ETV Bharat / state

ಶಿಕ್ಷಕರ ತರಬೇತಿಗೆ ಭಾರತ ವಾರ್ಷಿಕ 1 ಶತಕೋಟಿ ಡಾಲರ್ ಖರ್ಚು ಮಾಡಬೇಕು: ನಾರಾಯಣ ಮೂರ್ತಿ - National Education Policy

Narayana Murthy on school teachers training: ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಭಾರತ ವಾರ್ಷಿಕ 1 ಶತಕೋಟಿ ಡಾಲರ್ ಖರ್ಚು ಮಾಡಬೇಕು ಎಂದು ಸಾಫ್ಟ್‌ವೇರ್ ಐಕಾನ್ ನಾರಾಯಣ ಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

narayana murthy
ನಾರಾಯಣ ಮೂರ್ತಿ
author img

By PTI

Published : Nov 16, 2023, 10:31 AM IST

ಬೆಂಗಳೂರು: ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಭಾರತದಿಂದ STEM ಕ್ಷೇತ್ರಗಳಲ್ಲಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತಶಾಸ್ತ್ರ) ಉನ್ನತ ಸಾಧನೆ ಮಾಡಿದ 10,000 ನಿವೃತ್ತ ಶಿಕ್ಷಕರಿಂದ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ವರ್ಷಕ್ಕೆ ಒಂದು ಬಿಲಿಯನ್ ಡಾಲರ್​ ಖರ್ಚು ಮಾಡಬೇಕು ಎಂದು ಸಾಫ್ಟ್‌ವೇರ್ ಐಕಾನ್ ಎನ್‌ಆರ್ ನಾರಾಯಣ ಮೂರ್ತಿ ಸಲಹೆ ನೀಡಿದ್ದಾರೆ.

"ನಾವು ನಮ್ಮ ಶಿಕ್ಷಕರು ಮತ್ತು ಸಂಶೋಧಕರಿಗೆ ಉತ್ತಮ ಸೌಲಭ್ಯಗಳನ್ನು ನೀಡಬೇಕು. ಸರಿಯಾದ ಸಂಬಳ ಕೊಡಬೇಕು. ನಾವು ಅವರನ್ನು ಗೌರವಿಸಬೇಕು. ಅವರು ನಮ್ಮ ಯುವಜನತೆಗೆ ಮಾದರಿಯಾಗಿದ್ದಾರೆ. ಅದಕ್ಕಾಗಿಯೇ ನಾವು 2009ರಲ್ಲಿ ಇನ್ಫೋಸಿಸ್ ಪ್ರಶಸ್ತಿಯನ್ನು ಸ್ಥಾಪಿಸಿದ್ದೇವೆ. ಭಾರತದಲ್ಲಿ ಸಂಶೋಧನೆಯನ್ನು ಹೆಚ್ಚಿಸಲು ಇದು ನಮ್ಮ ಸಣ್ಣ ಕೊಡುಗೆಯಾಗಿದೆ" ಎಂದು ಅವರು ಹೇಳಿದರು.

ಠದೇಶದ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡಲು 2,500 'ಟ್ರೇನ್ ದಿ ಟೀಚರ್' ಕಾಲೇಜುಗಳನ್ನು ಸ್ಥಾಪಿಸಬೇಕು. ಶಿಕ್ಷಕರಿಗೆ ತರಬೇತಿ ಕೊಡುವ ಈ ಕಾಲೇಜುಗಳಿಗೆ 10,000 ನುರಿತ ಶಿಕ್ಷಕರನ್ನು ಆಹ್ವಾನಿಸುವುದು NEP ಯ (ರಾಷ್ಟ್ರೀಯ ಶಿಕ್ಷಣ ನೀತಿ) ಫಲಿತಾಂಶವನ್ನು ವೇಗಗೊಳಿಸುವ ಮಾರ್ಗವಾಗಿದೆ. ಈ ತರಬೇತಿ ಕಾರ್ಯಕ್ರಮವು ವರ್ಷಪೂರ್ತಿ ಇರಬೇಕು" ಎಂದು ಪತ್ರಿಕಾಗೋಷ್ಠಿಯಲ್ಲಿ ಮೂರ್ತಿ ತಿಳಿಸಿದರು. ಈ ಸಂದರ್ಭದಲ್ಲಿ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ ಆರು ವಿಭಾಗಗಳಲ್ಲಿ ಇನ್ಫೋಸಿಸ್ ಪ್ರಶಸ್ತಿ - 2023 ಅನ್ನು ಘೋಷಿಸಿತು.

ಇದನ್ನೂ ಓದಿ: 'ವರ್ಗ' ನಿರ್ಧರಿಸುವುದು ನೀವು ಮಾಡುವ ಕೆಲಸದಿಂದಲೇ ಹೊರತು ಹಣದಿಂದಲ್ಲ : ಸುಧಾ ಮೂರ್ತಿ

"ನಾಲ್ಕು ತರಬೇತುದಾರರ ತಂಡವು ವರ್ಷಕ್ಕೆ 100 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 100 ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಬಹುದು ಎಂದು ತಜ್ಞರು ಹೇಳುತ್ತಾರೆ. ಈ ವಿಧಾನದಿಂದ ನಾವು ಪ್ರತಿ ವರ್ಷ 2,50,000 ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು 2,50,000 ಮಾಧ್ಯಮಿಕ ಶಾಲಾ ಶಿಕ್ಷಕರಿಗೆ ತರಬೇತಿ ನೀಡಲು ಸಾಧ್ಯವಾಗುತ್ತದೆ. ಈ ತರಬೇತಿ ಪಡೆದ ಭಾರತೀಯ ಶಿಕ್ಷಕರು ಐದು ವರ್ಷಗಳ ಅವಧಿಯಲ್ಲಿ ಸ್ವತಃ ತರಬೇತುದಾರರಾಗಬಹುದು" ಎಂದು ಇನ್ಫೋಸಿಸ್ ಸಂಸ್ಥಾಪಕರು ಮಾಹಿತಿ ನೀಡಿದರು.

ಇದನ್ನೂ ಓದಿ: ಅನಿವಾಸಿ ಭಾರತೀಯರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡಿ: ನಾರಾಯಣ ಮೂರ್ತಿ

ಪರಮಾಣು ಶಕ್ತಿ, ಬಾಹ್ಯಾಕಾಶ ಸಂಶೋಧನೆ, ಲಸಿಕೆ ಉತ್ಪಾದನೆ ಮತ್ತು ವಿತರಣೆ, ಹಸಿರು ಕ್ರಾಂತಿ, ಎಲೆಕ್ಟ್ರಿಕ್ ಕಾರುಗಳು ಮತ್ತು ಜೆನೆರಿಕ್ ಔಷಧಿಗಳಲ್ಲಿ ಭಾರತದ ಯಶಸ್ಸು ಕಾಣುತ್ತಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಮತ್ತು ಕೆಲವು ಕ್ಷೇತ್ರಗಳಲ್ಲಿ ಮೂರನೇ ಹಂತದಲ್ಲಿ ಇದ್ದೇವೆ. "ವಾಸಯೋಗ್ಯ ನಗರಗಳ ವಿನ್ಯಾಸ, ಮಾಲಿನ್ಯ ನಿರ್ವಹಣೆ, ಸಂಚಾರ ನಿರ್ವಹಣೆ, ಮತ್ತು ಶುದ್ಧ ಮತ್ತು ಸುರಕ್ಷಿತ ನೀರನ್ನು ಒದಗಿಸುವಂತಹ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ನಾವು ಮೊದಲ ಹಂತದಲ್ಲಿದ್ದೇವೆ" ಎಂದರು.

ಇದನ್ನೂ ಓದಿ: ದೆಹಲಿಯಲ್ಲಿ ಅಶಿಸ್ತು ಹೆಚ್ಚು : ಇನ್ಫೊಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಬೇಸರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.