ETV Bharat / state

ಸ್ಕ್ರೀನ್ ಬಳಕೆಯಿಂದ ಮಕ್ಕಳನ್ನು ದೂರವಿಡದಿದ್ದರೆ ಇದೆ ಅಪಾಯ:  ಮಾತಿನ ಕಲಿಕೆ ಮೇಲೂ ಬೀರಲಿದೆ ಪರಿಣಾಮ! - ಸ್ಕ್ರೀನ್ ಬಳಕೆ ಹೆಚ್ಚು ಮಾಡುತ್ತಿರುವ ಮಕ್ಕಳು

ಪುಟ್ಟ ಮಕ್ಕಳು ಪೋಷಕರು, ಅಜ್ಜ - ಅಜ್ಜಿಯರ ಮುಖ ಚಲನೆಗಳನ್ನು ನೋಡಿ ಭಾಷೆ ಕೇಳಿಕೊಂಡು ಮಾತನಾಡುವುದನ್ನು ಕಲಿಯುತ್ತಾರೆ. ಆದರೆ, ಕೋವಿಡ್ ಪರಿಣಾಮದಿಂದಾಗಿ ಹೆದರಿ ಮಕ್ಕಳನ್ನು ಬೇರೆಯವರ ಜೊತೆ ಬೆರೆಯಲು ಬಿಡುತ್ತಿಲ್ಲ. ಇದರಿಂದ ಮಕ್ಕಳು ಮಾತಿನ ಕಲಿಕಾ ಸಮಸ್ಯೆ ಎದುರಿಸುತ್ತಿದ್ದಾರೆ.

covid effect
ಕೊರೊನಾ ಪರಿಣಾಮ
author img

By

Published : Aug 12, 2021, 8:28 PM IST

Updated : Aug 12, 2021, 9:42 PM IST

ಬೆಂಗಳೂರು: ಕೋವಿಡ್​​ ಸಾಂಕ್ರಾಮಿಕ ರೋಗ ಎಲ್ಲ ವಯಸ್ಸಿನವರ ಮೇಲೂ ಅಡ್ಡಪರಿಣಾಮಗಳನ್ನು ಬೀರಿದೆ. ಇದೀಗ ಆಘಾತಕಾರಿ ವಿಚಾರವೊಂದು ಬೆಳಕಿಗೆ ಬಂದಿದ್ದು, ಲಾಕ್​ಡೌನ್​​ನಿಂದ ಸಂವಹನ ಇಲ್ಲದೇ ಎಳೆ ಮಕ್ಕಳು ಮಾತಿನ ಕಲಿಕಾ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕಾಗಿ ಪೋಷಕರು ಮನಶಾಸ್ತ್ರಜ್ಞರು, ಮಕ್ಕಳ ವೈದ್ಯರು, ಸ್ಪೀಚ್ ಥೆರಪಿಸ್ಟ್ ಮೊರೆ ಹೋಗುತ್ತಿದ್ದಾರೆ.

ಪುಟ್ಟ ಮಕ್ಕಳು ಪೋಷಕರು, ಅಜ್ಜ - ಅಜ್ಜಿಯರ ಮುಖ ಚಲನೆಗಳನ್ನು ನೋಡಿ ಭಾಷೆ ಕೇಳಿಕೊಂಡು ಮಾತನಾಡುವುದನ್ನು ಕಲಿಯುತ್ತಾರೆ. ಆದರೆ, ಕೋವಿಡ್ ಪರಿಣಾಮದಿಂದಾಗಿ ಹೆದರಿ ಮಕ್ಕಳನ್ನು ಬೇರೆಯವರ ಜೊತೆ ಬೆರೆಯಲು ಬಿಡುತ್ತಿಲ್ಲ. ಜೊತೆಗೆ ಹೆಚ್ಚಿನ ಮಕ್ಕಳು ದೈಹಿಕ ಚಟುವಟಿಕೆಗಳಿಲ್ಲದೇ ಟಿವಿ, ಮೊಬೈಲ್, ಕಂಪ್ಯೂಟರ್​​​ಗಳ ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇದರಿಂದ ಮಕ್ಕಳ ಬೆಳವಣಿಗೆ ಮತ್ತು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀಳುತ್ತಿದೆ. ಮೊಬೈಲ್ ಹಾಗೂ ಇತರ ಪರದೆಗಳ ಮೇಲೆ ನೋಡುವ ಕಾರ್ಟೂನ್​​ಗಳ ರೀತಿಯೇ ಅಸಹಜವಾಗಿ ಶಬ್ಧ ಮಾಡಲು ಕಲಿಯುತ್ತಿದ್ದಾರೆ, ಹೊರತು ಸಹಜವಾದ ಮಾತು ಕಲಿಯಲು ತೊಡಕಾಗುತ್ತಿದೆ.

ಆಸ್ಟರ್ ಆರ್​ವಿ ಆಸ್ಪತ್ರೆಯ ಮಕ್ಕಳ ತಜ್ಞೆ ಅಂಬಿಕಾ ಉಡುಪ

ಅಧ್ಯಯನಗಳು ಹೇಳುವುದೇನು:

ಮಕ್ಕಳ ಮೆದುಳು ಮೊದಲ ವರ್ಷದಲ್ಲಿ ವೇಗವಾಗಿ ಕೆಲಸ ಮಾಡುತ್ತಿದೆ. ಈ ವೇಳೆ, ಜನರೊಂದಿಗೆ ಸಂವಹನ ನಡೆಸುವ ಮೂಲಕ ಉತ್ತಮವಾಗಿ ಕಲಿಯುತ್ತಾರೆ. ಆರು ವರ್ಷ ತುಂಬುವ ಮೊದಲೇ ಮಕ್ಕಳು ಪರದೆಗಳ ಮೇಲೆ ಅವಲಂಬಿತರಾಗುವುದರಿಂದ ಮಾತು ಕಲಿಯುವುದು, ಶಬ್ದಕೋಶದ ಬೆಳವಣಿಗೆ, ಪರಸ್ಪರ ಮಾತು ಆಡುವುದು, ನಿದ್ದೆಗೆ ಅಡ್ಡಿಯಾಗುವುದು, ಕೋಪ, ಕಿರಿಕಿರಿ, ಹೆತ್ತವರೊಂದಿಗೆ ಜಗಳ ಮೊದಲಾದ ಅಡ್ಡ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಆರು ವರ್ಷದ ಮೇಲ್ಪಟ್ಟ ಮಕ್ಕಳು ಕೂಡಾ ಅರ್ಧ ಗಂಟೆಗಿಂತ ಹೆಚ್ಚು ಕಾಲ ಮೊಬೈಲ್ ಅಥವಾ ಕಂಪ್ಯೂಟರ್​​ ಪರದೆ ಮೇಲೆ ಅವಲಂಬಿತರಾಗಬಾರದು ಎಂಬುದನ್ನು ಅಧ್ಯಯನಗಳು ದೃಢಪಡಿಸಿವೆ.

ಸ್ಪೀಚ್ ಥೆರಪಿಸ್ಟ್ ಅಭಿಪ್ರಾಯ:

ಈ ಬಗ್ಗೆ ನಿಮ್ಹಾನ್ಸ್ ಸಂಸ್ಥೆಯ ಸ್ಪೀಚ್ ಥೆರಪಿಸ್ಟ್ ಡಾ. ಪ್ರವೀಣ್ ಈಟಿವಿ ಭಾರತಗೆ ಮಾಹಿತಿ ನೀಡಿದ್ದು, ಪದಗಳ ಪದೇ ಪದೆ ಬಳಕೆಯಿಂದ ಮಕ್ಕಳಲ್ಲಿ ಮಾತಿನ ಬೆಳವಣಿಗೆ ಆಗುತ್ತದೆ. ಆದರೆ ಕಳೆದ ಒಂದೂವರೆ ವರ್ಷದಿಂದ ಲಾಕ್​​​ಡೌನ್ ಪರಿಣಾಮ ಬೇರೆಯವರ ಜೊತೆ ಸಂವಹನ ಮಾಡುವುದು ಕಷ್ಟವಾಗಿದೆ. ನಗರದ ಚಿಕ್ಕ ಕುಟುಂಬಗಳಲ್ಲಿ ತಂದೆ - ತಾಯಿ, ಮಗು ಮಾತ್ರ ಇದ್ದು, ಮಕ್ಕಳಿಗೆ ಮಾತು ಕಲಿಯಲು ಕಷ್ಟವಾಗುತ್ತದೆ. ಇನ್ನು ಮಕ್ಕಳು ಹಠ ಮಾಡಿದಾಗ ಮೊಬೈಲ್ ಕೈಗೆ ಕೊಡುವುದರಿಂದ ಒನ್ ವೇ ಸಂವಹನ ಹೆಚ್ಚಾಗಿ ಮಕ್ಕಳಿಗೆ ಪ್ರತಿಕ್ರಿಯೆಗೆ ಅವಕಾಶ ಸಿಗುವುದಿಲ್ಲ. ಭಾಷೆ ಕಲಿಯಬೇಕೆಂದರೆ ಮಕ್ಕಳು ಮತನಾಡುವುದು ಅತ್ಯಗತ್ಯ.‌ ಆದರೆ ಗೇಮ್, ಕಾರ್ಟೂನ್ ನೋಡುವುದರಿಂದ ಇದು ಸಾಧ್ಯವಾಗುವುದಿಲ್ಲ ಎಂದರು.‌

ಮಾಹಿತಿ ಕೊರತೆ:

ಸ್ಪೀಚ್ ಥೆರಪಿ ವಿಷಯದ ಬಗ್ಗೆ ಅನೇಕರಿಗೆ ಮಾಹಿತಿ ಕೊರತೆ ಇದೆ. ಮಕ್ಕಳು ಮಾತನಾಡದೇ ಇರಲು ಅನೇಕ ಕಾರಣಗಳಿರಬಹುದು. ಮೊದಲು ಅದನ್ನು ಸ್ಪೀಚ್ ಥೆರಪಿಸ್ಟ್​ಗಳ ಬಳಿ ಕರೆದುಕೊಂಡು ಹೋಗಿ ಪತ್ತೆ ಹಚ್ಚುವ ಕೆಲಸ ಆಗಬೇಕು. ಒಂದು ಮಗು 0 ರಿಂದ 12 ತಿಂಗಳ ನಡುವೆ ಪದಗಳನ್ನು ಬಳಸಲು ಆರಂಭಿಸುತ್ತವೆ. ಮೂರು ವರ್ಷದ ಒಳಗೆ ಸಂಪೂರ್ಣವಾಗಿ ಮಾತನಾಡಲು ಕಲಿಯಬೇಕು. ಹೀಗಾಗದೇ ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ ಎಂದು ತಿಳಿಸಿದರು.

ಹೆತ್ತವರು ನಿರ್ಲಕ್ಷ್ಯ ವಹಿಸಬಾರದು:

ಆನ್​​​ಲೈನ್ ಸ್ಪೀಚ್ ಥೆರಪಿಯಲ್ಲಿ ಸಂವಹನ ಎರಡೂ ಕಡೆಯಿಂದ ಆಗುತ್ತದೆ. ಉದಾಹರಣೆಗೆ ಬೇರೆ ಬೇರೆ ಚಟುವಟಿಕೆಗಳ ಮೂಲಕ ಮಗುವನ್ನು ಚರುಕುಗೊಳಿಸಲಾಗುತ್ತದೆ. ಮಗು ಮಾತನಾಡುವ ಮೊದಲು ದೇಹದ ಅಂಗಾಂಗ ಗೊತ್ತಾಗಬೇಕು. ಮಗು ಕೈ ಎತ್ತಿ ತೋರಿಸುತ್ತದೆ. ಚಿತ್ರದಲ್ಲಿ ತೋರಿಸಲು ಹೇಳುತ್ತೇವೆ. ಚಿತ್ರಗಳನ್ನು ಗುರುತಿಸಿ ತನಗೆ ಹೋಲಿಕೆ ಮಾಡಲು ಗೊತ್ತಾಗಬೇಕು. ಈ ರೀತಿಯಾಗಿ ಕಲಿಸಿಕೊಡಲಾಗುತ್ತದೆ. ಹೀಗಾಗಿ ಮಗುವಿನ ಮಾತಿನ ಕುಂಠಿತ ಬೆಳವಣಿಗೆ ಬಗ್ಗೆ ನಿರ್ಲಕ್ಷ್ಯವಹಿಸದೇ ಹೆತ್ತವರು ಗಮನಿಸಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.

ಬಳಿಕ ಆಸ್ಟರ್ ಆರ್​ವಿ ಆಸ್ಪತ್ರೆಯ ಮಕ್ಕಳ ತಜ್ಞೆ ಅಂಬಿಕಾ ಉಡುಪ ಮಾತನಾಡಿ, ಕೋವಿಡ್ ಲಾಕ್​​​ಡೌನ್‌ನಿಂದಾಗಿ ಸ್ಕೂಲ್, ಆಟದ ಮೈದಾನ , ಫ್ರೆಂಡ್ಸ್ , ಇತರರ ಜೊತೆ ಮಕ್ಕಳು ಬೆರೆಯಲು ಆಗುತ್ತಿಲ್ಲ. ಇದರಿಂದ ಆತಂಕ, ಭಯ ಜಾಸ್ತಿಯಾಗುತ್ತಿದೆ. ದೈಹಿಕ ಮಾನಸಿಕ ಒತ್ತಡ ಹೆಚ್ಚಾಗಿದೆ. ಆನ್​ಲೈನ್​​ ತರಗತಿಗಳಿಂದ ಅವರ ಭಾಷೆ ವ್ಯತ್ಯಾಸ, ಮಾತು ಕಮ್ಮಿಯಾಗುತ್ತಿದೆ. ವಾರದಲ್ಲಿ 10 ಕೇಸ್ ನೋಡುತ್ತಿದೆ. ಆದರೆ, ಈಗ 50 ಮಕ್ಕಳನ್ನು ಕಾನ್ಸಲ್ಟ್ ಮಾಡುತ್ತಿದ್ದೇನೆ ಎಂದರು.

ಓದಿ: ಚಂದ್ರನ ಅಂಗಳದಲ್ಲಿ ಜೀವಜಲ.. ಚಂದ್ರಯಾನ-3 ಯೋಜನೆಯತ್ತ ಇಸ್ರೋ ಆಶಾಭಾವ

ತಂದೆ - ತಾಯಿ ಜೊತೆಗೆ ಮನೆಯಲ್ಲೇ ಇರುವುದರಿಂದ ಇತರರ ಜೊತೆ ಬೆರೆಯುವುದು ಕಡಿಮೆಯಾಗಿದೆ. ಕೇವಲ ಅಗತ್ಯ ಸೇವೆಗಳು ಈಗಲೂ ಇರುವುದರಿಂದ ಮಾನಸಿಕ, ದೈಹಿಕ ಕಾಯಿಲೆಗಳು ಹತ್ತರಷ್ಟು ಕಂಡು ಬರುತ್ತಿದೆ. ಬೆಳವಣಿಗೆ ಕುಂಠಿತವಾಗುತ್ತಿದೆ ಎಂದರು.

Last Updated : Aug 12, 2021, 9:42 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.