರತ್ ಜೊತೆ ಮಾತನಾಡಿ, ಮೊದಲು ಇಸ್ಕಾನ್ ಊಟ ಕೊಡುತ್ತಿದ್ರು. ಅದು ಚೆನ್ನಾಗಿಲ್ಲ ಎಂದು ಇಂದಿರಾ ಕ್ಯಾಂಟೀನ್ ಊಟ ನೀಡಲು ಶುರುಮಾಡಿದ್ರು. ಆದ್ರೆ ಈ ಊಟದಲ್ಲಿ ಎಷ್ಟೋ ಸಾರಿ ಜಿರಳೆ ಸಿಕ್ಕಿದೆ. ಅನ್ನ ಸರಿಯಾಗಿ ಬೆಂದಿರೋದಿಲ್ಲ. ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳು ಆಗ್ತಿವೆ. ಹಾಗಾಗಿ ಮನೆಯಿಂದನೇ ಊಟ ತರುತ್ತಿದ್ದೇವೆ. ಇಲ್ಲದಿದ್ರೆ ಹೊಟೇಲ್​ನಲ್ಲೇ ದುಡ್ಡು ಕೊಟ್ಟು ತಿನ್ನುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಇನ್ನು ಊಟ ಬಂದರೂ,ಯಾರೂ ತಿನ್ನದೆ ಹಾಗೇ ಉಳಿಯುವ ಕಾರಣ ಹಲವು ವಾರ್ಡ್​ಗಳಿಗೆ ಊಟ ಸಪ್ಲೈ ಮಾಡೋದನ್ನ ನಿಲ್ಲಿಸಿ ಎರಡು ತಿಂಗಳಾಗಿವೆ. 2017ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಿನ ಯೋಜನೆಯಂತೆ, ನಗರವನ್ನು ಸ್ವಚ್ಚವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಬಿಬಿಎಂಪಿ ಆರಂಭಿಸಿದ ಬಿಸಿಯೂಟದ ಯೋಜನೆ ನಿಧಾನಕ್ಕೆ ಮರೆಗೆ ಸರಿಯುತ್ತಿದೆ. ಪೌರಕಾರ್ಮಿಕರ ಸಂಘಟನೆಗಳು ನಮಗೆ ಗುಣಮಟ್ಟದ ಊಟ ನೀಡಿ, ಇಲ್ಲವೇ ಊಟದ ಹಣ ನೀಡಿ ಎಂದು ಪಟ್ಟು ಹಿಡಿದಿವೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಊಟವನ್ನೇ ತಿರಸ್ಕರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪಾಲಿಕೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್​​ಗೆ ಪ್ರತಿಕ್ರಿಯೆ ನೀಡಿದ ವಿಶೇಷ ಆಯುಕ್ತ ರಂದೀಪ್, ಸರಿಯಾದ ಟೇಸ್ಟ್ ಇಲ್ಲ, ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ಆರೋಪ ಇದೆ. ಹೀಗಾಗಿ ಇರುವಂತಹ ಊಟವನ್ನು ಗುಣಮಟ್ಟದಲ್ಲಿ ಕೊಡಲು ಮನವಿ ಮಾಡಿದ್ದಾರೆ. ನೇರವಾಗಿ ಅಕೌಂಟ್​ಗೆ ದುಡ್ಡು ಹಾಕುವುದು ಅಥವಾ ಟೋಕನ್ ಸಿಸ್ಟಂ ಮಾಡಿದ್ರೆ ತಮ್ಮ ಹತ್ತಿರದ ವಾರ್ಡ್ ಹೊಟೇಲ್​ಗಳಲ್ಲಿ ಊಟ ತಿನ್ನಲು ಅವಕಾಶ ಮಾಡಿಕೊಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಬಗ್ಗೆ ಕೌನ್ಸಿಲ್ ನಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದರು.ಮೇಯರ್ ಗಂಗಾಂಬಿಕೆ ಪ್ರತಿಕ್ರಿಯಿಸಿ, ಈ ಬಗ್ಗೆ ಸುದೀರ್ಘ ಚರ್ಚೆ ನಡೆಯುವ ಅಗತ್ಯ ಇದೆ. ಊಟದ ಹಣ ನೀಡುವುದೋ ಅಥವಾ ಬೇರೆ ಊಟ ನೀಡುವುದೋ ಎಂದು ಚರ್ಚಿಸುತ್ತೇವೆ ಎಂದರು.

Intro:ಇಂದಿರಾ ಕ್ಯಾಂಟೀನ್ ಊಟಕ್ಕೆ ಪೌರಕಾರ್ಮಿಕರ ಅಪಸ್ವರ- ಊಟದ ಭತ್ತೆಗೆ ಬೇಡಿಕೆ

ಬೆಂಗಳೂರು- ಮೂರು ವರ್ಷಗಳ ಹಿಂದೆ ಜಾರಿಯಾದ ಬಿಬಿಎಂಪಿಯ ಪೌರಕಾರ್ಮಿಕರ ಬಿಸಿಯೂಟದ ಯೋಜನೆ ಹಳ್ಳಹಿಡಿಯುವ ಮುನ್ಸೂಚನೆ ಸಿಕ್ಕಿದೆ. ನಗರದ ಬಹುತೇಕ ವಾರ್ಡ್ ಗಳಲ್ಲಿ ಪೌರಕಾರ್ಮಿಕರಿಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟ ಸರಿ ಇಲ್ಲ. ಈ ಊಟ ತಿಂದರೆ ಹೊಟ್ಟೆನೋವು, ವಾಂತಿ-ಬೇಧಿ ಆರೋಗ್ಯ ಸಮಸ್ಯೆಗಳು ಎದುರಾಗ್ತಿವೆ. ನಮಗೆ ಊಟ ಬೇಡವೇ ಬೇಡ ಎಂದು ತಿರಸ್ಕರಿಸಿದ್ದಾರೆ.. ಊಟ ಬೇಡ, ಊಟಕ್ಕೆ ಪಾಲಿಕೆ ಖರ್ಚು ಮಾಡುತ್ತಿರುವ ದುಡ್ಡನ್ನೇ ನಮ್ಮ ಅಕೌಂಟ್ ಗೆ ಹಾಕಿ ಎಂದು ಪೌರಕಾರ್ಮಿಕರ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಹೀಗಾಗಿ ಬಿಬಿಎಂಪಿಯೂ ಪ್ರತೀ ಪೌರಕಾರ್ಮಿಕನ ಅಕೌಂಟ್ ಗೆ ತಿಂಗಳಿಗೆ ಆರುನೂರು ರುಪಾಯಿ ಹಾಕುವ ಕುರಿತು ಬಿಬಿಎಂಪಿ ಚರ್ಚೆ ನಡೆಸಿದೆ ಎಂಬ ಅಧಿಕೃತ ಮಾಹಿತಿ ಈಟಿವಿ ಭಾರತ್ ಗೆ ಸಿಕ್ಕಿದೆ.

ಪ್ರತೀ ದಿನ ಒಂದು ಹೊತ್ತು ಬಿಸಿಯೂಟಕ್ಕೆ ಬಿಬಿಎಂಪಿ,
26 ಸಾವಿರ ಪೌರಕಾರ್ಮಿಕರಿಗೆ ತಲಾ ಇಪ್ಪತ್ತು ರುಪಾಯಿಯಂತೆ, ಒಂದು ಕೋಟಿ ರುಪಾಯಿಗೂ ಹೆಚ್ಚು ಖರ್ಚು ಮಾಡುತ್ತಿದೆ. ಆದರೆ ಅನೇಕ ವಾರ್ಡ್ ಗಳಲ್ಲಿ ಪೌರಕಾರ್ಮಿಕರು ಊಟ ಮಾಡುವುದನ್ನೇ ಬಿಟ್ಟಿದ್ದಾರೆ. ಚೆಫ್ ಟಾಕ್ 110 ವಾರ್ಡ್ ಗಳಿಗೆ ಹಾಗೂ ರಿವಾರ್ಡ್ಸ್ ಸಂಸ್ಥೆಗಳು 88 ವಾರ್ಡ್ ಗಳ ಪೌರಕಾರ್ಮಿಕರಿಗೆ ಊಟ ನೀಡುತ್ತಿದೆ. ಆದ್ರೆ ಇಂದಿರಾ ಕ್ಯಾಂಟೀನ್ ನಲ್ಲಿ ನೀಡುವಷ್ಟೇ ಗುಣಮಟ್ಟದ ಆಹಾರವನ್ನು ನೀಡುತ್ತೇವೆ. ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ದುಡ್ಡು ಪಡೆದುಕೊಳ್ಳುವ ಉದ್ದೇಶದಿಂದ ಆಹಾರದ ಗುಣಮಟ್ಟದ ಬಗ್ಗೆ ದೂರು ನೀಡುತ್ತಾರೆ ಎಂದು ರಿವಾರ್ಡ್ಸ್ ಮಸ್ಥೆಯ ಗುತ್ತಿಗೆದಾರ ಬಲ್ ದೇವ್ ಸಿಂಗ್ ತಿಳಿಸಿದರು. ಆದರೆ ಇಪ್ಪತ್ತು ರುಪಾಯಿಗೆ 350 ಗ್ರಾಂ ಗೂ ಹೆಚ್ಚು ಅನ್ನ ಹಾಗೂ ಸಾಂಬಾರ್ ಅನ್ನು, ಎಂಟುನೂರಕ್ಕೂ ಹೆಚ್ಚು ಸ್ಥಳಗಳಿಗೆ ರವಾನಿಸಿ ಊಟ ನೀಡುತ್ತಿರುವುದು ನಮಗೂ ಲಾಭದಾಯಕವಲ್ಲ ಎಂದು ಗುತ್ತಿಗೆದಾರರು ಅಭಿಪ್ರಾಯಪಟ್ಟಿದ್ದಾರೆ.

ಆದ್ರೆ ಪೌರಕಾರ್ಮಿಕರು ಈಟಿವಿ ಭಾರತ್ ಜೊತೆ ಮಾತನಾಡಿ, ಮೊದಲು ಇಸ್ಕಾನ್ ಊಟ ಕೊಡುತ್ತಿದ್ರು. ಅದು ಚೆನ್ನಾಗಿಲ್ಲ ಎಂದು ಇಂದಿರಾ ಕ್ಯಾಂಟೀನ್ ಊಟ ನೀಡಲು ಶುರುಮಾಡಿದ್ರು. ಆದ್ರೆ ಈ ಊಟದಲ್ಲಿ ಎಷ್ಟೋ ಸಾರಿ ಜಿರಳೆ ಸಿಕ್ಕಿದೆ. ಅನ್ನ ಸರಿಯಾಗಿ ಬೆಂದಿರೋದಿಲ್ಲ. ಹೊಟ್ಟೆನೋವು, ಗ್ಯಾಸ್ಟ್ರಿಕ್ ಸಮಸ್ಯೆಗಳು ಆಗ್ತಿವೆ. ಹಾಗಾಗಿ ಮನೆಯಿಂದನೇ ಊಟ ತರುತ್ತಿದ್ದೇವೆ. ಇಲ್ಲದಿದ್ರೆ ಹೋಟೇಲ್ ನಲ್ಲೇ ದುಡ್ಡು ಕೊಟ್ಟು ತಿನ್ನುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದರು. ಇನ್ನು ಊಟ ಬಂದರೂ, ಯಾರೂ ತಿನ್ನದೆ ಹಾಗೇ ಉಳಿಯುವ ಕಾರಣ ಹಲವು ವಾರ್ಡ್ ಗಳಿಗೆ ಊಟ ಸಪ್ಲೈ ಮಾಡೋದನ್ನು ನಿಲ್ಲಿಸಿ ಎರಡು ತಿಂಗಳಾಗಿವೆ..

2017 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕನಸಿನ ಯೋಜನೆಯಂತೆ, ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುವ ಪೌರಕಾರ್ಮಿಕರಿಗೆ ಬಿಬಿಎಂಪಿ ಆರಂಭಿಸಿದ ಬಿಸಿಯೂಟದ ಯೋಜನೆ ನಿಧಾನಕ್ಕೆ ಮರೆಗೆ ಸರಿಯುತ್ತಿದೆ.

ಪೌರಕಾರ್ಮಿಕರ ಸಂಘಟನೆಗಳು ನಮಗೆ ಗುಣಮಟ್ಟದ ಊಟ ನೀಡಿ, ಇಲ್ಲವೇ ಊಟದ ಹಣ ನೀಡಿ ಎಂದು ಪಟ್ಟು ಹಿಡಿದಿವೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಊಟವನ್ನೇ ತಿರಸ್ಕರಿಸಿದ್ದಾರೆ. ಈ ಬಗ್ಗೆ ಈಗಾಗಲೇ ಪಾಲಿಕೆ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಈಟಿವಿ ಭಾರತ್ ಗೆ ಪ್ರತಿಕ್ರಿಯೆ ನೀಡಿದ ವಿಶೇಷ ಆಯುಕ್ತ ರಂದೀಪ್, ಸರಿಯಾದ ಟೇಸ್ಟ್ ಇಲ್ಲ, ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಎಂಬ ಆರೋಪ ಇದೆ. ಹೀಗಾಗಿ
ಇರುವಂತಹ ಊಟವನ್ನು ಗುಣಮಟ್ಟದಲ್ಲಿ ಕೊಡಲು ಮನವಿ ಮಾಡಿದ್ದಾರೆ. ಅಥವಾ ನೇರವಾಗಿ ಅಕೌಂಟ್ ಗೆ ದುಡ್ಡು ಹಾಕುವುದು ಅಥವಾ ಟೋಕನ್ ಸಿಸ್ಟಂ ಮಾಡಿದ್ರೆ ತಮ್ಮ ಹತ್ತಿರದ ವಾರ್ಡ್ ಹೊಟೇಲ್ ಗಳಲ್ಲಿ ಊಟ ತಿನ್ನಲು ಅವಕಾಶ ಮಾಡಿಕೊಡಲು ಬಿಬಿಎಂಪಿ ಚಿಂತನೆ ನಡೆಸಿದೆ. ಈ ಬಗ್ಗೆ ಕೌನ್ಸಿಲ್ ನಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದೆ ಎಂದರು.

ಮೇಯರ್ ಗಂಗಾಂಬಿಕೆ ಪ್ರತಿಕ್ರಿಯಿಸಿ ಈ ಬಗ್ಗೆ ಚರ್ಚೆ ಸುದೀರ್ಘ ಚರ್ಚೆ ನಡೆಯುವ ಅಗತ್ಯ ಇದೆ. ಊಟದ ಹಣ ನೀಡುವುದೋ ಅಥವಾ ಬೇರೆ ಊಟ ನೀಡುವುದೋ ಎಂದು ಚರ್ಚಿಸುತ್ತೇವೆ ಎಂದರು.

ಒಟ್ಟಿನಲ್ಲಿ ಗುತ್ತಿಗೆದಾರರ ಬೇಜವಾಬ್ದಾರಿಯಿಂದಲೋ , ಅಥವಾ ಪಾಲಿಕೆಯ ಆಡಳಿತ ವೈಫಲ್ಯದಿಂದಲೋ ಪೌರಕಾರ್ಮಿಕರ ಬಿಸಿಯೂಟದಂತಹ ಉತ್ತಮ ಯೋಜನೆ ಪೌರಕಾರ್ಮಿಕರಿಂದಲೇ ತಿರಸ್ಕೃತವಾಗುತ್ತಿರೋದು ಮಾತ್ರ ವಿಪರ್ಯಾಸ.

ವಿಶೇಷ ವರದಿ
ಸುದ್ದಿಯನ್ನು ಸೋಮಶೇಖರ್ ಸರ್ ಪರಿಶೀಲಿಸಿದ್ದಾರೆ.

ಸೌಮ್ಯಶ್ರೀ
KN_BNG_01_13_pk_lunch_script_special_story_sowmya_7202707
Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.