ETV Bharat / state

ಸಿಲಿಕಾನ್​​ ಸಿಟಿಯಲ್ಲಿ 23 ಹೈಟೆಕ್ ಪೊಲೀಸ್ ಚೌಕಿ ಉದ್ಘಾಟಿಸಿದ ಬಿಬಿಎಂಪಿ - HiTech Police Chowki in Bangalore news

ನಗರದ ಸಂಚಾರಿ ಪೊಲೀಸರಿಗೆ ಅನುಕೂಲವಾಗುವಂತೆ ಮೊದಲ ಹಂತದಲ್ಲಿ ಪ್ರಮುಖ 23 ಜಂಕ್ಷನ್ / ವೃತ್ತಗಳಲ್ಲಿ ಕಿಯೋಸ್ಕ್​​ಗಳನ್ನು ತೆರೆಯಲಾಗುತ್ತಿದೆ. ಗುರುತಿಸಿರುವ ಇತರೆ ಪ್ರಮುಖ ಸ್ಥಳಗಳಲ್ಲಿ ಹಂತ-ಹಂತವಾಗಿ ಕಿಯೋಸ್ಕ್​​ಗಳನ್ನು ನಿರ್ಮಿಸಲಾಗುವುದು ಎಂದು ಮೇಯರ್ ತಿಳಿಸಿದರು.

Inauguration of HiTech Police Chowki in Bangalore
ಹೈಟೆಕ್ ಪೊಲೀಸ್ ಚೌಕಿ ಉದ್ಘಾಟನೆ
author img

By

Published : May 8, 2020, 3:25 PM IST

ಬೆಂಗಳೂರು: ಅತ್ಯಾಧುನಿಕ ಪೊಲೀಸ್ ಚೌಕಿಗಳನ್ನು ನಿರ್ಮಾಣ ಮಾಡಿ ಆರೇಳು ತಿಂಗಳುಗಳೇ ಕಳೆದಿದ್ದು, ಇಂದು ಉದ್ಘಾಟನೆ ಭಾಗ್ಯ ಕಂಡಿವೆ.

ಇಂದು ನಗರದ ಪ್ರಮುಖ 23 ವೃತ್ತಗಳಲ್ಲಿ ಪಿಪಿಪಿ ಮಾದರಿಯಲ್ಲಿ ನಿರ್ಮಿಸಿರುವ "ಹೈಟೆಕ್ ಪೊಲೀಸ್ ಚೌಕಿ(ಕಿಯೋಸ್ಕ್)"ಗಳನ್ನು ಉದ್ಘಾಟಿಸಲಾಯಿತು. ಮೇಯರ್ ಗೌತಮ್ ಕುಮಾರ್, ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಡ್ಸನ್ ವೃತ್ತದಲ್ಲಿ ಅಧಿಕೃತ ಚಾಲನೆ ನೀಡಿದರು.

ಹೈಟೆಕ್ ಪೊಲೀಸ್ ಚೌಕಿ ಉದ್ಘಾಟನೆ

ನಗರದ ಸಂಚಾರಿ ಪೊಲೀಸರಿಗೆ ಅನುಕೂಲವಾಗುವಂತೆ ಮೊದಲ ಹಂತದಲ್ಲಿ ಪ್ರಮುಖ 23 ಜಂಕ್ಷನ್ / ವೃತ್ತಗಳಲ್ಲಿ ಕಿಯೋಸ್ಕ್​​ಗಳನ್ನು ತೆರೆಯಲಾಗುತ್ತಿದೆ. ಗುರುತಿಸಿರುವ ಇನ್ನುಳಿದ ಪ್ರಮುಖ ಸ್ಥಳಗಳಲ್ಲಿ ಹಂತ ಹಂತವಾಗಿ ಕಿಯೋಸ್ಕ್​​ಗಳನ್ನು ನಿರ್ಮಿಸಲಾಗುವುದು ಎಂದು ಮೇಯರ್ ತಿಳಿಸಿದರು.

ಚೌಕಿಯ ಸೌಲಭ್ಯಗಳು ಮಳೆ, ಬಿಸಿಲು ಮತ್ತು ಧೂಳಿನಿಂದ ಬಚಾವಾಗಿ ಟ್ರಾಫಿಕ್‌ ಪೊಲೀಸರು ನೆಮ್ಮದಿಯಿಂದ ಕೆಲಸ ಮಾಡುವ ವಾತಾವರಣ ಕಲ್ಪಿಸಲಾಗುತ್ತಿದೆ.

  • ಬಿಬಿಎಂಪಿಯು ಪೊಲೀಸ್ ಇಲಾಖೆಯ ಜೊತೆ ಚರ್ಚಿಸಿ PPP ಮಾದರಿಯಲ್ಲಿ 340 ಸ್ಥಳಗಳಲ್ಲಿ ಕಿಯೋಸ್ಕ್​​ ಅಳವಡಿಸಲು ಯೋಜನೆ ರೂಪಿಸಿದೆ.
  • 20 ವರ್ಷಗಳ ಜಾಹೀರಾತು ಗುತ್ತಿಗೆ ಆಧಾರದ ಮೇಲೆ ಹೈಟೆಕ್ ಪೊಲೀಸ್ ಚೌಕಿಗಳ ನಿರ್ಮಾಣ ಮಾಡಲಾಗಿದೆ.
  • ಹೈಟೆಕ್ ಕಿಯೋಸ್ಕ್​​ಗಳ ನಿರ್ಮಾಣದಿಂದ ಪಾಲಿಕೆಗೆ ನೆಲ ಬಾಡಿಗೆ ಹಾಗೂ ಜಾಹೀರಾತು ಮೂಲಕ ವಾರ್ಷಿಕ ಸುಮಾರು 20 ಲಕ್ಷ ರೂ. ಆದಾಯ ಬರುವ ಅಂದಾಜು.
  • ಇಂದು ಹಡ್ಸನ್ ವೃತ್ತ, ಟ್ರಿನಿಟಿ ವೃತ್ತ, ಶಾಂತಿನಗರ ಜಂಕ್ಷನ್, ಪೊಲೀಸ್ ಕಾರ್ನರ್, ಮೇಖ್ರಿ ವೃತ್ತ ಸೇರಿದಂತೆ ಪ್ರಮುಖ 23 ಕಡೆ ಚಾಲನೆ.
  • ಒಂದು ಚೌಕಿಗೆ ಅಂದಾಜು 8 ಲಕ್ಷ ರೂ. ಖರ್ಚು ಮಾಡಲಾಗಿದೆ.
  • ಚೌಕಿಗಳಲ್ಲಿ ಸಂಚಾರಿ ಪೊಲೀಸರಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಬೆಂಕಿ ನಂದಿಸುವ ಉಪಕರಣ, ಫ್ಯಾನ್, ವಾಕಿಟಾಕಿ, ಧ್ವನಿವರ್ಧಕ, ಗಾಳಿ ಶುದ್ಧೀಕರಿಸುವ ಯಂತ್ರ, ಕುರ್ಚಿ, ಟೇಬಲ್‌, ಎಕ್ಸಾಸ್ಟ್‌ ಫ್ಯಾನ್‌, ಸಾರ್ವಜನಿಕರ ಕುಂದು ಕೊರತೆ ಪರಿಶೀಲನಾ ಬಾಕ್ಸ್‌, ಕುಡಿಯುವ ನೀರಿನ ಬಾಟಲ್, ಮೊಬೈಲ್‌ ಚಾರ್ಜಿಂಗ್‌ ಪಾಯಿಂಟ್‌, ಎಲ್‌ಇಡಿ ಸ್ಕ್ರೀನ್‌, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.