ETV Bharat / state

ಭಾರತೀಯ ವಿಜ್ಞಾನ ಸಂಸ್ಥೆ ಮತ್ತಷ್ಟು ಉನ್ನತ ಸ್ಥಾನಕ್ಕೇರಲು ಪರಿಶ್ರಮ ಪಡಬೇಕಿದೆ: ಇನ್ಫೋಸಿಸ್​ ಸಹ ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್

ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವ ಕಾರ್ಯಕ್ರಮದಲ್ಲಿ 848 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಭಾರತೀಯ ವಿಜ್ಞಾನ ಸಂಸ್ಥೆ  ಘಟಿಕೋತ್ಸವ
ಭಾರತೀಯ ವಿಜ್ಞಾನ ಸಂಸ್ಥೆ ಘಟಿಕೋತ್ಸವ
author img

By

Published : Jul 31, 2023, 9:23 PM IST

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆ ದೇಶದಲ್ಲೇ ಮುಂಚೂಣಿ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ವಿಶ್ವ ಮಟ್ಟದಲ್ಲಿ ಮತ್ತಷ್ಟು ಉನ್ನತ ಸ್ಥಾನಕ್ಕೇರಲು ಇನ್ನಷ್ಟು ಪರಿಶ್ರಮ ಪಡಬೇಕಿದೆ ಎಂದು ಸೇನಾಪತಿ ಕ್ರಿಸ್ ಗೋಪಾಲಕೃಷ್ಣನ್ ಹೇಳಿದರು. ಸೋಮವಾರ ಭಾರತೀಯ ವಿಜ್ಞಾನ ಸಂಸ್ಥೆಯ ಘಟಿಕೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಓದಲು ಹೆಮ್ಮೆ ಪಡುತ್ತಾರೆ.

ಈ ಸಂಸ್ಥೆ ತನ್ನ ಉನ್ನತ ಗುಣಮಟ್ಟದ ವಿಜ್ಞಾನ ಮತ್ತು ಸಂಶೋಧನಾ ಪ್ರಕ್ರಿಯಲ್ಲಿ ಸುಮಾರು ನೂರು ವರ್ಷದಿಂದ ತೊಡಗಿದೆ. ಮುಂದಿನ ಉಜ್ವಲ ಭವಿಷ್ಯಕ್ಕೆ ಈ ಸಂಸ್ಥೆ ಸದಾ ಗಟ್ಟಿಯಾದ ಅಡಿಪಾಯವನ್ನು ಹಾಕಿಕೊಟ್ಟಿದೆ. ಹಲವು ಉತ್ಕೃಷ್ಟ ವಿಜ್ಞಾನಿಗಳನ್ನು ಹುಟ್ಟು ಹಾಕಿ ವಿದ್ಯಾರ್ಥಿಗಳಿಗೆ ಮತ್ತು ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡಿದೆ ಎಂದು ಬಣ್ಣಿಸಿದರು. ಇಲ್ಲಿನ ಪದವಿ, ಸ್ನಾತಕೋತ್ತರ ಮತ್ತು ಪಿ.ಎಚ್.ಡಿ ಪದವೀಧರರ ಮೇಲೆ ಕುಟುಂಬ, ಸ್ನೇಹಿತರು ಮತ್ತು ಇಡೀ ಸಮಾಜ ನಂಬಿಕೆಯನ್ನು ಇಟ್ಟಿದೆ. ಅದನ್ನು ವಿದ್ಯಾರ್ಥಿಗಳು ಉಳಿಸಿಕೊಂಡು ಇನ್ನಷ್ಟು ಉನ್ನತ ಸ್ಥಾನಕ್ಕೆ ಏರಿ ಭಾರತದ ಕೀರ್ತಿ ಪತಾಕೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಕರೆ ನೀಡಿದರು.

ಮುಂದಿನ 10 ವರ್ಷದ ಪೂರ್ವ ತಯಾರಿಯನ್ನು ಈಗ ವಿದ್ಯಾರ್ಥಿಗಳು ಮಾಡಿಕೊಳ್ಳಬೇಕಿದೆ. ಇದರಿಂದ ಭವಿಷ್ಯದಲ್ಲಿ ಎದುರಾಗುವ ಅಡ್ಡಿ ಆತಂಕಗಳನ್ನು ಎದುರಿಸುವ ಚಾಣಾಕ್ಷತನ ಬರುತ್ತದೆ. ವಿಶ್ವವನ್ನು ಮನುಷ್ಯ ಮತ್ತು ಜೀವ ಕುಲಕ್ಕೆ ಉತ್ತಮವಾದ ಜಾಗವನ್ನಾಗಿ ಮಾಡಲು ದಾರಿಗಳು ಕಾಣಸಿಗುತ್ತವೆ ಎಂದು ಕ್ರಿಸ್ ಗೋಪಾಲಕೃಷ್ಣನ್ ಕಿವಿಮಾತು ಹೇಳಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಆಕ್ಸಿಸ್ ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಚೌಧರಿ, ಭಾರತೀಯ ವಿಜ್ಞಾನ ಸಂಸ್ಥೆಗೆ 114 ವರ್ಷಗಳ ಸುಧೀರ್ಘ ಇತಿಹಾಸವಿದೆ. ಭಾರತದ ವೈಜ್ಞಾನಿಕ ಇತಿಹಾಸ ಮತ್ತು ಭವಿಷ್ಯ ಇಲ್ಲಿನ ಪ್ರತಿ ಕಲಿಕಾ ಕೊಠಡಿ, ಪ್ರಯೋಗಶಾಲೆಯಲ್ಲಿ ಕಾಣಸಿಗುತ್ತಿದೆ. ಇಲ್ಲಿ ಕಲಿತು ದೇಶದ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ವಿಶ್ವಕ್ಕೆ ಪರಿಚಯಿಸಿದ ಮಹನೀಯರು ಇದ್ದ ಜಾಗದಲ್ಲಿ ನಿಂತು ಮಾತನಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

ಇಲ್ಲಿ ವಿದ್ಯಾರ್ಥಿಗಳು ಕಲಿತ ಪಾಠಗಳು ಅವರ ಮುಂದಿನ ಜೀವನದಲ್ಲಿ ಗಟ್ಟಿಯಾದ ಅಡಿಪಾಯವಾಗಿದ್ದು, ಆತ್ಮವಿಶ್ವಾಸ ಮತ್ತು ನಂಬಿಕೆಯಿಂದ ಮುನ್ನಡೆಯಲು ಪ್ರೇರೇಪಣೆ ನೀಡಿದೆ. ಇದನ್ನು ಎಂದಿಗೂ ಮರೆಯದೆ ಇನ್ನಷ್ಟು ಉನ್ನತ ಮಟ್ಟಕ್ಕೆ ಏರಿ ಸಮಾಜಕ್ಕೆ ಮತ್ತು ದೇಶಕ್ಕೆ ಮಾದರಿಯಾಗುವಂತಾಗಲಿ ಎಂದು ಹಾರೈಸಿದರು.

848 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: ಘಟಿಕೋತ್ಸವದಲ್ಲಿ 360 ಪಿಎಚ್​ಡಿ, 369 ಸ್ನಾತಕೋತ್ತರ ಪದವಿ, 119 ಪದವಿ ಸೇರಿದಂತೆ 848 ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು. ಒಟ್ಟು 53 ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ಸಾಧನೆಗಾಗಿ ಚಿನ್ನದ ಪದಕ ನೀಡಲಾಯಿತು.

ಇದನ್ನೂ ಓದಿ: 2 ತಿಂಗಳ ಬಳಿಕ ಮೀನುಗಾರಿಕೆ ನಿರ್ಬಂಧ ತೆರವು: ಮತ್ಸ್ಯ ಶಿಕಾರಿಗೆ ಸಜ್ಜಾದ ಕಡಲ ಮಕ್ಕಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.