ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಜೂನ್ 19ರಂದು ಟಿ20 ಕ್ರಿಕೆಟ್ ಪಂದ್ಯ ನಡೆಯಲಿದ್ದು, ಅಂದು ಮೆಟ್ರೋ ರೈಲು ಸಂಚಾರವನ್ನು ಮಧ್ಯರಾತ್ರಿ 1.30ರ ತನಕ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಅಂತಿಮ ನಿಲ್ದಾಣಗಳಿಂದ ರಾತ್ರಿ 1 ಗಂಟೆಗೆ ಕೊನೆಯ ರೈಲುಗಳು ಹೊರಡಲಿವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ 1.30ಕ್ಕೆ ಕೊನೆಯ ರೈಲು ಸಂಚರಿಸಲಿದೆ. ಪಂದ್ಯ ನೋಡಲು ಬರುವಾಗ ಎಂದಿನಂತೆ ಸ್ಮಾರ್ಟ್ ಕಾರ್ಡ್ ಮತ್ತು ಟೋಕನ್ ಪಡೆದು ಪ್ರಯಾಣಿಸಬೇಕು. ಪಂದ್ಯ ಮುಗಿದ ಬಳಿಕ ನೂಕುನುಗ್ಗಲು ತಪ್ಪಿಸಲು ಮುಂಚಿತವಾಗಿಯೇ ಪೇಪರ್ ಟಿಕೆಟ್ ಲಭ್ಯವಿರಲಿದೆ.
ಮಧ್ಯಾಹ್ನ 3 ಗಂಟೆಯಿಂದಲೇ ಪೇಪರ್ ಟಿಕೆಟ್‌ಗಳು ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಸಿಗಲಿದೆ. 50 ರೂ. ದರದ ಪೇಪರ್ ಟಿಕೆಟ್ ಪಡೆದವರು ಕಬ್ಬನ್ ಪಾರ್ಕ್ ರೈಲು ನಿಲ್ದಾಣದಿಂದ ಯಾವುದೇ ನಿಲ್ದಾಣಕ್ಕೆ ರಾತ್ರಿ 10 ಗಂಟೆ ನಂತರ ಪ್ರಯಾಣಿಸಬಹುದು ಎಂದು ನಮ್ಮ ಮೆಟ್ರೋ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಕ್ರಿಕೆಟ್: 5ನೇ ಟೆಸ್ಟ್ ಆಡಲು ಇಂಗ್ಲೆಂಡ್ಗೆ ತೆರಳಿದ ಕೊಹ್ಲಿ ಅಂಡ್ ಟೀಂ