ಬೆಂಗಳೂರು: ಬಿಬಿಎಂಪಿ ವಾರ್ ರೂಮ್ಗೆ ಸಚಿವ ಸುಧಾಕರ್ ಭೇಟಿ ನೀಡಿ, ಕೊರೊನಾ ಸೋಂಕಿತರ ಅಂಕಿ-ಅಂಶ ಪರಿಶೀಲನೆ ನಡೆಸಿದರು. ಕೊರೊನಾ ತಡೆಗೆ ತೆಗೆದುಕೊಂಡಿರೋ ಮುನ್ನೆಚ್ಚರಿಕೆ ಕ್ರಮದ ಕುರಿತು ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ವಾರ್ ರೂಮ್ನಲ್ಲಿ ಇಡೀ ರಾಜ್ಯದ ಡ್ಯಾಶ್ ಬೋರ್ಡ್ ತಯಾರಾಗಿದೆ. ನಾಳೆ ಬೆಳಗ್ಗೆ ಅಧಿಕೃತ ಉದ್ಘಾಟನೆಯಾಗಲಿದೆ. ಯಾರು ಎಲ್ಲಿಂದ ಬೇಕಾದರೂ ರಿಯಲ್ ಟೈಮ್ನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ, ಕ್ವಾರಂಟೈನ್ನಲ್ಲಿರುವ ಮಾಹಿತಿ, ಎಲ್ಲವನ್ನೂ ಅವರವರ ಫೋನ್ ಮುಖಾಂತರವೇ ನೋಡಬಹುದಾಗಿದೆ.
ಅಲ್ಲದೆ ಎಲ್ಲಾ ಹದಿನೇಳು ವೈದ್ಯಕೀಯ ಕಾಲೇಜುಗಳ ಡೈರೆಕ್ಟರ್ಗಳ ಜೊತೆಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಇಟ್ಟುಕೊಳ್ಳಲಾಗಿದೆ. ಲ್ಯಾಬ್ ಪರೀಕ್ಷೆಗಳ ಬಗ್ಗೆ, ಆಸ್ಪತ್ರೆ ಸಿದ್ಧತೆ ಕುರಿತು ವಿಚಾರಿಸಲಾಗುವುದು. ಪ್ರಾರಂಭದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದ್ದೆವು. ಈಗ ಉತ್ತಮ ಮುನ್ನೆಚ್ಚರಿಕಾ ಕ್ರಮದಿಂದಾಗಿ ಹನ್ನೊಂದನೇ ಸ್ಥಾನದಲ್ಲಿದ್ದೇವೆ ಎಂದರು.
ನಂಜನಗೂಡನ್ನು ರೆಡ್ ಝೋನ್ ಅಂತ ಪರಿಗಣಿಸಲಾಗಿದೆ. ಇಬ್ಬರು ಐಸಿಯುನಲ್ಲಿದ್ದವರಲ್ಲಿ ಒಬ್ಬರನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಟೆಸ್ಟಿಂಗ್ ಕಿಟ್ಗಳನ್ನು ಹೆಚ್ಚೆಚ್ಚು ಆರ್ಡರ್ ಮಾಡಲಾಗಿದೆ. ಸಮಾಜದಲ್ಲಿರುವ ಅನೇಕರಿಗೆ ರ್ಯಾಂಡಮ್ ಟೆಸ್ಟ್ ಮಾಡಲು ನಿರ್ಧರಿಸಿದ್ದೇವೆ. ಇದರಿಂದ ಪಾಸಿಟಿವ್ ಇರುವವರ ಸಂಖ್ಯೆ ಕಡಿಮೆ ಆಗಬಹುದು. ಸದ್ಯಕ್ಕೆ ಸೋಂಕಿತರೆಲ್ಲರೂ ಸ್ಟೇಬಲ್ ಆಗಿದ್ದಾರೆ ಎಂದರು.
ರೆಡ್ ಝೋನ್ಗಳನ್ನು ಈಗಾಗಲೇ ಮಾಡಲಾಗಿದೆ. ಏ. 14ರ ಲಾಕ್ಡೌನ್ ಬಳಿಕ ಹಂತ ಹಂತವಾಗಿ ಬಿಡುವ ಬಗ್ಗೆ ಚಿಂತಿಸಲಾಗುವುದು. ಮೈಸೂರು ನಂಜನಗೂಡು, ಚಿಕ್ಕಬಳ್ಳಾಪುರದ ಗೌರಿಬಿದನೂರು, ಬೆಂಗಳೂರಿನ ಕೆಲವು ವಲಯ, ಮಂಗಳೂರು, ಈ ರೀತಿಯಲ್ಲಿ ರೆಡ್ ಝೋನ್ ಮಾಡಿ ಸ್ವಲ್ಪ ದಿನ ಲಾಕ್ಡೌನ್ ವಿಸ್ತರಿಸಲಾಗುವುದು ಎಂದರು.