ETV Bharat / state

ಲಾಕ್‍ಡೌನ್‍ನಿಂದ ಜೀವನಶೈಲಿ ಬದಲಾವಣೆ ; ಮಹಿಳೆಯರಲ್ಲಿ ಹೆಚ್ಚುತ್ತಿರುವ ಪಿಸಿಒಎಸ್ ಅಸ್ವಸ್ಥತೆ..

author img

By

Published : Aug 29, 2020, 8:17 PM IST

ಮಹಿಳೆಯರಲ್ಲಿ ಲಾಕ್‍ಡೌನ್ ಹಲವು ವಿಧದಲ್ಲಿ ಸಂಕೀರ್ಣತೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಕೋವಿಡ್ ಸಂದರ್ಭದಲ್ಲಿ ಅನಿಯಮಿತವಾದ ವೈದ್ಯರನ್ನು ಭೇಟಿಯಾಗಿ ಫಾಲೋ-ಅಪ್‍ಗಳನ್ನು ಮಾಡದಿರುವುದು ಸೇರಿ ಇನ್ನಿತರೆ ಕಾರಣಗಳಿಂದಾಗಿ ಪಿಸಿಒಎಸ್ ಪ್ರಕರಣಗಳು ಹೆಚ್ಚುತ್ತಿವೆ..

PCOS
ಪಿಸಿಒಎಸ್

ಬೆಂಗಳೂರು : ಕಳೆದ ಕೆಲ ತಿಂಗಳಲ್ಲಿ ಕೋವಿಡ್-19 ಲಾಕ್‍ಡೌನ್ ಹಿನ್ನೆಲೆ ಜೀವನಶೈಲಿಯಲ್ಲಿ ಅನಿವಾರ್ಯ ಬದಲಾವಣೆಗಳು ಕಂಡು ಬಂದಿವೆ. ಇದರ ಪರಿಣಾಮ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿರೋದು ಕಂಡು ಬರುತ್ತಿದೆ.

ಮಹಿಳೆಯರಲ್ಲಿ ಹೆಚ್ಚುತ್ತಿರುವ ಪಿಸಿಒಎಸ್ ಬಗ್ಗೆ ತಿಳಿಸಿದ ವೈದ್ಯೆ

ಮನೆಯಲ್ಲೇ ಕುಳಿತಿರುವುದು, ವ್ಯಾಯಾಮದ ಕೊರತೆ, ಆನ್‍ಲೈನ್‍ನಲ್ಲಿ ಜಂಕ್ ಫುಡ್‍ಗಳ ಆರ್ಡರ್​ನ ಹೆಚ್ಚಳ, ನಿರಂತರವಾಗಿ ಟಿವಿ ವೀಕ್ಷಣೆ ಮತ್ತು ಅನಿಯಮಿತವಾದ ನಿದ್ದೆಯ ಪದ್ಧತಿಗಳಿಂದಾಗಿ ಮಹಿಳೆಯರಲ್ಲಿ ತೂಕ ಹೆಚ್ಚಳವಾಗುತ್ತಿದೆ. ಇದರ ಪರಿಣಾಮ ಲಾಕ್‍ಡೌನ್ ಅವಧಿಯಲ್ಲಿ ಅನಿಯಮಿತವಾಗಿ ಅಥವಾ ದೊಡ್ಡ ಪ್ರಮಾಣದಲ್ಲಿ ಮುಟ್ಟಿನ ಸಮಸ್ಯೆ ಉಂಟಾಗುತ್ತಿದೆ. ಇದರಿಂದಾಗಿ ಪಿಸಿಒಎಸ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಬೆಂಗಳೂರಿನ ರಾಧಾಕೃಷ್ಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಲ್ಯಾಪರೋಸ್ಕೋಪಿಕ್ ಸರ್ಜನ್ ಮತ್ತು ಫರ್ಟಿಲಿಟಿ ವಿಶೇಷ ತಜ್ಞೆ ಹಾಗೂ ವೈದ್ಯಕೀಯ ನಿರ್ದೇಶಕರಾಗಿರುವ ಡಾ.ವಿದ್ಯಾ ವಿ. ಭಟ್ ತಿಳಿಸಿದ್ದಾರೆ.

ಇಂದು ವೆಬ್ನಾರ್ ನಡೆಸುವ ಮೂಲಕ ಈ ವಿಚಾರದ ಬಗ್ಗೆ ವಿವರವಾಗಿ ಮಾತನಾಡಿದ ಅವರು, ಎಂಡೋಕ್ರೈನ್ ಗ್ಲಾಂಡ್‍ನಲ್ಲಿ ಪಿಸಿಒಎಸ್ ಒಂದು ಸಾಮಾನ್ಯ ರೋಗವಾಗಿದೆ. ಭಾರತದಲ್ಲಿ ನಡೆದಿರುವ ಬಹುತೇಕ ಅಧ್ಯಯನಗಳ ವರದಿ ಪ್ರಕಾರ ಇದರ ಪ್ರಮಾಣ ಶೇ. 9 ರಿಂದ 36 ರಷ್ಟಿದೆ. ಪಿಸಿಒಎಸ್ ಮಹಿಳೆಯರಲ್ಲಿ ಅಂಡೋತ್ಪತ್ತಿ ಅಸ್ವಸ್ಥತೆಗೆ ಶೇ. 85ರಷ್ಟು ಕಾರಣವಾಗುತ್ತದೆ. ಪ್ರಮುಖವಾಗಿ ಇದರ ಪರಿಣಾಮ ಫಲವತ್ತತೆ ಮೇಲೆ ಬೀರುತ್ತದೆ. ಆದರೆ, ಹಲವು ಮಹಿಳೆಯರಿಗೆ ತಾವು ಪಿಸಿಒಎಸ್‍ನಿಂದ ಬಳಲುತ್ತಿದ್ದೇವೆ ಎಂಬುದರ ಬಗ್ಗೆ ತಿಳಿದಿರುವುದಿಲ್ಲ.

Increasing PCOS disorder in women
ಮಹಿಳೆಯರಲ್ಲಿ ಹೆಚ್ಚುತ್ತಿರುವ ಪಿಸಿಒಎಸ್‌ನ ವಿವರ

ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಪಿಸಿಒಎಸ್ ಪ್ರಕರಣಗಳಲ್ಲಿ ಶೇ.3ರಷ್ಟು ಹೆಚ್ಚಳ ಕಂಡು ಬಂದಿದೆ. ಸಾಂಕ್ರಾಮಿಕದ ಹಿನ್ನೆಲೆ ಜೀವನ ಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳಿಂದಾಗಿ ಈ ಪ್ರಕರಣಗಳು ಮತ್ತಷ್ಟು ಹೆಚ್ಚಲು ಕಾರಣವಾಗಿದೆ ‌ಎಂದರು.

ಮಹಿಳೆಯರಲ್ಲಿ ಲಾಕ್‍ಡೌನ್ ಹಲವು ವಿಧದಲ್ಲಿ ಸಂಕೀರ್ಣತೆಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿದೆ. ಕೋವಿಡ್ ಸಂದರ್ಭದಲ್ಲಿ ಅನಿಯಮಿತವಾದ ವೈದ್ಯರನ್ನು ಭೇಟಿಯಾಗಿ ಫಾಲೋ-ಅಪ್‍ಗಳನ್ನು ಮಾಡದಿರುವುದು ಸೇರಿ ಇನ್ನಿತರೆ ಕಾರಣಗಳಿಂದಾಗಿ ಪಿಸಿಒಎಸ್ ಪ್ರಕರಣಗಳು ಹೆಚ್ಚುತ್ತಿವೆ. ವಿಶೇಷವಾಗಿ ' ಬಂಜೆತನಕ್ಕಾಗಿ ಚಿಕಿತ್ಸೆ' ಪಡೆಯುತ್ತಿರುವ ಮಹಿಳೆಯರಲ್ಲಿ ಈ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಅಸ್ವಸ್ಥತೆಯು ಇನ್‍ಸುಲಿನ್ ಹೆಚ್ಚಿನ ಮಟ್ಟದ ಪರಿಚಲನೆಯ ಜತೆಗೆ ಸಂಬಂಧ ಹೊಂದಿದೆ ಮತ್ತು ಲಾಕ್‍ಡೌನ್ ಸಂದರ್ಭದಲ್ಲಿ ಡಯಾಬಿಟಿಕ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ.

ಜಡತ್ವದ ಜೀವನಶೈಲಿ ಮತ್ತು ಬೊಜ್ಜು ಹೆಚ್ಚಳದಿಂದಾಗಿ ರೋಗಿಗಳಲ್ಲಿ ಪಿಸಿಒಎಸ್ ಮರುಕಳಿಸುವ ಪ್ರಮಾಣ ಹೆಚ್ಚುವ ಸಾಧ್ಯತೆಗಳು ಹೆಚ್ಚಾಗಿವೆ ಅಥವಾ ಗುಣಲಕ್ಷಣಗಳು ಹೆಚ್ಚಾಗಿ ಈ ಅಸ್ವಸ್ಥತೆಯು ಗಂಭೀರ ಸ್ವರೂಪಕ್ಕೆ ತಿರುಗಬಹುದಾಗಿದೆ ಎಂದರು.

ಸ್ಯಾಚುರೇಟೆಡ್ ಫ್ಯಾಟ್‌ನ ಹೆಚ್ಚಾಗಿ ಸೇವನೆ ಮಾಡುವುದು, ತೂಕ ಹೆಚ್ಚಳ, ಉರಿ, ರಾಸಾಯನಿಕ ಮತ್ತು ಹಾರ್ಮೋನ್‍ಗಳ ಅಸಮತೋಲನದಂತಹ ಕಾರಣಗಳಿಂದ ಪಿಸಿಒಎಸ್ ಕಂಡು ಬರುತ್ತದೆ. ಬೊಜ್ಜು, ಬಂಜೆತನ, ಟೈಪ್ 2 ಮಧುಮೇಹ, ಕಾರ್ಡಿಯೋವಾಸ್ಕುಲರ್ ರೋಗಗಳು, ಮಾನಸಿಕ ಮತ್ತು ಮನೋವೈಜ್ಞಾನಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಅಸ್ವಸ್ಥತೆಯು ಅನಿಯಮಿತ ಮುಟ್ಟು, ಮುಖ ಅಥವಾ ದೇಹದಲ್ಲಿ ಕೂದಲು ಹೆಚ್ಚಳ, ಕೂದಲು ತೆಳುವಾಗುವುದು, ಚರ್ಮದ ಬಣ್ಣದಲ್ಲಿ ಬದಲಾವಣೆ ಆಗುವುದು ಮತ್ತು ನಿದ್ರಾಹೀನತೆಯಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಪಿಸಿಒಎಸ್ ಪತ್ತೆ ಹೇಗೆ??: ಈ ಪಿಸಿಒಎಸ್‌ನ ಅಲ್ಟ್ರಾಸೌಂಡ್ ಪರೀಕ್ಷೆ ಅಥವಾ ರಕ್ತದ ಪರೀಕ್ಷೆ ಮೂಲಕ ಪತ್ತೆ ಮಾಡಬಹುದಾಗಿದೆ. ಮಾತ್ರೆಗಳು, ಲ್ಯಾಪರೋಸ್ಕೋಪಿ, ಆಹಾರ ನಿಯಂತ್ರಣ, ವ್ಯಾಯಾಮ ಮತ್ತು ಅಧಿಕವಾದ ರಕ್ತದ ಸಕ್ಕರೆ ಪ್ರಮಾಣವನ್ನು ತಗ್ಗಿಸಲು ಧ್ಯಾನದಂತಹ ಚಿಕಿತ್ಸೆಗಳಿಂದ ಪಿಸಿಒಎಸ್ ನಿವಾರಣೆ ಮಾಡಿಕೊಳ್ಳಬಹುದು.

ಪಿಸಿಒಎಸ್ ಬಗೆಗಿನ ತಪ್ಪು ಕಲ್ಪನೆ : ಪಿಸಿಒಎಸ್ ಬಗೆಗಿನ ತಪ್ಪು ಕಲ್ಪನೆಗಳನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾಹಿತಿ ನೀಡಿದ ಡಾ. ವಿದ್ಯಾ ವಿ.ಭಟ್, ಈ ಬಗ್ಗೆ ನಂಬಿಕೆಗೆ ವಿರುದ್ಧವಾಗಿ ಮಕ್ಕಳಿರುವ ಮಹಿಳೆಯರಲ್ಲಿಯೂ ಈ ಪಿಸಿಒಎಸ್ ಬರಬಹುದು ಮತ್ತು ಪಿಸಿಒಎಸ್ ಇರುವ ಮಹಿಳೆಯರು ಮಕ್ಕಳನ್ನು ಹೊಂದಬಹುದಾಗಿದೆ. ಯಾವುದೇ ವಯಸ್ಸಿನಲ್ಲಿಯೂ ಪಿಸಿಒಎಸ್ ಬರಬಹುದು. ಋತುಬಂಧ, ಗರ್ಭಕಂಠವು ಮೂಲತಃ ಜೀವನಶೈಲಿಯ ನಿರ್ವಹಣೆ ಮೇಲೆ ಅವಲಂಬಿತವಾಗಿರುತ್ತದೆ. ಉತ್ತಮ ಆಹಾರ ಪದ್ಧತಿ, ವ್ಯಾಯಾಮ ಮತ್ತು ಬ್ಲಡ್ ಶುಗರ್ ಹಾಗೂ ಅಧಿಕ ರಕ್ತದೊತ್ತಡವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡುವುದರಿಂದ ಭವಿಷ್ಯದಲ್ಲಿ ಪಿಸಿಒಎಸ್ ಸಂಕೀರ್ಣತೆಗಳನ್ನು ನಿಯಂತ್ರಿಸಬಹುದಾಗಿದೆ ಎಂದು ತಿಳಿಸಿದರು.

ಪಿಸಿಒಎಸ್ ಆನ್​ಲೈನ್ ಕನ್ಸಲ್ಟೇಶನ್‌ ಕಷ್ಟಸಾಧ್ಯ : ಲಾಕ್‍ಡೌನ್ ಅವಧಿಯಲ್ಲಿ ಸ್ತ್ರೀರೋಗ ತಜ್ಞರೊಂದಿಗೆನ ಆನ್‍ಲೈನ್ ಕನ್ಸಲ್ಟೇಶನ್ ಪಡೆಯುವುದರಿಂದ ರೋಗಿಗಳ ಚಿಕಿತ್ಸೆಗೆ ಹೆಚ್ಚಿನ ಸಹಕಾರಿಯಾಗುವುದಿಲ್ಲ. ಸೂಕ್ತ ರೀತಿಯ ಸ್ಕ್ಯಾನ್ ಮಾಡುವ ಮೂಲಕ ಪಿಸಿಒಎಸ್‍ಗೆ ಚಿಕಿತ್ಸೆ ನೀಡುವ ಅಗತ್ಯವಿರುತ್ತದೆ. ಅಸ್ವಸ್ಥತೆಯ ಗಂಭೀರತೆ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದನ್ನು ಟೆಲಿ-ಕನ್ಸಲ್ಟೇಶನ್ ಮೂಲಕ ಮಾಡಲು ಸಾಧ್ಯವಿಲ್ಲ.

ಪಿಸಿಒಎಸ್‍ನ ಸೂಕ್ತ ಮತ್ತು ಸಮರ್ಪಕವಾದ ತಪಾಸಣೆಗಾಗಿ ವೈದ್ಯರ ಬಳಿ ರೋಗಿಗಳು ಬರಲೇಬೇಕಾಗುತ್ತದೆ. ಈ ಮೂಲಕ ವೈದ್ಯರು ರೋಗಿಯನ್ನು ತಪಾಸಣೆ ನಡೆಸಿ ಚಿಕಿತ್ಸೆಯ ಬಗ್ಗೆ ನಿರ್ಧಾರ ಕೈಗೊಳ್ಳಬಹುದಾಗಿದೆ. ಹಂತ ಹಂತವಾಗಿ ಲಾಕ್​ಡೌನ್ ಸಡಿಲಿಕೆ ಬಳಿಕ ಈಗ ಜನರು ಪಿಸಿಒಎಸ್ ಪರೀಕ್ಷೆಗೆ ಬರುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.