ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್ 19ರಂದು ನಡೆಯಲಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಅಂತಿಮ ಟಿ20 ಕ್ರಿಕೆಟ್ ಪಂದ್ಯ ವೀಕ್ಷಣೆಗೆ ತೆರಳುವ ಸಾರ್ವಜನಿಕರಿಗೆ ಬಿಎಂಟಿಸಿ ಮಧ್ಯರಾತ್ರಿವರೆಗೆ ಸಾರಿಗೆ ಸೌಲಭ್ಯ ಒದಗಿಸಲಿದೆ.
ಟಿ20 ಪಂದ್ಯ ವೀಕ್ಷಣೆಗೆ ತೆರಳುವವರಿಗೆ ಮಧ್ಯಾಹ್ನ 3 ಗಂಟೆಯಿಂದ ಪಂದ್ಯ ಮುಗಿಯುವ ಸಮಯದವರೆಗೂ ಬಿಎಂಟಿಸಿಯಿಂದ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಎಎಲ್ ರಸ್ತೆ, ಹೂಡಿ ರಸ್ತೆ, ಸರ್ಜಾಪುರ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ, ಬನ್ನೇರುಘಟ್ಟ ಮೃಗಾಲಯ, ಕೆಂಗೇರಿ ಕೆ.ಹೆಚ್.ಬಿ ಕ್ವಾಟ್ರರ್ಸ್, ನಾಯಂಡಹಳ್ಳಿಗೆ ಬಸ್ ಸಂಚಾರ ವ್ಯವಸ್ಥೆ ಇರಲಿದೆ ಎಂದು ಬಿಎಂಟಿಸಿ ತಿಳಿಸಿದೆ.
ಕ್ರೀಡಾಂಗಣದಿಂದ ಮಾಗಡಿ ರಸ್ತೆಯ ಜನಪ್ರಿಯ ಟೌನ್ ಶಿಪ್, ನೆಲಮಂಗಲ, ಯಲಹಂಕ 5ನೇ ಹಂತ, ಆರ್.ಕೆ.ಹೆಗಡೆನಗರ, ನಾಗವಾರ ಟ್ಯಾನರಿ ರಸ್ತೆ, ಬಾಗಲೂರು ಹೆಣ್ಣೂರು ರಸ್ತೆ, ಹೊಸಕೋಟೆ, ಎಸ್ಬಿಎಸ್ 1-ಕೆ, ಎಸ್ಎಸ್ 13-ಕೆ, ಜಿ2ಯಿಂದ ಜಿ-11ವರೆಗಿನ ಮಾರ್ಗಸಂಖ್ಯೆಯ ಬಸ್‌ಗಳು ರಾತ್ರಿಯವರೆಗೆ ಸಂಚರಿಸಲಿವೆ. ಈಗಾಗಲೇ ಕ್ರಿಕೆಟ್ ಪಂದ್ಯದಂದು ಬಿಎಂಆರ್‌ಸಿಎಲ್ ನಗರದಲ್ಲಿ ಮೆಟ್ರೋ ರೈಲು ಸಂಚಾರವನ್ನು ಮಧ್ಯರಾತ್ರಿ 1.30ರ ತನಕ ವಿಸ್ತರಿಸಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಭಾರತ-ದ.ಆಫ್ರಿಕಾ ಟಿ20: ಮಧ್ಯರಾತ್ರಿವರೆಗೆ ಇರಲಿದೆ ಮೆಟ್ರೋ ಸೇವೆ