ETV Bharat / state

ಅತ್ಯಾಧುನಿಕ ಕ್ಯಾಟ್ 3ಬಿ ವ್ಯವಸ್ಥೆ; ದಟ್ಟ ಮಂಜಿನ ನಡುವೆಯೂ ರನ್​ವೇಗಿಳಿದ ವಿಮಾನ - ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ 07:41ರಲ್ಲಿ ರೇಡಿಯೇಷನ್ ಫಾಗ್ ಆವರಿಸಿತ್ತು. ಮಂಜು ಕವಿದ ವಾತಾವರಣದಿಂದಾಗಿ ದೃಶ್ಯ ಸಾಧ್ಯತೆ 200 ಮೀಟರ್​​ಗಳಿಗೆ ಇಳಿದಿತ್ತು. ಇಂತಹ ಸಮಯದಲ್ಲಿ ಲಕ್ನೋದಿಂದ ಬಂದ ಇಂಡಿಗೋ ವಿಮಾನ ಯಶಸ್ವಿಯಾಗಿ ಭೂಸ್ಪರ್ಶ ಮಾಡಿತು.

Bangalore International Airport
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
author img

By

Published : Jan 21, 2021, 9:43 PM IST

ದೇವನಹಳ್ಳಿ (ಬೆಂಗಳೂರು): ದಟ್ಟ ಮಂಜು ಕವಿದ ವಾತಾವರಣದಲ್ಲಿ ಮಂದ ಬೆಳಕಿನ ಕಾರಣಕ್ಕೆ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಸಾಧ್ಯವಿಲ್ಲ. ಆದರೆ ಕ್ಯಾಟ್ lll-ಬಿ ವ್ಯವಸ್ಥೆಯಲ್ಲಿ ದಟ್ಟ ಮಂಜು ಕವಿದ ವಾತಾವರಣ ಇದ್ದಾಗಲೂ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್ ಮಾಡಬಹುದು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಹ ಕ್ಯಾಟ್ lll-ಬಿ ವ್ಯವಸ್ಥೆ ಅಳವಡಿಸಿಕೊಂಡಿದ್ದು, ಇಂದು ದಟ್ಟ ಮಂಜಿನ ನಡುವೆಯೂ ಇಂಡಿಗೋ ವಿಮಾನ ಯಶಸ್ವಿಯಾಗಿ ಭೂ ಸ್ಪರ್ಷ ಮಾಡಿತು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ 07:41ರಲ್ಲಿ ರೇಡಿಯೇಷನ್ ಫಾಗ್ ಆವರಿಸಿತ್ತು. ಮಂಜು ಕವಿದ ವಾತಾವರಣದಿಂದಾಗಿ ದೃಶ್ಯ ಸಾಧ್ಯತೆ 200 ಮೀಟರ್​​ಗಳಿಗೆ ಇಳಿದಿತ್ತು. ಇಂತಹ ಸಮಯದಲ್ಲಿ ಲಕ್ನೋದಿಂದ ಬಂದ ಇಂಡಿಗೋ ವಿಮಾನ ಯಶಸ್ವಿಯಾಗಿ ಭೂಸ್ಪರ್ಶ ಮಾಡಿತು.

ರನ್ ವೇ ವಿಸಿಬಲ್ ರೇಂಜ್ 50 ಮೀಟರ್​​​ಗಳಷ್ಟು ಕಡಿಮೆ ಇದ್ದಾಗಲೂ ದಕ್ಷಿಣ ರನ್‍ವೇಯಲ್ಲಿ ವಿಮಾನ ಇಳಿಯಲು ಅವಕಾಶ ಮಾಡಿಕೊಡುತ್ತದೆ. ಜೊತೆಗೆ ವಿಮಾನ 125 ಮೀಟರ್​ ಎತ್ತರದಲ್ಲಿ ಆಕಾಶಕ್ಕೆ ಹಾರಲು ಅವಕಾಶ ಮಾಡಿಕೊಡುತ್ತದೆ. ಕ್ಯಾಟ್ lll ಬಿ ವ್ಯವಸ್ಥೆಗೂ ಮುನ್ನ ವಿಮಾನ ಇಳಿಯಲು ರನ್ ವೇ ವಿಸಿಬಲ್ ರೇಂಜ್​​​ 550 ಮೀಟರ್ ಮತ್ತು ವಿಮಾನ ಟೇಕಾಫ್ ಆಗಲು 300 ಮೀಟರ್​​​​​​ಗಳಷ್ಟಾಗಿತ್ತು.

ಇದನ್ನೂ ಓದಿ: ಏರ್​ಪೋರ್ಟ್ ಹೆಲ್ತ್​ ಅಕ್ರೆಡಿಟೇಶನ್​ ಮಾನ್ಯತೆ ಪಡೆದ ಕೆಐಎಎಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.